Dailyhunt Logo
  • Light mode
    Follow system
    Dark mode
    • Play Story
    • App Story
New Rules from August 1 : ಸಾರ್ವಜನಿಕರೇ ಗಮನಿಸಿ : ನಾಳೆಯಿಂದ ಗ್ಯಾಸ್, ರೈಲು ಟಿಕೆಟ್, ಬ್ಯಾಂಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ

New Rules from August 1 : ಸಾರ್ವಜನಿಕರೇ ಗಮನಿಸಿ : ನಾಳೆಯಿಂದ ಗ್ಯಾಸ್, ರೈಲು ಟಿಕೆಟ್, ಬ್ಯಾಂಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ

Kannada News Now 1 week ago

ವದೆಹಲಿ : ನಾಳೆಯಿಂದ ಆಗಸ್ಟ್ ತಿಂಗಳು ಆರಂಭವಾಗಲಿದ್ದು, ಹೊಸ ತಿಂಗಳ ಆರಂಭದೊಂದಿಗೆ ದೇಶದಲ್ಲಿ ಹಲವು ಪ್ರಮುಖ ಆರ್ಥಿಕ ಹಾಗೂ ಆಡಳಿತಾತ್ಮಕ ನಿಯಮಗಳಲ್ಲಿ ಬದಲಾವಣೆಗಳು ಜಾರಿಗೆ ಬರುತ್ತಿವೆ. ಈ ಹೊಸ ಬದಲಾವಣೆಗಳು ಪ್ರತಿಯೊಬ್ಬ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಆಯವ್ಯಯದ ಮೇಲೆ ನೇರ ಪರಿಣಾಮ ಬೀರಲಿವೆ.

ಎಲ್‌ಪಿಜಿ ದರ ಪರಿಷ್ಕರಣೆಯಿಂದ ಹಿಡಿದು ಬ್ಯಾಂಕಿಂಗ್ ವ್ಯವಸ್ಥೆ ಮತ್ತು ರೈಲು ಪ್ರಯಾಣದವರೆಗೆ ಏನೇನು ಬದಲಾಗಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಪರಿಷ್ಕರಣೆ

ಪ್ರತಿ ತಿಂಗಳ ಮೊದಲ ದಿನ ತೈಲ ಮಾರಾಟ ಸಂಸ್ಥೆಗಳು ಎಲ್‌ಪಿಜಿ ಸಿಲಿಂಡರ್ ದರಗಳನ್ನು ಮರುಪರಿಶೀಲಿಸುತ್ತವೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯ ಏರಿಳಿತ ಹಾಗೂ ಅಂತರರಾಷ್ಟ್ರೀಯ ಮಟ್ಟದ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳ ಹಿನ್ನೆಲೆಯಲ್ಲಿ, ಈ ಬಾರಿ ಗೃಹಬಳಕೆ ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆಗಳಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ದಟ್ಟವಾಗಿದೆ. ಇರಾನ್ ಮತ್ತು ಅಮೆರಿಕ ನಡುವಿನ ಬಿಕ್ಕಟ್ಟು ಮುಂದುವರಿದರೆ ದೇಶೀಯ ಇಂಧನ ದರ ಇನ್ನಷ್ಟು ದುಬಾರಿಯಾಗುವ ಆತಂಕ ಎದುರಾಗಿದೆ.

ರೈಲ್ವೆ ತತ್ಕಾಲ್ ಬುಕ್ಕಿಂಗ್‌ನಲ್ಲಿ ಜಾರಿಯಾಗಲಿದೆ ಹೊಸ ವ್ಯವಸ್ಥೆ

ಆಗಸ್ಟ್ 1ರಿಂದ ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಹೊಸ ಸರಳೀಕೃತ ನಿಯಮವನ್ನು ಜಾರಿಗೆ ತರುತ್ತಿದೆ. ರಿಸರ್ವೇಶನ್ ಕೌಂಟರ್‌ಗಳಲ್ಲಿ ಟೋಕನ್ ನೀಡುವ ಸಮಯವನ್ನು ತತ್ಕಾಲ್ ಬುಕ್ಕಿಂಗ್ ಆರಂಭದ ಸಮಯಕ್ಕೇ ಹೊಂದಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರು ಟೋಕನ್‌ಗಾಗಿ ಒಮ್ಮೆ ಮತ್ತು ಟಿಕೆಟ್‌ಗಾಗಿ ಮತ್ತೊಮ್ಮೆ ಸಾಲಿನಲ್ಲಿ ನಿಲ್ಲುವ ಕಿರಿಕಿರಿ ತಪ್ಪಲಿದ್ದು, ಸಮಯ ಉಳಿತಾಯದೊಂದಿಗೆ ಟಿಕೆಟ್ ವಿತರಣೆ ಸುಗಮವಾಗಲಿದೆ.

ಕ್ರೆಡಿಟ್ ಕಾರ್ಡ್ ಶುಲ್ಕ ಏರಿಕೆ ಹಾಗೂ CKYC 2.0 ಜಾರಿ

ಹಲವು ಪ್ರಮುಖ ಬ್ಯಾಂಕ್‌ಗಳು ತಮ್ಮ ಸೇವಾ ಶುಲ್ಕಗಳು, ಕ್ರೆಡಿಟ್ ಕಾರ್ಡ್ ನಿಯಮಾವಳಿಗಳು ಹಾಗೂ ಎಸ್‌ಎಂಎಸ್ ಅಲರ್ಟ್ ದರಗಳನ್ನು ಪರಿಷ್ಕರಿಸಲು ಸಿದ್ಧವಾಗಿವೆ. ಇದರೊಂದಿಗೆ ಹಣಕಾಸು ಕ್ಷೇತ್ರದಲ್ಲಿ 'ಸಿ-ಕೆವೈಸಿ (CKYC) 2.0' ವ್ಯವಸ್ಥೆಯು ಅನುಷ್ಠಾನಗೊಳ್ಳಲಿದೆ. ಈ ಹೊಸ ತಂತ್ರಜ್ಞಾನದಿಂದಾಗಿ ಗ್ರಾಹಕರು ಒಮ್ಮೆ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದರೆ ಸಾಕು, ಮುಂದೆ ಹೊಸ ಬ್ಯಾಂಕ್ ಖಾತೆ ತೆರೆಯುವಾಗ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ಪದೇ ಪದೇ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ.

ಐಟಿಆರ್ ಸಲ್ಲಿಕೆಗೆ ಇಂದೇ ಕೊನೆ ದಿನ: ನಾಳೆಯಿಂದ ಬೀಳಲಿದೆ ವಿಳಂಬ ಶುಲ್ಕ

ವೇತನದಾರರು ಹಾಗೂ ಆಡಿಟ್ ಅಗತ್ಯವಿಲ್ಲದ ತೆರಿಗೆದಾರರಿಗೆ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಆಗಸ್ಟ್ 1ರಿಂದ ಐಟಿಆರ್ ಸಲ್ಲಿಸುವ ತೆರಿಗೆದಾರರು ಆದಾಯ ತೆರಿಗೆ ಕಾಯ್ದೆಯನ್ವಯ ನಿಯಮಾನುಸಾರ ಲೇಟ್ ಫೀಸ್ ಹಾಗೂ ಬಡ್ಡಿಯನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now