Sunday, 08 Nov, 7.41 am Kannada News Now

ಭಾರತ
ನವೆಂಬರ್ 17 ರಿಂದ 'ಕಾಲೇಜು', 'ವಿವಿ' ಆರಂಭ : ಯುಜಿಸಿಯಿಂದ ನೂತನ ಮಾರ್ಗಸೂಚಿ ಬಿಡುಗಡೆ

ನವದೆಹಲಿ: ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ಮರು ಆರಂಭಕ್ಕೆ ಯುಜಿಸಿ ಮತ್ತೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರನ್ವಯ ಕಾಲೇಶುರು ಮಾಡಿ, ಆದ್ರೆ ಅರ್ಧಕ್ಕಿಂತ ಜಾಸ್ತಿ ವಿದ್ಯಾರ್ಥಿಗಳು ಬೇಡ ಎಂದಿದೆ.

ಹೌದು, ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಶಿಕ್ಷಣ ಸಚಿವ ರಮೇಶ್​ ಪೋಖ್ರಿಯಾಲ್​, ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳನ್ನ ಮರು ಆರಂಭಿಸಬಹುದು. ಆದರೆ ಶೇ. 50ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಇರಬಾರದು ಎಂಬ ಯುಜಿಸಿ ಮಾರ್ಗಸೂಚಿಯನ್ನ ಪಾಲಿಸಲೇಬೇಕು. ಕೋವಿಡ್​-19 ಹಿನ್ನೆಲೆಯಲ್ಲಿ ಎಲ್ಲ ಸುರಕ್ಷತಾ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಬೇಕು ಎಂದಿದ್ದಾರೆ.

ಹಾಸ್ಟೆಲ್​ಗಳನ್ನ ಮತ್ತೆ ತೆರೆಯುವ ಸಾಧ್ಯತೆ ಇದೆ. ಆದ್ರೆ, ಒಂದು ಕೊಠಡಿಯಲ್ಲಿ ಒಬ್ಬನಿಗಿಂತ ಹೆಚ್ಚು ವಿದ್ಯಾರ್ಥಿಗಳು ಇರಬಾರದು. ಇನ್ನು ಸೋಂಕಿತ ವಿದ್ಯಾರ್ಥಿಗೆ ಯಾವುದೇ ಕಾರಣಕ್ಕೂ ಹಾಸ್ಟೆಲ್​ನಲ್ಲಿ ಉಳಿಯಲು ಅವಕಾಶವಿಲ್ಲ ಎಂದವರು ತಿಳಿಸಿದ್ದಾರೆ.

ಇನ್ನು ವಿದ್ಯಾರ್ಥಿಗಳಿಗೆ ಆನ್ಲೈನ್​ ಕ್ಲಾಸ್​ ಮೂಲಕ ಅಭ್ಯಾಸ ಮಾಡುವ ಅವಕಾಶವಿದ್ದು, ವಿಜ್ಞಾನ, ತಂತ್ರಜ್ಞಾನ ಹೊರತಾದ ಇತರ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಆನ್ಲೈನ್ ಶಿಕ್ಷಣ ಇರಲಿದೆ ಎಂದರು.Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top