Wednesday, 16 Sep, 8.37 pm Kannada News Now

ಹೋಮ್
ಮೇಕೆದಾಟು ಯೋಜನೆಗೆ ಆಗ್ರಹಿಸಿ ಸೆ. 26 ರಂದು ರಾಮನಗರದಲ್ಲಿ ಬೃಹತ್ ಪ್ರತಿಭಟನೆ

ರಾಮನಗರ : ಮೇಕೆದಾಟು ಯೋಜನೆಯನ್ನ ರಾಜ್ಯ ಬಿಜೆಪಿ ಸರ್ಕಾರ ಯಾವುದೇ ಕಾರಣಕ್ಕೂ ಮಾಡುವುದಿಲ್ಲ. ಸಿಎಂ ಯಡಿಯೂರಪ್ಪ ಅಂದ್ರೆ ಸುಳ್ಳು, ಸುಳ್ಳು ಅಂದ್ರೆ ಯಡಿಯೂರಪ್ಪ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

ಇಂದು ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಮಾತಾಡಿದ ವಾಟಾಳ್​​ ನಾಗರಾಜ್​​ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸುಮ್ಮನೇ ಬಂದು ತಿರುಗಾಡಿ ಹೋಗಿದ್ದಾರೆ ಅಷ್ಟೇ. ಹಾಗಾಗಿ ಯಾವುದೇ ಕಾರಣಕ್ಕೂ ಈ ಸರ್ಕಾರದಲ್ಲಿ ಮೇಕೆದಾಟು ಯೋಜನೆ ಆಗಲ್ಲ, ಇದೇ ಸೆಪ್ಟೆಂಬರ್​​ 26ನೇ ತಾರೀಕಿನಂದು ರಾಮನಗರದಲ್ಲಿ ಬೃಹತ್ ಚಳುವಳಿ ಮಾಡಲಾಗುತ್ತದೆ. ಮೇಕೆದಾಟು ಯೋಜನೆ ಆಗಲೇಬೇಕೆಂದು ಒತ್ತಾಯಿಸಿ ಹೋರಾಟ ಮಾಡ್ತೇವೆ ಎಂದರು,

ತಮಿಳುನಾಡಿನ ಸಿಎಂ ಪಳನಿಸ್ವಾಮಿ ಅಧಿವೇಶನದಲ್ಲಿ ಮಾತನಾಡುತ್ತ ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಆಗಲು ಬಿಡಲ್ಲ ಎಂದಿದ್ದಾರೆ. ಆದರೆ ನಮ್ಮ ಯೋಜನೆಯ ಬಗ್ಗೆ ಮಾತನಾಡಲು ಅವರು ಯಾರು ಎಂದು ವಾಟಾಳ್ ಪ್ರಶ್ನೆ ಮಾಡಿದರು.

BIGG NEWS : ತಿರುಪತಿ ಸಂಸದ 'ಬಲ್ಲಿ ದುರ್ಗಾ ಪ್ರಸಾದ್'‌ ಇನ್ನಿಲ್ಲ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top