Wednesday, 16 Sep, 8.34 pm Kannada News Now

ಭಾರತ
ಮಳ್ಳಿಯಂತೆ ಮಾತನಾಡಿ ಬರೋಬ್ಬರಿ 1.24 ಕೋಟಿ ಕನ್ನಾ ಹಾಕಿದ ಕಳ್ಳಿ..!

ಡಿಜಿಟಲ್‌ ಡೆಸ್ಕ್‌: 60 ವರ್ಷದ ವ್ಯಕ್ತಿಯೊಬ್ಬರನ್ನ ವಂಚಕಿಯೊಬ್ಬಳು ಸಲೀಸಾಗಿ ವಂಚಿಸಿ 1.24 ಕೋಟಿ ರೂಗಳನ್ನ ದೋಕಾ ಮಾಡಿದ ಘಟನೆ ಗುರುಗ್ರಾಮ್‌ದಲ್ಲಿ ನಡೆದಿದೆ.

ತಾನು ಅಮೆರಿಕ ಸೈನ್ಯದ ಭಯೋತ್ಪಾದನಾ ವಿರೋಧಿ ವಿಭಾಗದ ಅಧಿಕಾರಿಯೆಂದು ನಂಬಿಸಿದ ಮಳ್ಳಿ, ಚಕ್ಕರ್‌ಪುರ ಗ್ರಾಮದ ಮಾರುತಿ ವಿಹಾರ್​ನ ನಿವಾಸಿಯಾಗಿರುವ ಧೀರೇಂದ್ರ ಕುಮಾರ್ ಎನ್ನುವವರನ್ನ ಮೋಸ ಮಾಡಿದ್ದಾಳೆ.

ನಾನು ಭಾರತದಲ್ಲಿ ಔಷಧ ಕಂಪನಿಯನ್ನ ತೆರೆಯಲು ಇಚ್ಛಿಸಿದ್ದೇನೆ. ನೀವು ಕೂಡ ನನ್ನ ಜೊತೆ ಸೇರಿ ಎನ್ನತ್ತಾ, 7.8 ಮಿಲಿಯನ್ ಡಾಲರ್​ಗಳನ್ನು ನನಗೆ ಕಳುಹಿಸುವುದಾಗಿ ಹೇಳಿದ್ದಳು ಎಂದು ಧಿರೇಂದ್ರ ಕುಮಾರ್ ತಿಳಿಸಿದ್ದಾರೆ. ನಂತರ, ಜೂನ್ 19 ರಿಂದ ಜುಲೈ 17 ರವರೆಗೆ ಕಸ್ಟಮ್ಸ್ ಅಧಿಕಾರಿಯೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಧಿರೇಂದ್ರ ಕುಮಾರ್​ಗೆ ಕರೆ ಮಾಡಿ ನಾನು ಅಮೆರಿಕದಿಂದ ಪಾರ್ಸಲ್ ಬಾಕ್ಸ್​ ಒಂದನ್ನು ಪಡೆದುಕೊಂಡಿದ್ದೇನೆ ಮತ್ತು ಅದನ್ನು ಪಡೆಯಲು ನೀವು ಹಣವನ್ನು ಠೇವಣಿ ಇಡಬೇಕು ಎಂದು ಹೇಳಿದ್ದಾನೆ. ಅದ್ರಂತೆ, ಧಿರೇಂದ್ರ ಕುಮಾರ್ ನಂತರ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಅಷ್ಟೂ ಹಣವನ್ನ ಜಮಾ ಮಾಡಿದ್ದಾರೆ. ಹಣ ತಲುಪಿದ ನಂತರ ಸಂಬಂಧಪಟ್ಟವರಿಂದ ಯಾವುದೆ ಕರೆ ಬಾರದಿದ್ದಾಗ ಧೀರೇಂದ್ರ ಕುಮಾರ್​ಗೆ ತಾನು ಮೋಸ ಹೋಗಿರುವುದು ಅರಿವಿಗೆ ಬಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಾಪಾ ಮಳ್ಳಿಯಂತೆ ಮಾತನಾಡಿದ ಮೋಸಗಾತಿಯ ಬಲೆಗೆ ಬಿದ್ದ ಧಿರೇಂದ್ರ 1.24 ಕೋಟಿ ಕಳೆದುಕೊಂಡು ಕಂಗಲಾಗಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top