Sunday, 22 Nov, 8.23 am Kannada News Now

ಭಾರತ
ನಾನು ರಾಜಕೀಯ ತೊರೆದು ಸಾಯುತ್ತೇನೆಯೇ ಹೊರತು ಬಿಜೆಪಿ ಸೇರುವುದಿಲ್ಲ : ಟಿಎಂಸಿ ಸಂಸದ ಸೌಗತ ರಾಯ್

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕನಿಷ್ಠ ಐದು ತೃಣಮೂಲ ಕಾಂಗ್ರೆಸ್ ಸಂಸದರು ತಮ್ಮ ಪಕ್ಷಕ್ಕೆ ರಜೀನಾಮೆ ಸಲ್ಲಿಸಿ, ಬಿಜೆಪಿ ಸೇರುತ್ತಾರೆ ಎಂದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಹೇಳಿಕೆಗೆ ಟಿಎಂಸಿ ಸಂಸದ ಸೌಗತ ರಾಯ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಸಂಸದ ಅರ್ಜುನ್ ಸಿಂಗ್ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿ ಟಿಎಂಸಿ ಪಕ್ಷದ ಅನುಭವಿ, ಸೌಗತ ರಾಯ್ ಮತ್ತು ಸುವೆಂದು ಅಧಿಕಾರಿಯಂತಹ ದೊಡ್ಡ ನಾಯಕರೇ ಸೇರಿ ಕನಿಷ್ಠ ಐದು ಟಿಎಂಸಿ ಸಂಸದರು ಯಾವುದೇ ಕ್ಷಣದಲ್ಲಿ ಆದರು ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಬಹುದು ಎಂದು ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ಸೌಗತ ರಾಯ್, ಇದೊಂದು ಬಿಜೆಪಿ ಪ್ರಚಾರದ ಕಲೆ. ಅರ್ಜುನ್ ಸಿಂಗ್ ಈ ರೀತಿ ಆರೋಪಿಸುವುದರಲ್ಲಿ ಪ್ರಸಿದ್ಧ ಬಾಹುಬಲಿ. ನಾನು ರಾಜಕೀಯವನ್ನು ತೊರೆದು ಸಾಯುತ್ತೇನೆ. ಆದರೆ, ಎಂದಿಗೂ ಬಿಜೆಪಿಗೆ ಸೇರುವುದಿಲ್ಲ. ನಾನು ಮಾರಾಟವಾಗುವ ಸರಕು ಅಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ.



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top