Dailyhunt Logo
  • Light mode
    Follow system
    Dark mode
    • Play Story
    • App Story
ಮನ್ ಮುಲ್ ಹಾಲಿನ ಪುಡಿ ಕಲಬೆರಕೆ ಪ್ರಕರಣ : ಇಬ್ಬರು ಅಧಿಕಾರಿಗಳ ತಲೆದಂಡ

ಮನ್ ಮುಲ್ ಹಾಲಿನ ಪುಡಿ ಕಲಬೆರಕೆ ಪ್ರಕರಣ : ಇಬ್ಬರು ಅಧಿಕಾರಿಗಳ ತಲೆದಂಡ

Kannada News Now 2 weeks ago

ಮಂಡ್ಯ : ಮದ್ದೂರು ತಾಲೂಕಿನ ಗೆಜ್ಜಲಗೆರೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಮನ್ಮುಲ ಹಾಲಿನ ಪುಡಿ ಕಲಬೆರಕೆ, ಮತ್ತು ಅಕ್ರಮ ಮಾರಾಟ ಸಂಬಂಧ ಒಕ್ಕೂಟದ ಇಬ್ಬರು ಅಧಿಕಾರಿಗಳ ಅಮಾನತ್ತು ಮಾಡಿ ಸಹಕಾರ ಸಂಘಗಳ ನಿಬಂಧಕರು,ಕೆ.ಎಂಎಫ್ ಆಡಳಿತ ಅಧಿಕಾರಿ ಡಾ.ವಿ. ಎಮ್.

ವೆಂಕಟೇಶ್ ತಪ್ಪಿತಸ್ಥ ಅದಿಕಾರಿಗಳ ಅಮಾನತ್ತಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಒಕ್ಕೂಟದ ಉಪ ವ್ಯವಸ್ಥಾಪಕ ಡೇರಿ ಗುಣ ಭರವಸೆ ಟಿ. ರಾಮಕೃಷ್ಣಪ್ಪ ಮತ್ತುಖರೀದಿ ಅಧಿಕಾರಿ ಪ್ರದೀಪ್ ಕುಮಾರ್ ಜಾದವ್ ಅವರುಗಳನ್ನು ಅಮಾನತ್ತು ಮಾಡಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎಚ್. ಆರ್. ರಘು ಆದೇಶ ಹೊರಡಿಸಿದ್ದಾರೆ.

ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಸಂಸ್ಥೆಗೆ ಸೇರಿದ ಎರಡು ಗೋಧಾಮ ಗಳನ್ನು ಬಾಡಿಗೆ ಪಡೆದು ಹೆಚ್ಚುವರಿ ಹಾಲಿನ ಪುಡಿಯನ್ನು ದಾಸ್ತಾನು ಮಾಡಲಾಗಿತ್ತು . ಒಕ್ಕೂಟದ ಅಧಿಕಾರಿಗಳು ಗೋದಾಮುಗಳಿಂದ ಹಾಲಿನ ಪುಡಿ ದಾಸ್ತಾನು ಹಿಂಪಡೆಯಲು ಹೋದಾಗ ಸುಮಾರು 54 ಟನ್ ಹಾಲಿನ ಪುಡಿ ಕಡಿಮೆ ಇತ್ತು. ಮತ್ತು ಕಲಬೆರಕೆ ಆಗಿರುವುದು ಬೆಳಕಿಗೆ ಬಂದಿತ್ತು. ನಂತರ ಒಕ್ಕೂಟದ ಅಧಿಕಾರಿಗಳು ಮದ್ದೂರು ಪೊಲೀಸರಿಗೆ ದೂರು ನೀಡಿದ್ದರು. ಆನಂತರ ಆಹಾರ ಸಂರಕ್ಷಣೆ ಮತ್ತು ಔಷಧ ಆಡಳಿತ ಹಾಲಿನ ಇಲಾಖೆ ಮಂಡ್ಯ ಜಿಲ್ಲಾ ಅಂಕಿತ ಅಧಿಕಾರಿ ನೇತೃತ್ವದ ತಂಡ ಮನ್ಮುಲ ಹಾಗೂ ಮೆ. ಮಾಸ್ಟರ್ ಇಲ್ಯೂಷನ್ ಸಂಸ್ಥೆ ಎರಡು ಗೋಧಾಮಗಳ ಮೇಲೆ ದಾಳಿ ನಡೆಸಿ ಸಂಗ್ರಹಿಸಿದ ಹಾಲಿನ ಪುಡಿ ಸ್ಯಾಂಪಲ್ಗಳನ್ನು ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಿದಾಗ ಕಲಬೆರಕೆಯಾಗಿರುವುದು ಧೃಡಪಟ್ಟಿತ್ತು.

ಹಗರಣದಲ್ಲಿ ಹಾಲಿನ ಪುಡಿಯ ಗುಣಮಟ್ಟ ಮತ್ತು ದಾಸ್ತಾನು ನಿರ್ವಹಣೆಯ ಅಧಿಕಾರಿ ರಾಮಕೃಷ್ಣಪ್ಪ, ಹಾಗೂ ಪ್ರದೀಪ್ ಕುಮಾರ್ ಜಾದವ್ ಅವರುಗಳು ಖಾಸಗಿ ಸಂಸ್ಥೆ ಮಾಲೀಕರೊಂದಿಗೆ ಶಾಮಿಲಾಗಿ ಕಳ್ಳತನದ ಮೂಲಕ ಹಾಲಿನಪುಡಿ ಮಾರಾಟ ಮಾಡಿರುವುದು ಅಲ್ಲದೆ ಅಕ್ರಮ ಮರೆಮಾಚಲು ಹಾಲಿನ ಪುಡಿಯನ್ನು ಕಲಬೆರಕೆ ಮಾಡಿರುವುದು ಜಿಲ್ಲಾ ಹಾಲು ಒಕ್ಕೂಟದ ಆಂತರಿಕ ತನಿಖೆಯಲ್ಲಿ ಸಾಬೀತಾಗಿತ್ತು.ಹಾಲಿನ ಪುಡಿ ಕಲಬೆರಕೆ ಮತ್ತು ಅಕ್ರಮ ಮಾರಾಟದಿಂದ ಕೆಎಂಎಫ್ ನ ನಂದಿನಿ ಬ್ರಾಂಡಿಗೆ ಕಳಂಕ ತಂದ ಪ್ರಕರಣದ ಬಗ್ಗೆಯೂ ಸಹ ಮೆ. ಮಾಸ್ಟರ್ ಇಲ್ಯೂಷನ್ ಗೋದಾಮಿನ ಮಾಲೀಕರ ಬಗ್ಗೆಯೂ ಮದ್ದೂರ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now