Sunday, 11 Apr, 9.26 pm Kannada News Now

ಭಾರತ
ಮಹಾರಾಷ್ಟ್ರದಲ್ಲಿ ಕೊರೊನಾ ರಣಕೇಕೆ : 24 ಗಂಟೆಯಲ್ಲಿ ಬರೋಬ್ಬರಿ 63,294 ಕೇಸ್ ಪತ್ತೆ, 349 ಮಂದಿ ಸಾವು

ಡಿಜಿಟಲ್ ಡೆಸ್ಕ್ : ದೇಶದಲ್ಲಿ ಕೊರೊನಾ ಸೋಂಕಿನ ಅಟ್ಟಹಾಸ ಮುಂದುವರೆದಿದ್ದು, ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ ಅತಿ ಹೆಚ್ಚು 63,294 ಹೊಸ ಕೋವಿಡ್ -19 ಪ್ರಕರಣ ವರದಿಯಾಗಿದೆ.

ಹೌದು, ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯದ ಜನತೆ ತೀವ್ರ ಆತಂಕದಲ್ಲಿದೆ. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಇದು ಒಂದು ದಿನದ ಗರಿಷ್ಠ ಮಟ್ಟದಲ್ಲಿ ಸೋಂಕಿನ ಪ್ರಕರಣಗಳು ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಅತಿ ಹೆಚ್ಚು 63,294 ಹೊಸ ಕೋವಿಡ್ -19 ಪ್ರಕರಣ ದಾಖಲಾಗಿದ್ರೆ, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 349 ಕರೋನವೈರಸ್ ರೋಗಿಗಳು ಸಾವನ್ನಪ್ಪಿದ್ದಾರೆ.ಕೊರೊನಾ ಕೇಸ್-ಮಾರಣಾಂತಿಕ ಅನುಪಾತವು ರಾಜ್ಯದಲ್ಲಿ ಶೇಕಡಾ 1.7 ರಷ್ಟಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಮಾಹಿತಿ ನೀಡಿದೆ.





Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top