Tuesday, 03 Aug, 7.27 pm Kannada News Now

ಭಾರತ
ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿ ಬಿಡುಗಡೆ..! Wanted Terrorist List

ಡಿಜಿಟಲ್‌ ಡೆಸ್ಕ್:‌ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮೋಸ್ಟ್‌ ವಾಂಡೆಡ್‌ ಟಾಪ್‌ 10 ಭಯೋತ್ಪಾದಕರ ಪಟ್ಟಿಯನ್ನ ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯನ್ನ ಕಾಶ್ಮೀರ ವಲಯ ಪೊಲೀಸರು ಸೋಮವಾರ ರಾತ್ರಿ ಟ್ವಿಟರ್ʼನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಕೆಲವು ಸಮಯದಿಂದ ಸಕ್ರಿಯವಾಗಿರುವ ಏಳು ಭಯೋತ್ಪಾದಕರು ಮತ್ತು ತುಲನಾತ್ಮಕವಾಗಿ ಮೂವರು ಹೊಸ ಉಗ್ರರರನ್ನ ಒಳಗೊಂಡಿದೆ.

ಮಾರ್ಚ್ʼನಲ್ಲಿ, ಪೊಲೀಸರು ಇದೇ ರೀತಿಯ ವಾಂಟೆಡ್ ಭಯೋತ್ಪಾದಕರ ಪಟ್ಟಿಯನ್ನ ಬಿಡುಗಡೆ ಮಾಡಿದ್ರು ಮತ್ತು ಅವ್ರ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನವನ್ನ ಘೋಷಿಸಿದ್ದರು. ಇನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಮಾರ್ಚ್ 13ರ ಟ್ವೀಟ್ʼನಲ್ಲಿ ಭಯೋತ್ಪಾದಕರ ಹೆಸರುಗಳೊಂದಿಗೆ ಅವ್ರ ಛಾಯಾಚಿತ್ರಗಳೂ ಇತ್ತು.

ಏತನ್ಮಧ್ಯೆ, ಬಂಡಿಪೋರಾದ ಚಂದಾಜಿ ಪ್ರದೇಶದಲ್ಲಿ ಮಂಗಳವಾರ ಭದ್ರತಾ ಪಡೆಗಳೊಂದಿಗೆ ನಡೆದ ಎನ್ ಕೌಂಟರ್ʼನಲ್ಲಿ ಭಯೋತ್ಪಾದಕ ಬಾಬರ್ ಅಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

BIG NEWS: ಆದಾಯ ತೆರಿಗೆ ರಿಟರ್ನ್ ಗಡುವು ವಿಸ್ತರಣೆ

Karnataka Politics : ಸಿಎಂ ಸ್ಥಾನದಿಂದ ಯಡಿಯೂರಪ್ಪ ತೆಗದಿದ್ದು ವಯಸ್ಸಾಗಿದೆ ಎಂದಲ್ಲ, ಅಪ್ಪ-ಮಗ ಸೇರಿ ಲೂಟಿ ಮಾಡಿದಕ್ಕೆ - ಸಿದ್ಧರಾಮಯ್ಯ

ದೆಹಲಿ ಶಾಸಕರ ವೇತನ ಭತ್ಯೆ ಹೆಚ್ಚಿಸಿದ ಸರ್ಕಾರ: ತಿಂಗಳಿಗೆ ಎಷ್ಟು ಪಡೆಯುತ್ತಾರೆ ಗೊತ್ತೇ?

'ಜುಲೈ 23/24 ರಂದು ಶೋಕ್ ಬಾಬಾ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಇದರಲ್ಲಿ ಒಬ್ಬ ಪಾಕಿಸ್ತಾನಿ ಭಯೋತ್ಪಾದಕ ಸೇರಿದಂತೆ ಮೂವರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ. ಇನ್ನೊಬ್ಬ ಭಯೋತ್ಪಾದಕ ಕಾಡಿನಿಂದ ತಪ್ಪಿಸಿಕೊಂಡಿದ್ದ ಮತ್ತು ಅಂದಿನಿಂದ ಅವನನ್ನ ಪತ್ತೆ ಹಚ್ಚಲಾಗುತ್ತಿದೆ' ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ (DGP) ದಿಲ್ ಬಾಗ್ ಸಿಂಗ್ ಮಾಹಿತಿ ನೀಡಿದರು.

'ಕಳೆದ ರಾತ್ರಿ ಅವರು ಚಂದಾಜಿ ಗ್ರಾಮದಲ್ಲಿ ಇರುವ ಬಗ್ಗೆ ಮಾಹಿತಿ ಪಡೆಯಲಾಗಿದ್ದು, ಪಾಕಿಸ್ತಾನದ ಪಂಜಾಬ್ʼನ ಪಾಕಿಸ್ತಾನಿ ಭಯೋತ್ಪಾದಕ ಬಾಬರ್ ಅಲಿ ಹತ್ಯೆಯಾಗಿರುವ ಸಂದರ್ಭದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ' ಎಂದು ಡಿಜಿಪಿ ಹೇಳಿದರು.

ರಾಜ್ಯದ 'ಸರ್ಕಾರಿ ನೌಕರ'ರಿಗೆ ಬಿಗ್ ಶಾಕ್ : 'ತಹಶೀಲ್ದಾರ್ ಗ್ರೇಡ್' ವೃಂದದ ಹುದ್ದೆಗೆ ನಿಯೋಜಿಸದಂತೆ ಸರ್ಕಾರ ಆದೇಶ

BIG NEWS : ಯಡಿಯೂರಪ್ಪ, ಪುತ್ರ ವಿಜಯೇಂದ್ರಗೆ ಮತ್ತೆ ಸಂಕಷ್ಟ : ಭ್ರಷ್ಟಾಚಾರ ಪ್ರಕರಣದಲ್ಲಿ ಹೈಕೋರ್ಟ್ ನೋಟಿಸ್

Second PUC Exam : ದ್ವಿತೀಯ ಪಿಯುಸಿ ಫಲಿತಾಂಶ ತಿರಸ್ಕರಿಸಿದ 965 ವಿದ್ಯಾರ್ಥಿಗಳು : ಆಗಸ್ಟ್ 19 ಕ್ಕೆ ಪರೀಕ್ಷೆ



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top