Thursday, 16 Sep, 6.57 pm Kannada News Now

ಭಾರತ
OMG : ನಮ್ಮ ಮನಸ್ಸಿಗೆ ದಿನಕ್ಕೆ ʼ60 ಸಾವಿರ ಆಲೋಚನೆʼಗಳು ಬಂದು ಹೋಗುತ್ವಂತೆ.! ಹಾಗಾದ್ರೆ, ನಾವೆಷ್ಟು ಬಾರಿ ಉಸಿರಾಡ್ತೀವಿ ಗೊತ್ತಾ?

ಡಿಜಿಟಲ್‌ ಡೆಸ್ಕ್:‌ ಮಾನವನ ದೇಹವೇ ಒಂದು ರಹಸ್ಯ. ಮೆದುಳಿನಿಂದ ಪಾದದವರೆಗೆ ಪ್ರತಿಯೊಂದು ಅಂಗವೂ ವಿಭಿನ್ನವಾಗಿ ಕೆಲಸ ಮಾಡುತ್ವೆ. ವಿಜ್ಞಾನಿಗಳು ಕೂಡ ಇದನ್ನ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ವಿಫಲರಾಗಿದ್ದಾರೆ. ಇನ್ನು ಮಾನವನ ದೇಹಕ್ಕೆ ಸಂಬಂಧಿಸಿದ ಕೆಲವು ಆಶ್ಚರ್ಯಕರ ಮತ್ತು ಇಂಟ್ರಸ್ಟಿಂಗ್‌ ಸಂಗತಿಗಳು ಇಲ್ಲಿವೆ.

* ಮಾನವ ದೇಹದಲ್ಲಿ ಒಟ್ಟು 37.2 ಲಕ್ಷ ಕೋಟಿ ಜೀವಕೋಶಗಳಿವೆ. 200 ವಿವಿಧ ರೀತಿಯ ಜೀವಕೋಶಗಳು ದೇಹದಲ್ಲಿ ಇರುತ್ವೆ. ಇನ್ನು ಇದ್ರಲ್ಲಿ 100 ಶತಕೋಟಿ ಚರ್ಮದ ಕೋಶಗಳಿವೆ.

* ನಮ್ಮ ಮೆದುಳಿನ ರಚನೆ ಅತ್ಯಂತ ಸಂಕೀರ್ಣವಾಗಿದೆ. ಇದು 100 ಬಿಲಿಯನ್ ನರಕೋಶಗಳನ್ನ ಒಳಗೊಂಡಿದೆ. ಸಂಶೋಧನೆಯ ಪ್ರಕಾರ, ಒಂದು ದಿನದಲ್ಲಿ ಒಟ್ಟು 60 ಸಾವಿರ ಆಲೋಚನೆಗಳು ನಮ್ಮ ಮನಸ್ಸಿಗೆ ಬರುತ್ವೆ.

* ಇನ್ನು ವಿಷಯಗಳನ್ನ ಅನುಭವಿಸಲು ನಮ್ಮ ದೇಹದಲ್ಲಿ 60 ಮಿಲಿಯನ್ ಸಂವೇದನಾ ಗ್ರಾಹಕಗಳಿವೆ.

* ಮನುಷ್ಯರು ದಿನಕ್ಕೆ 23040 ಬಾರಿ ಉಸಿರಾಡುತ್ತಾರೆ. ಆದ್ರೆ, ಅವನ ಹೃದಯವು 1,15,200 ಬಾರಿ ಬಡಿಯುತ್ತದೆ.

* ಮಾನವನ ಕಣ್ಣಿನಲ್ಲಿ ಒಟ್ಟು 127 ಮಿಲಿಯನ್ ರೆಟಿನಾ ಕೋಶಗಳಿವೆ. ಅದರ ಸಹಾಯದಿಂದ ನಾವು 1 ಕೋಟಿ ವಿವಿಧ ಬಣ್ಣಗಳನ್ನ ಗುರುತಿಸಬಹುದು.

* ನಾವು ವಾಸನೆ ಕಂಡು ಹಿಡಿಯಲು 1000 ಸಂವೇದನಾ ಗ್ರಾಹಕಗಳನ್ನ ಹೊಂದಿದ್ದೇವೆ. ಅವರ ಸಹಾಯದಿಂದ, ನಾವು 50 ಸಾವಿರ ವಿವಿಧ ಸುಗಂಧಗಳನ್ನ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.

* ನಮ್ಮ ದೇಹದಲ್ಲಿ ಒಟ್ಟು 6 ಲೀಟರ್ ಅಥವಾ 1.6 ಗ್ಯಾಲನ್ ರಕ್ತವಿದೆ. ಈ ರಕ್ತವು ದೇಹದಲ್ಲಿ ಇರುವ 42 ಬಿಲಿಯನ್ ಸಿರೆಗಳಲ್ಲಿ (ರಕ್ತಕಣಗಳು) ಹರಿಯುತ್ತದೆ. ನಮ್ಮ ದೇಹದಲ್ಲಿ ₹30 ಲಕ್ಷ ಕೋಟಿ ಕೆಂಪು ರಕ್ತ ಕಣಗಳಿವೆ.

Breaking News : ಬೆಂಗಳೂರು ಪೊಲೀಸರ ಭರ್ಜರಿ ಬೇಟೆ : ʼಡ್ರಗ್ಸ್‌ ಫ್ಯಾಕ್ಟರಿʼ ಭೇದಿಸಿ, 5 ಕೋಟಿ ಮೌಲ್ಯದ ʼಮಾದಕ ವಸ್ತುʼ ವಶಕ್ಕೆ

BIG BREAKING NEWS : ದುಬೈನ ಟಿ20 ವಿಶ್ವಕಪ್ ಬಳಿಕ ನಾಯಕ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ವಿರಾಟ್ ಕೊಹ್ಲಿ ಘೋಷಣೆ

ಹಿಮಾಚಲ ಪ್ರದೇಶದ ನಾಲ್ಕು ದಿನದ ಭೇಟಿಗಾಗಿ ಶಿಮ್ಲಾಕ್ಕೆ ಆಗಮಿಸಿದ ರಾಷ್ಟ್ರಪತಿ ಕೋವಿಂದ್

PM Kisan Yojana: ಶೀಘ್ರದಲ್ಲೇ ರೈತರ ಖಾತೆಗೆ 6 ಸಾವಿರ ಬದಲಿಗೆ 12 ಸಾವಿರ ಜಮಾ

BIG BREAKING NEWS : ಬೆಂಗಳೂರಿನ ವಿಧಾನಸೌಧದ ಗೇಟ್ ನಂ.2ರಲ್ಲಿ ಭೂಕುಸಿತ

Big Breaking News : ರಾಜ್ಯ ಪೊಲೀಸರಿಂದ ಅತಿದೊಡ್ಡ ʼಡ್ರಗ್ಸ್‌ ಆಪರೇಷನ್‌ʼ: ʼಡ್ರಗ್ಸ್‌ ಫ್ಯಾಕ್ಟರಿʼ ಭೇದಿಸಿ, 5 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್‌

ಮಕ್ಕಳನ್ನು ಹೊಡೆಯಲು ಕೋಲುಗಳನ್ನು ಮಾರಾಟಕ್ಕಿಟ್ಟ ಅಮೇಜಾನ್



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top