Sunday, 24 Jan, 12.35 pm Kannada News Now

ವಿಶ್ವ
ಮಾಡರ್ನಾ ಕೊರೋನಾ ವೈರಸ್ ಲಸಿಕೆ ಪಡೆದವರಲ್ಲಿ ಗಂಭೀರ ಅಲರ್ಜಿ ಪ್ರಕ್ರಿಯೆ ಸಾಧ್ಯತೆ ಕಡಿಮೆ : ಸಂಶೋಧನಾ ವರದಿ ಮಾಹಿತಿ

ನವದೆಹಲಿ : ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಬಿಡುಗಡೆ ಮಾಡಿರುವ ಹೊಸ ದತ್ತಾಂಶವು, ಕೊರೊನಾವೈರಸ್ ಸೋಂಕಿನ ವಿರುದ್ಧ ಮಾಡರ್ನಾ ಲಸಿಕೆಯು ಅಲರ್ಜಿ ಪ್ರತಿಕ್ರಿಯೆಗಳನ್ನು ಉಂಟುಮಾಡುವ ಸಾಧ್ಯತೆ ತುಂಬಾನೇ ಕಡಿಮೆ ಎಂದು ತಿಳಿಸಿದೆ.

ಡಿಸೆಂಬರ್ 21, 2020 ರಿಂದ ಜನವರಿ 10, 2021 ರವರೆಗೆ 4.04 ಮಿಲಿಯನ್ ಗಿಂತಲೂ ಹೆಚ್ಚು ಜನರಿಗೆ ಮೋಡಾರ್ನ ಕರೋನಾವೈರಸ್ ಲಸಿಕೆಯನ್ನು ನೀಡಲಾಗಿದೆ, ಆದರೆ ಇದುವರೆಗೆ ಕೇವಲ 10 ಜನರಿಗೆ ಮಾತ್ರ ಅನಾಫಿಲಾಕ್ಸಿಸ್ ಎಂಬ ಮಾರಣಾಂತಿಕ ಅಲರ್ಜಿಯ ಪ್ರತಿಕ್ರಿಯೆ ಕಂಡು ಬಂದಿದೆ.

ಅನಾಫಿಲಾಕ್ಸಿಸ್ ಎಂಬುದು ಮಾರಣಾಂತಿಕ ಅಲರ್ಜಿಯ ಪ್ರತಿಕ್ರಿಯೆಯಾಗಿದ್ದು, ಲಸಿಕೆಯ ನಂತರ ಅಪರೂಪವಾಗಿ ಕಾಣಿಸಿಕೊಳ್ಳುತ್ತದೆ, ಇದು ಸಾಮಾನ್ಯವಾಗಿ ನಿಮಿಷಗಳಿಂದ ಗಂಟೆಗಳವರೆಗೆ ಇರುತ್ತದೆ.

'ಈ ಆರಂಭಿಕ ಮೇಲ್ವಿಚಾರಣೆಯ ಆಧಾರದ ಮೇಲೆ, ಮಾಡರ್ನಾ ಕೋವಿಡ್-19 ಲಸಿಕೆಯನ್ನು ಸ್ವೀಕರಿಸಿದ ನಂತರ ಅನಾಫಿಲಾಕ್ಸಿಸ್ ಒಂದು ಅಪರೂಪದ ಘಟನೆಯಾಗಿ ಕಂಡುಬರುತ್ತದೆ' ಎಂದು ಲೇಖಕರು ವರದಿಯಲ್ಲಿ ತಿಳಿಸಿದ್ದಾರೆ.

ಜನವರಿ ಅಂತ್ಯಕ್ಕೆ ಮತ್ತೆ 3 ರಫೆಲ್ ಭಾರತಕ್ಕೆ ಆಗಮನ ಸಾಧ್ಯತೆ

ತೀವ್ರ ಅಲರ್ಜಿಗೆ ಕಾರಣವೇನೆಂದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಈ ಹಿಂದೆ ತಿಳಿದಿರುವ ಅಲರ್ಜಿಗಳ ರೋಗಿಗಳಲ್ಲಿ 10 ಪ್ರಕರಣಗಳಲ್ಲಿ ಒಂಬತ್ತು ಪ್ರಕರಣಗಳು ಸಂಭವಿಸಿವೆ. ಈ ಪೈಕಿ ಐದು ಮಂದಿ ಈ ಹಿಂದೆ ಅನಾಫಿಲಾಕ್ಸಿಸ್ ಹೊಂದಿದ್ದರು. ಹೆಚ್ಚಿನವರಿಗೆ ವಿವಿಧ ಔಷಧಿಗಳ ಅಲರ್ಜಿಗಳು ಕಂಡುಬಂದಿತ್ತು.

ತೀವ್ರ ಅಲರ್ಜಿಯ ಪ್ರತಿಕ್ರಿಯೆಗಳನ್ನು ತೋರಿಸಿದ 10 ರೋಗಿಗಳಲ್ಲಿ ಒಂಬತ್ತು ರೋಗಲಕ್ಷಣಗಳಾದ ವಾಂತಿ, ವಾಕರಿಕೆ, ಉಬ್ಬಸ, ನಾಲಿಗೆ ಊದಿಕೊಳ್ಳುವುದು ಮತ್ತು ದದ್ದುಗಳಂತಹ ರೋಗಲಕ್ಷಣಗಳನ್ನು ಮಾಡರ್ನಾ ಕೊರೊನಾವೈರಸ್ ಲಸಿಕೆಯನ್ನು ಪಡೆದ 13 ನಿಮಿಷಗಳಲ್ಲಿ ಕಾಣಿಸಿಕಕೊಂಡಿದೆ. ಲಸಿಕೆ ಪಡೆದ 45 ನಿಮಿಷಗಳಲ್ಲಿ ಒಬ್ಬ ಸ್ವಯಂಸೇವಕ ರೋಗಲಕ್ಷಣಗಳನ್ನು ಬೆಳೆಸಿಕೊಂಡನು.

ತೀವ್ರ ಅಲರ್ಜಿಯ ಪ್ರತಿಕ್ರಿಯೆಗಳನ್ನು ತೋರಿದ ಎಲ್ಲಾ 10 ಸ್ವಯಂಸೇವಕರಿಗೆ ಎಪಿನೆಫ್ರಿನ್ ನಿಂದ ಚಿಕಿತ್ಸೆ ನೀಡಲಾಯಿತು. ಎಲ್ಲಾ ರೋಗಿಗಳು ನಂತರ ಚೇತರಿಸಿಕೊಂಡರು ಎಂದು ವರದಿ ತಿಳಿಸಿದೆ.

ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್‌ ಸೇರಿಕೊಳ್ಳಿ
https://bit.ly/367sVuW







Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top