Dailyhunt Logo
  • Light mode
    Follow system
    Dark mode
    • Play Story
    • App Story
ನಾಳೆ ಶಾಲಾ ಶಿಕ್ಷಕರ ಸಂಘಕ್ಕೆ ಚುನಾವಣೆ: ಸಾಗರದಲ್ಲಿ 'ಸ್ವಾಭಿಮಾನಿ ಶಿಕ್ಷಕರ ತಂಡ'ದಿಂದ ಭರ್ಜರಿ ಪ್ರಚಾರ, ಮತಯಾಚನೆ

ನಾಳೆ ಶಾಲಾ ಶಿಕ್ಷಕರ ಸಂಘಕ್ಕೆ ಚುನಾವಣೆ: ಸಾಗರದಲ್ಲಿ 'ಸ್ವಾಭಿಮಾನಿ ಶಿಕ್ಷಕರ ತಂಡ'ದಿಂದ ಭರ್ಜರಿ ಪ್ರಚಾರ, ಮತಯಾಚನೆ

Kannada News Now 1 month ago

ಶಿವಮೊಗ್ಗ: 2026 ರಿಂದ 2031ನೇ ಸಾಲಿನ ಅವಧಿಗಾಗಿ ನಡೆಯಲಿರುವ ಸಾಗರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿಯ ಚುನಾವಣೆಯು ಕಳೆಗಟ್ಟಿದೆ. ನಾಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ 'ಸ್ವಾಭಿಮಾನಿ ಶಿಕ್ಷಕರ ತಂಡ'ವು ತಾಲೂಕಿನಾದ್ಯಂತ ಸಂಚರಿಸಿ ಮತದಾರರ ಪ್ರಭುಗಳಾದ ಶಿಕ್ಷಕರನ್ನು ಭೇಟಿ ಮಾಡಿ ಬೆಂಬಲಿಸುವಂತೆ ಮನವಿ ಮಾಡಿದೆ.

ಈ ಕುರಿತು ತಂಡದ ಶಿಕ್ಷಕರಾದಂತ ದೇವೇಂದ್ರಪ್ಪ.ಕೆ ಅವರು ಮಾತನಾಡಿ, ತಮ್ಮ ತಂಡದ ಪ್ರಮುಖ ಅಂಶಗಳನ್ನು ಹಂಚಿಕೊಂಡರು :

ಚುನಾವಣಾ ದಿನಾಂಕ:

ಸಾಗರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಣಿ ಚುನಾವಣೆಯು ಮೇ 1, 2026ರ ನಾಳೆ ನಡೆಯಲಿದೆ.

ಸ್ವಾಭಿಮಾನಿ ಶಿಕ್ಷಕರ ತಂಡದ ಉದ್ದೇಶ ಮತ್ತು ಭರವಸೆಗಳು:

  • ಶಿಕ್ಷಕ ಸ್ನೇಹಿ ಕಾರ್ಯಕ್ರಮ: ಶಿಕ್ಷಕರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅನೇಕ ಶಿಕ್ಷಕ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

  • ಒತ್ತಡ ನಿವಾರಣೆ: ಪ್ರಸ್ತುತ ಶಿಕ್ಷಕರು ಬಿ.ಎಲ್.ಒ (BLO) ಕರ್ತವ್ಯ, ಗಣತಿ ಕಾರ್ಯ ಸೇರಿದಂತೆ ಇಲಾಖೆಯ ಕೆಲಸದ ಒತ್ತಡದಲ್ಲಿದ್ದಾರೆ. ವಿಶೇಷವಾಗಿ ನಿವೃತ್ತಿಯ ಅಂಚಿನಲ್ಲಿರುವವರು, ಅನಾರೋಗ್ಯ ಪೀಡಿತರು ಮತ್ತು ಸಣ್ಣ ಮಕ್ಕಳನ್ನು ಹೊಂದಿರುವ ಶಿಕ್ಷಕಿಯರ ಸಮಸ್ಯೆಗಳಿಗೆ ಸ್ಪಂದಿಸಿ, ಕೆಲಸದ ಒತ್ತಡದಿಂದ ವಿಮುಖಗೊಳಿಸಲು ಶ್ರಮಿಸುವುದಾಗಿ ತಂಡ ಭರವಸೆ ನೀಡಿದೆ.

  • ಸಮಸ್ಯೆಗಳ ಪರಿಹಾರ: ಯಾವುದೇ ಪ್ರಲೋಭನೆಗಳಿಗೆ ಒಳಗಾಗದೆ, ಇಲಾಖೆ ಹಾಗೂ ಮೇಲಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

ಈಗಾಗಲೇ ಮಾಡಲಾದ ಕಾರ್ಯಗಳು:

ತಂಡವು ಈಗಾಗಲೇ ಶಿಕ್ಷಕರ ಪರವಾಗಿ ಕೆಲಸ ಮಾಡುತ್ತಿದ್ದು, ರಾಜ್ಯ ಸರ್ಕಾರಿ ನೌಕರರ ಸಂಘದ ಮೂಲಕ ಸುಮಾರು 70 ಲಕ್ಷ ರೂಪಾಯಿಗೂ ಹೆಚ್ಚು ವೈದ್ಯಕೀಯ ಮರುಪಾವತಿ (Reimbursement) ಹಣವನ್ನು ಮಂಜೂರು ಮಾಡಿಸಿ, ಶಿಕ್ಷಕರ ಖಾತೆಗಳಿಗೆ ವರ್ಗಾವಣೆಯಾಗುವಂತೆ ಕ್ರಮ ಕೈಗೊಂಡಿರುವುದಾಗಿ ಶಿಕ್ಷಕ ದೇವೇಂದ್ರಪ್ಪ.ಕೆ ತಿಳಿಸಿದ್ದಾರೆ.

ಸಂಘಟನಾತ್ಮಕವಾಗಿ ಉತ್ತಮ ತಂಡವನ್ನು ಕಟ್ಟಿಕೊಂಡಿರುವ 'ಸ್ವಾಭಿಮಾನಿ ಶಿಕ್ಷಕರ ತಂಡ'ಕ್ಕೆ ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ಅಭೂತಪೂರ್ವ ಯಶಸ್ಸು ತಂದುಕೊಡಬೇಕು ಎಂದು ಸಮಸ್ತ ಶಿಕ್ಷಕ ವೃಂದದಲ್ಲಿ ತಂಡವು ವಿನಂತಿಸಿದ್ದಾರೆ.

ಸ್ವಾಭಿಮಾನಿ ಶಿಕ್ಷಕರ ತಂಡದಲ್ಲಿ

ಜಗನ್ನಾಥ್ ಕೆ. ಮತ್ತು ದೇವೇಂದ್ರಪ್ಪ ಕೆ. ಅವರ ಸಮರ್ಥ ಹಾಗೂ ಅನುಭವಿ ಮುಂದಾಳತ್ವದಲ್ಲಿ ಈ ಬಾರಿ "ಸ್ವಾಭಿಮಾನಿ ಶಿಕ್ಷಕ ಬಳಗ"ವು ಶಿಕ್ಷಕರ ಹಿತರಕ್ಷಣೆ ಮತ್ತು ಸಂಘಟನೆಯ ಆಶಯದೊಂದಿಗೆ ಮತದಾರರ ಮುಂದೆ ಬಂದಿದೆ. ಶಿಕ್ಷಕರ ವೃತ್ತಿ ಬದುಕಿನ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಸಂಘವನ್ನು ಮತ್ತಷ್ಟು ಕ್ರಿಯಾಶೀಲಗೊಳಿಸುವುದು ಈ ತಂಡದ ಪ್ರಮುಖ ಗುರಿಯಾಗಿದೆ.

ಆಯ್ಕೆ ನಿಮ್ಮದು - ಸೇವೆ ನಮ್ಮದು

ತಮ್ಮ ತಂಡವನ್ನು ಬೆಂಬಲಿಸುವಂತೆ ಕೋರುತ್ತಿರುವ 'ಸ್ವಾಭಿಮಾನಿ ಶಿಕ್ಷಕ ಬಳಗ'ವು "ಆಯ್ಕೆ ನಿಮ್ಮದು - ಸೇವೆ ನಮ್ಮದು" ಎಂಬ ಅರ್ಥಪೂರ್ಣ ಘೋಷವಾಕ್ಯದೊಂದಿಗೆ ಮತದಾರರ ವಿಶ್ವಾಸ ಗೆಲ್ಲಲು ಮುಂದಾಗಿದೆ. ಶಿಕ್ಷಕರ ಸಂಘದ ಈ ಚುನಾವಣೆಯು ಕೇವಲ ಒಂದು ಅಧಿಕಾರ ಹಂಚಿಕೆಯ ಪ್ರಕ್ರಿಯೆಯಾಗದೆ, ತಾಲೂಕಿನ ಶಿಕ್ಷಣ ಕ್ಷೇತ್ರದ ಭವಿಷ್ಯದ ದೃಷ್ಟಿಯಿಂದಲೂ ಅತ್ಯಂತ ಮಹತ್ವದ್ದಾಗಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

ನಿನ್ನೆ ಬೆಂಗಳೂರಲ್ಲಿ ಸುರಿದ ಭಾರೀ ಮಳೆಗೆ ಮುರಿದು ಬಿದ್ದ 461 ವಿದ್ಯುತ್ ಕಂಬ, 77 ಟ್ರಾನ್ಸ್ ಫಾರ್ಮರ್ ಹಾನಿ

GOOD NEWS: ರೈಲ್ವೆ ಪ್ರಯಾಣಿಕರ ಗಮನಕ್ಕೆ: ಯಶವಂತಪುರ-ತಾಳಗುಪ್ಪ ನಡುವೆ ವಿಶೇಷ ರೈಲು ಸಂಚಾರ

Dailyhunt
Disclaimer: This content has not been generated, created or edited by Dailyhunt. Publisher: Kannada News Now