Dailyhunt
Maharashtra flood: ಪ್ರವಾಹದಲ್ಲಿ ಸಿಲುಕಿದ್ದ ನಾಯಿಯನ್ನು ರಕ್ಷಿಸಿದ NDRF

Maharashtra flood: ಪ್ರವಾಹದಲ್ಲಿ ಸಿಲುಕಿದ್ದ ನಾಯಿಯನ್ನು ರಕ್ಷಿಸಿದ NDRF

Kannada News Now 4 years ago

ಮುಂಬೈ:ಪ್ರವಾಹಕ್ಕೆ ಸಿಲುಕಿರುವ ಮಹಾರಾಷ್ಟ್ರದ(Maharashtra flood) ಹೋಟೆಲ್‌ನ ಮೇಲ್ಛಾವಣಿಯಿಂದ ನಾಯಿಯನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ಸಿಬ್ಬಂದಿ ರಕ್ಷಿಸುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಹೊಸ ಕರೆನ್ಸಿ ನೋಟುಗಳ ಮುದ್ರಣದ ಬಗ್ಗೆ Union finance minister ನಿರ್ಮಲ ಸೀತರಾಮನ್ ಹೇಳಿದ್ದೇನು?

ಆರಂಭದಲ್ಲಿ ಸುದ್ದಿ ಸಂಸ್ಥೆ ಎಎನ್‌ಐ (ANI)ಹಂಚಿಕೊಂಡಿರುವ ಈ ವಿಡಿಯೋದಲ್ಲಿ ನಾಯಿಯನ್ನು ಸುರಕ್ಷಿತವಾಗಿ ತರಲು ತಮ್ಮ ಸದಸ್ಯರೊಬ್ಬರು ಮೇಲ್ಛಾವಣಿಯ ಮೇಲೆ ಹತ್ತಿದ್ದಾರೆ. ತೆಪ್ಪದಲ್ಲಿ ಕಾಯುತ್ತಿರುವ ಅಧಿಕಾರಿಗಳ ಕೈಗೆ ಅವರು ನಾಯಿಯನ್ನು ನಿಧಾನವಾಗಿ ತಂದು ಕೊಡುತ್ತಾರೆ .ನಂತರ ನಾಯಿಯನ್ನು ತೆಪ್ಪದ ಮೇಲೆ ಕೂರಿಸುಕೊಂಡು ಸುರಕ್ಷಿತ ಸ್ಥಳಕ್ಕೆ ಬಿಡುತ್ತಾರೆ.

ಪ್ರವಾಹ ಪೀಡಿತ ಕೊಲ್ಹಾಪುರ ಜಿಲ್ಲೆಯ ಶಿರೋಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಯಡಿಯೂರಪ್ಪ ಪದತ್ಯಾಗ: ತವರು ಕ್ಷೇತ್ರ ಶಿಕಾರಿಪುರದಲ್ಲಿ ಅಘೋಷಿತ ಬಂದ್

ವೀಡಿಯೊವನ್ನು ನೋಡಿದ ಅನೇಕರು ndrf ಪ್ರಯತ್ನವನ್ನು, ಸಿಬ್ಬಂದಿಯನ್ನು ಶ್ಲಾಘಿಸಿದರು. ಮಹಾರಾಷ್ಟ್ರ ಪ್ರವಾಹದಲ್ಲಿ ಸಾವಿನ ಸಂಖ್ಯೆ ಸೋಮವಾರ 149 ಕ್ಕೆ ಏರಿತು.ಸುಮಾರು 100 ಜನರು ಕಾಣೆಯಾಗಿದ್ದಾರೆ.ಪಾರುಗಾಣಿಕಾ ತಂಡಗಳು(NDRF) ಹೆಚ್ಚಿನ ಶವಗಳನ್ನು ಹುಡುಕುತ್ತಿರುವುದರಿಂದ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ವಿಶೇಷವಾಗಿ ರಾಯಗಡ್ ಜಿಲ್ಲೆಯ ಮಹಾದ್ ತಾಲ್ಲೂಕಿನಲ್ಲಿನ ಭೂಕುಸಿತ ಹೆಚ್ಚು ಉಂಟಾಗಿದೆ.

ಏತನ್ಮಧ್ಯೆ, ಕೊಂಕಣ ಪ್ರದೇಶದ ರತ್ನಾಗಿರಿ ಜಿಲ್ಲೆಯ ಪ್ರವಾಹ ಪೀಡಿತ ಚಿಪ್ಲುನ್ ಪ್ರವಾಸಕ್ಕೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಜ್ಜಾಗಿದ್ದಾರೆ. ಶೀಘ್ರದಲ್ಲೇ ಪರಿಹಾರ ಪ್ಯಾಕೇಜ್ ಘೋಷಿಸಲಾಗುವುದು ಎಂದರು.



Dailyhunt
Disclaimer: This content has not been generated, created or edited by Dailyhunt. Publisher: Kannada News Now