ಕರ್ನಾಟಕ
'ಮಂಜು-ದಿವ್ಯಾಳ' ರಂಗು ರಂಗಿನ ಒಟನಾಟ : ಮತ್ತೊಂದು 'ಪ್ರೇಮ ಪ್ರಸಂಗ' ಕ್ಕೆ ಸಾಕ್ಷಿಯಾಗಲಿದ್ಯಾ 'ಬಿಗ್ ಬಾಸ್' ಮನೆ.!

ಸಿನಿಮಾ ಡೆಸ್ಕ್ : 'ಬಿಗ್ ಬಾಸ್' ಕನ್ನಡ ಸೀಸನ್ 8 ಅದ್ದೂರಿಯಾಗಿ ಶುರುವಾಗಿದೆ. ಈ ಬಾರಿಯ ಶೋನಲ್ಲಿ ಸಾಕಷ್ಟು ವಿಶೇಷತೆಗಳು ಇವೆ. .
ಒಂದು ವಾರ ಕಳೆಯುವುದರೊಳಗೆ ಬಿಗ್ ಬಾಸ್ ಸ್ಪರ್ಧಿಗಳ ನಡುವಿನ ಒಡನಾಟ ನೋಡುಗರಿಗೆ ಖುಷಿ ಕೊಡುತ್ತಿದೆ. ಅದರಲ್ಲೂ ಪಾವಗಡ ಮಂಜು ಹಾಗೂ ದಿವ್ಯಾ ಸುರೇಶ್ ನಡುವಿನ ಅತಿಯಾದ ಆತ್ಮೀಯತೆ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.
ಮಂಜು ಮತ್ತು ದಿವ್ಯಾಳ ರಂಗು ರಂಗಿನ ಒಟನಾಟದ ಮೇಲೆ ಪ್ರೇಕ್ಷಕರ ಕಣ್ಣು ಬಿದ್ದಿದ್ದು, ಕಳೆದ ಸೀಸನ್ ನಂತೆಯೇ ಈ ಬಾರಿ ಕೂಡ ಬಿಗ್ ಬಾಸ್ ಮನೆ ಮತ್ತೊಂದು ಪ್ರೇಮಪ್ರಸಂಗಕ್ಕೆ ಸಾಕ್ಷಯಾಗಲಿದ್ಯಾ ಎಂಬ ಗುಸು ಗುಸು ಕೇಳಿಬರುತ್ತಿದೆ. . ಮತ್ತೊಂದು 'ಪ್ರೇಮ ಪ್ರಸಂಗ' ಕ್ಕೆ 'ಬಿಗ್ ಬಾಸ್' ಮನೆ ಸಾಕ್ಷಿಯಾಗಲಿದ್ಯಾ ಎಂಬ ಪ್ರಶ್ನೆ ಕಿರುತೆರೆ ಪ್ರೇಕ್ಷಕರಲ್ಲಿ ಮೂಡಿದೆ. ಅದೇನೆ ಇರಲಿ ಬಿಗ್ ಬಾಸ್ ಮನೆಯಲ್ಲಿ ಇವೆಲ್ಲಾ ಕಾಮನ್ ಬಿಡಿ.
ಈ ಬಾರಿ ಬಿಗ್ ಬಾಸ್ ಶೋ ನಲ್ಲಿ ಹಿರಿಯ ಶಂಕರ್ ಅಶ್ವತ್ಥ್, ನಟಿ ಚಂದ್ರಕಲಾ ಮೋಹನ್, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ರಘುಗೌಡ, ಬ್ರೋ ಗೌಡ, ಮಂಜು ಪಾವಗಡ, ಬೈಕ್ ರೇಸರ್ ಅರವಿಂದ್, ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ವೈಷ್ಣವಿ ಗೌಡ, ಗೀತಾ ಭಾರತಿ ಭಟ್, ಪ್ರಶಾಂತ್ ಸಂಬರಗಿ, ಕ್ರಿಕೆಟಿಗ ರಾಜೀವ್, ನಿರ್ಮಲಾ ಚೆನ್ನಪ್ಪ, ವಿಶ್ವನಾಥ್ ಹಾವೇರಿ, ಟಿಕ್ ಟಾಕ್ ಧನುಶ್ರೀ ಇದ್ದು, . ಇವರಲ್ಲಿ ಯಾರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗುತ್ತಾರೆ ಎಂಬ ಕುತೂಹಲ ವೀಕ್ಷಕರಲ್ಲಿದೆ.