ಭಾರತ
ಮಹಿಳೆಯರು ಆರೋಗ್ಯದಿಂದಿರಲು ಪ್ರತಿದಿನ ಈ ಆಹಾರಗಳನ್ನು ಸೇವಿಸಬೇಕು

ಸ್ಪೆಷಲ್ ಡೆಸ್ಕ್ : ಮಹಿಳೆಯರಲ್ಲಿ ಹೆಚ್ಚಾಗಿ ದೇಹದ ಹಲವು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವುಗಳು ಪ್ರಮುಖವಾಗಿ ಅಸಮತೋಲನದಿಂದ ಕೂಡಿದ ಆಹಾರ ಪದ್ಧತಿಯಿಂದಾಗಿರುತ್ತವೆ. ಹೀಗಾಗಿ ಎಲ್ಲ ವಯೋಮಾನದ ಮಹಿಳೆಯರು ತಮ್ಮ ದಿನನಿತ್ಯದ ಆಹಾರದಲ್ಲಿ ಹೊಂದಿರಲೇಬೇಕಾದ ಕೆಲವೊಂದು ಅಂಶಗಳನ್ನು ಇಲ್ಲಿ ಕೊಡಲಾಗಿದೆ.
ಮಹಿಳೆಯರು ಹಾಲು ಮತ್ತು ಮೊಸರನ್ನು ಹೆಚ್ಚು ಸೇವಿಸಬೇಕು. ದಿನಕ್ಕೆ ಕನಿಷ್ಠ 1000 ಮಿಲಿ ಗ್ರಾಂ ಕ್ಯಾಲ್ಸಿಯಂ ಮಹಿಳೆಯರಿಗೆ ಅಗತ್ಯವಿದೆ.
ಅನೇಕ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಾರೆ. ಇದಕ್ಕೆ ಕಾರಣ ಕಬ್ಣಿಣಾಂಶದ ಕೊರತೆ. ಆದ್ದರಿಂದ ದಿನನಿತ್ಯದ ಆಹಾರದಲ್ಲಿ ಬೇಳೆ ಕಾಳುಗಳನ್ನು ಅಗತ್ಯವಾಗಿ ಸೇವಿಸಬೇಕು. ಆಹಾರದಲ್ಲಿ ಇವುಗಳ ಪ್ರಮಾಣ ಕನಿಷ್ಠ ಶೇ. 30 ರಷ್ಟಾದರೂ ಇರುವಂತೆ ನೋಡಿಕೊಳ್ಳಬೇಕು.
ಇರಾಕ್ ವಾಯು ನೆಲೆ ಮೇಲೆ ಅಮೇರಿಕಾ ಮಿತ್ರ ಪಕ್ಷಗಳಿಂದ ರಾಕೆಟ್ ದಾಳಿ
ಆರೋಗ್ಯಪೂರ್ಣ ತ್ವಚೆಗಾಗಿ ವಿಟಮಿನ್ ಸಿ ಅತ್ಯಗತ್ಯ. ಇದಕ್ಕಾಗಿ ಕಿತ್ತಳೆ ಮತ್ತು ಪೇರಳೆ ಹಣ್ಣುಗಳನ್ನು ಸೇವಿಸಿ.
ಬಾಳೆಹಣ್ಣಿನಲ್ಲಿನಲ್ಲಿರುವ ಪೊಟಾಷಿಯಂ ರಕ್ತದೊತ್ತಡವನ್ನು ಹತೋಟಿಯಲ್ಲಿಡುತ್ತದೆ. ಆಲೂಗಡ್ಡೆಯಲ್ಲಿರುವ ಸ್ಟ್ರಾಚ್ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸುತ್ತದೆ.
ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಕೆ, ಕ್ಯಾಲ್ಷಿಯಂ ಹಾಗೂ ಮೆಗ್ನೀಷಿಯಂ ಅಧಿಕವಾಗಿದ್ದು, ದಿನನಿತ್ಯ ಒಂದು ಕಪ್ ಪಾಲಕ್ ರಸ ಕುಡಿದರೆ ಮೂಳೆಗಳು ಸದೃಢಗೊಳ್ಳುತ್ತವೆ.
ಪ್ರತಿ ನಿತ್ಯ 30 ಗ್ರಾಮ್ ಕಂದು ಚಾಕ್ಲೇಟ್ ತಿಂದರೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.
ಶೂಟಿಂಗ್ ಅಭ್ಯಾಸದ ವೇಳೆ ಗುಂಡು ತಗುಲಿ ಯೋಧ ಸಾವು
ದೇಹಕ್ಕೆ ಪ್ರತಿನಿತ್ಯ 1 ಗ್ರಾಂ ಓಮೆಗಾ-3 ಫ್ಯಾಟಿ ಆಸಿಡ್ ಬೇಕು. ಮೀನು ಹಾಗೂ ಡ್ರೈಫ್ರೂಟ್‌ಗಳಲ್ಲಿ ಈ ಅಂಶ ಹೆಚ್ಚಿರುತ್ತದೆ. ಇವುಗಳನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಹೃದಯಾಘಾತ ಹಾಗೂ ಪಾರ್ಶ್ವವಾಯುನಿಂದ ದೂರವಿರಬಹುದು.
ಅಣಬೆ ಸೇವಿಸುವುದರಿಂದ ಸ್ತನ ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ.
ಕೆಂಪು, ಹಳದಿ ಹಾಗೂ ಕಿತ್ತಳೆ ಬಣ್ಣದ ಕ್ಯಾಪ್ಸಿಕಂ ಸೇವನೆಯಿಂದ ಸ್ನಾಯುಗಳು ಆರೋಗ್ಯವಾಗಿರುತ್ತವೆ