Sunday, 24 Jan, 6.43 pm Kannada News Now

ಭಾರತ
ʼPNBʼ ಗ್ರಾಹಕರೇ ಗಮನಿಸಿ: ಹಣದ ವ್ಯವಹಾರವಿದ್ರೆ ʼಮಾ.31ʼರೊಳಗೆ ಮುಗಿಸಿಕೊಳ್ಳಿ, ಯಾಕಂದ್ರೆ..?

ನವದೆಹಲಿ: ನೀವು ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಪಿಎನ್‌ಬಿ (ಪಂಜಾಬ್ ನ್ಯಾಷನಲ್ ಬ್ಯಾಂಕ್) ನಲ್ಲಿ ಖಾತೆಯನ್ನ ಹೊಂದಿದ್ದರೆ, ಈ ಸುದ್ದಿ ನಿಮಗಾಗಿ. ಯಾಕಂದ್ರೆ, ಪಂಜಾಬ್‌ ಬ್ಯಾಂಕ್‌ʼನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಬ್ಯಾಂಕ್‌ ಮುಖ್ಯ ಮಾಹಿತಿಯನ್ನ ನೀಡಿದೆ.

ಪಿಎನ್‌ಬಿ ಹೇಳುವಂತೆ, ಐಎಫ್‌ಎಸ್‌ಸಿ ಮತ್ತು ಎಂಐಸಿಆರ್ ಕೋಡ್ (ಐಎಫ್‌ಎಸ್‌ಸಿ / ಎಂಐಸಿಆರ್ ಕೋಡ್) ಅನ್ನ ಬ್ಯಾಂಕಿನಿಂದ ಬದಲಾಯಿಸಲಾಗಿದೆ. ಅಂದರೆ, ಈ ಸಂಕೇತಗಳು 31 ಮಾರ್ಚ್ 2021 ರ ನಂತರ ಕಾರ್ಯನಿರ್ವಹಿಸುವುದಿಲ್ಲ. ನೀವು ಹಣವನ್ನ ವರ್ಗಾಯಿಸಲು ಬಯಸಿದರೆ, ನೀವು ಬ್ಯಾಂಕಿನಿಂದ ಹೊಸ ಕೋಡ್ ಪಡೆಯಬೇಕು. ಆಗ ಮಾತ್ರ ನೀವು ವ್ಯವಹಾರವನ್ನ ಮಾಡಬಹುದು.

ʼಫೇಸ್‌ಬುಕ್ʼನಲ್ಲಿ ತೊಂದರೆ, ಇದ್ದಕ್ಕಿದ್ದಂತೆ ಬಳಕೆದಾರರ ಖಾತೆಗಳು ʼಲಾಗ್ ಔಟ್ʼ..!

1 ಏಪ್ರಿಲ್ 2020 ರಂದು ಸರ್ಕಾರವು ದೇಶದ ಮೂರು ಬ್ಯಾಂಕುಗಳಾದ ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕೂರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾವನ್ನ ವಿಲೀನಗೊಳಿಸಿದೆ. ಇದರ ನಂತರ, ಗ್ರಾಹಕರ ಚೆಕ್ ಬುಕ್, ಐಎಫ್‌ಎಸ್‌ಸಿ / ಎಂಐಸಿಆರ್ ಕೋಡ್ ಕೂಡ ಬದಲಾಯಿಸಲಾಗುತ್ತೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಟ್ವೀಟ್
ಮಾಡಿದೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಪರವಾಗಿ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಓರಿಯಂಟಲ್ ಬ್ಯಾಂಕ್ ಆಫ್ ಕಾರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಹಳೆಯ ಚೆಕ್ ಬುಕ್ ಮತ್ತು ಐಎಫ್‌ಎಸ್ಸಿ / ಎಂಐಸಿಆರ್ ಕೋಡ್ ಮಾರ್ಚ್ 31 ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂದು ಬ್ಯಾಂಕ್ ಹೇಳಿದೆ. ಇದರ ನಂತರ, ನೀವು ಬ್ಯಾಂಕಿನಿಂದ ಹೊಸ ಕೋಡ್ ಮತ್ತು ಚೆಕ್ ಬುಕ್ ಪಡೆಯಬೇಕು.

BIG BREAKING : ರಾಜ್ಯದಲ್ಲಿ 'ಪೋಸ್ಟ್ ಆಫೀಸ್ ಮೂಲಕ ಪಿಂಚಣಿ' ವ್ಯವಸ್ಥೆ ರದ್ದು : ಇನ್ಮುಂದೆ ಫಲಾನುಭವಿಗಳ 'ಬ್ಯಾಂಕ್ ಖಾತೆ'ಗೆ ಸಹಾಯಧನ

ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಕರೆ ಮಾಡಿ..!
ಈ ಬ್ಯಾಂಕುಗಳ ವಿಲೀನದ ನಂತರ, ಎರಡೂ ಬ್ಯಾಂಕುಗಳ ಸಂಕೇತಗಳು ಮತ್ತು ಚೆಕ್‌ಬುಕ್‌ಗಳು ಬದಲಾಗಿವೆ, ನಂತರ ಗ್ರಾಹಕರು ಬ್ಯಾಂಕಿಗೆ ಹೋಗಿ ಹೊಸ ಚೆಕ್‌ಬುಕ್ ಪಡೆಯಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಟೋಲ್ ಫ್ರೀ ಸಂಖ್ಯೆಗೆ 18001802222/18001032222 ಗೆ ಕರೆ ಮಾಡಬಹುದು.

ಐಎಫ್‌ಎಸ್‌ಸಿ ಕೋಡ್‌ನಲ್ಲಿನ ಬದಲಾವಣೆಗಳು ಖಾತೆದಾರರ ಮೇಲೆ ಬೀಳುತ್ತವೆ. ಹಾಗಂತ, ನೀವು ಈಗಿನಿಂದ್ಲೇ ಟೆನ್ಶನ್‌ ಮಾಡಿಕೊಳ್ಳೊ ಆಗತ್ಯವಿಲ್ಲ. ಯಾಕಂದ್ರೆ, ಈ ಶಾಖೆಗಳ ಐಎಫ್‌ಎಸ್‌ಸಿ ಕೋಡ್‌ಗೆ ಕೊನೆಯ ದಿನಾಂಕ 31 ಮಾರ್ಚ್ 2021 ಆಗಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ ಎಲ್ಲ ಗ್ರಾಹಕರಿಗೆ ಮಾಹಿತಿ ನೀಡಿದೆ. ಇನ್ನು ಆನ್‌ಲೈನ್ ವಹಿವಾಟುಗಳಿಗಾಗಿ, ನೀವು ಬ್ಯಾಂಕಿನ ಐಎಫ್‌ಎಸ್‌ಸಿ ಅಂದರೆ ಭಾರತೀಯ ಹಣಕಾಸು ವ್ಯವಸ್ಥೆ ಕೋಡ್ ಅನ್ನ ಬ್ಯಾಂಕ್ ಖಾತೆ ಸಂಖ್ಯೆಯೊಂದಿಗೆ ಸೇರಿಸಬೇಕಾಗುತ್ತೆ.

ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್‌ ಸೇರಿಕೊಳ್ಳಿ
https://bit.ly/363lK75

ಜಯಲಲಿತಾ ಆಪ್ತೆ ಶಶಿಕಲಾ ಆರೋಗ್ಯದಲ್ಲಿ ಚೇತರಿಕೆ: ವಿಕ್ಟೋರಿಯಾ ಆಸ್ಪತ್ರೆDailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top