Dailyhunt Logo
  • Light mode
    Follow system
    Dark mode
    • Play Story
    • App Story
'ನನ್ನ ಪತ್ನಿಯನ್ನು ವಿಧವೆಯಂತೆ ಬದುಕಲು ಬಿಡುವುದಿಲ್ಲ:'ತಿಹಾರ್ ಜೈಲಿನಿಂದಲೇ ಹೆಂಡತಿಗೆ ವಿಚ್ಛೇದನ ನೀಡಲು ನಿರ್ಧರಿಸಿದ ಯಾಸಿನ್ ಮಲಿಕ್

'ನನ್ನ ಪತ್ನಿಯನ್ನು ವಿಧವೆಯಂತೆ ಬದುಕಲು ಬಿಡುವುದಿಲ್ಲ:'ತಿಹಾರ್ ಜೈಲಿನಿಂದಲೇ ಹೆಂಡತಿಗೆ ವಿಚ್ಛೇದನ ನೀಡಲು ನಿರ್ಧರಿಸಿದ ಯಾಸಿನ್ ಮಲಿಕ್

Kannada News Now 2 weeks ago

ಮ್ಮು ಮತ್ತು ಕಾಶ್ಮೀರದ ಭಯೋತ್ಪಾದನೆಗೆ ಧನಸಹಾಯ ನೀಡಿದ ಪ್ರಕರಣದಲ್ಲಿ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್, ತಮ್ಮ ಪತ್ನಿ ಮುಶಾಲ್ ಹುಸೇನ್ ಮಲಿಕ್ ಅವರಿಂದ ದೂರವಾಗಲು ನಿರ್ಧರಿಸಿದ್ದಾರೆ.

ಜಮ್ಮುವಿನ ತಡಾ (TADA)/ಪೋಟಾ (POTA) ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ 25 ಪುಟಗಳ ವೈಯಕ್ತಿಕ ಪ್ರಮಾಣಪತ್ರದಲ್ಲಿ ಈ ಆಘಾತಕಾರಿ ನಿರ್ಧಾರವನ್ನು ಅವರು ಬಹಿರಂಗಪಡಿಸಿದ್ದಾರೆ. ಕೊಲೆ ಪ್ರಕರಣವೊಂದರ ವಿಚಾರಣೆ ವೇಳೆ ಸಲ್ಲಿಸಲಾದ ಈ ಸುದೀರ್ಘ ಪತ್ರವು, ಮಲಿಕ್ ತಮ್ಮ ಅತ್ಯಂತ ಪ್ರೀತಿಯ ಮೂವರು ವ್ಯಕ್ತಿಗಳಾದ ತಾಯಿ, ಪತ್ನಿ ಮುಶಾಲ್ ಮತ್ತು 13 ವರ್ಷದ ಮಗಳು ರಜಿಯಾ ಸುಲ್ತಾನಾಗೆ ತಲುಪಿಸಿದ ಭಾವುಕ ಸಂದೇಶವಾಗಿದೆ.

ಕಳೆದ ಎಂಟು ವರ್ಷಗಳಿಂದ ಪತ್ನಿಯ ಧ್ವನಿಯನ್ನು ಕೇಳಲು ಅಥವಾ ವಿಡಿಯೋ ಕರೆ ಮೂಲಕ ಆಕೆಯನ್ನು ನೋಡಲು ತಮಗೆ ಅವಕಾಶ ಸಿಕ್ಕಿಲ್ಲ ಎಂಬುದನ್ನು ಈ ಪ್ರಮಾಣಪತ್ರದಲ್ಲಿ ಮಲಿಕ್ ಅತ್ಯಂತ ಬೇಸರದಿಂದ ಸ್ಮರಿಸಿದ್ದಾರೆ. ತಮ್ಮ ಈ ಕಠಿಣ ನಿರ್ಧಾರಕ್ಕೆ ಕಾರಣ ನೀಡುತ್ತಾ, "ಮುಶಾಲ್ ತನ್ನಳಿದ ಜೀವನವನ್ನು ಈ ಅನಿಶ್ಚಿತತೆಯ ಬಾರದಲ್ಲಿ ಅಥವಾ ವಿಧವೆಯಂತೆ ಕಳೆಯುವುದು ನನಗಿಷ್ಟವಿಲ್ಲ. ಆಕೆ ತನ್ನ ಜೀವನದ ಹೊಸ ಅಧ್ಯಾಯವನ್ನು ಗೌರವ ಮತ್ತು ಭರವಸೆಯಿಂದ ಪ್ರಾರಂಭಿಸಬೇಕು" ಎಂದು ಬರೆದಿದ್ದಾರೆ. ಮರಣದಂಡನೆ ಅಥವಾ ದೀರ್ಘಕಾಲದ ಜೈಲು ಶಿಕ್ಷೆಯ ಕತ್ತಲು ಮುಸುಕಿರುವ ಈ ಸಂದರ್ಭದಲ್ಲಿ, ಪತ್ನಿಯನ್ನು ಮದುವೆಯ ಬಂಧನದಿಂದ ಮುಕ್ತಗೊಳಿಸುವುದು ಅತ್ಯಂತ ನೋವಿನ ನಿರ್ಧಾರವಾದರೂ ಆಕೆಯ ಭವಿಷ್ಯಕ್ಕಾಗಿ ಈ ಹೆಜ್ಜೆ ಇಡುತ್ತಿರುವುದಾಗಿ ತಿಳಿಸಿದ್ದಾರೆ.

ತಮ್ಮ ಪುತ್ರಿ ರಜಿಯಾಗೆ ಸಂದೇಶ ನೀಡಿರುವ ಮಲಿಕ್, ಆಕೆಗೆ ನಜ್ಜುಗುಜ್ಜಾಗಿರುವ ಈ ಸಮಯದಲ್ಲಿ ತನ್ನಜ್ಜಿಯ ಜೊತೆ ನಿಕಟ ಸಂಪರ್ಕದಲ್ಲಿರುವಂತೆ ಹಾಗೂ ಪ್ರತಿದಿನ ಕನಿಷ್ಠ ಐದು ನಿಮಿಷವಾದರೂ ಮಾತನಾಡಿ ಪ್ರೀತಿ ನೀಡುವಂತೆ ಕೋರಿದ್ದಾರೆ. ಈ ಸುದೀರ್ಘ ಅಫಿಡವಿಟ್ ಯಾವುದೇ ದಯೆ ಅಥವಾ ಅನುಕಂಪ ಗಿಟ್ಟಿಸಿಕೊಳ್ಳಲು ಬರೆದಿದ್ದಲ್ಲ, ಬದಲಿಗೆ ಇದು ತಮ್ಮ ಅಂತಃಕರಣದ ಕೊನೆಯ ನುಡಿಗಳು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಪತ್ರ ಹೊರಬಿದ್ದ ಬೆನ್ನಲ್ಲೇ ಅವರ ಮಗಳು ರಜಿಯಾ ಸುಲ್ತಾನಾ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದು, ಒಂದು ವೇಳೆ ತಂದೆ ತಾಯಿಗೆ ವಿಚ್ಛೇದನ ನೀಡಿದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now