Thursday, 16 Sep, 9.08 pm Kannada News Now

ಕರ್ನಾಟಕ
'ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕ'ರಿಗೆ ಗುಡ್ ನ್ಯೂಸ್ : ಒಂದು ಬಾರಿ ತಾಲೂಕು, ಜಿಲ್ಲೆಯೊಳಗೆ ವರ್ಗಾವಣೆಗೆ ಸರ್ಕಾರ ಗ್ರೀನ್ ಸಿಗ್ನಲ್

ಬೆಂಗಳೂರು : 2019-20ನೇ ವರ್ಷದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ತಾಲೂಕಿನ ಹೊರಗೆ ಅಥವಾ ಪ್ರೌಢ ಶಾಲಾ ಶಿಕ್ಷಕರು ಜಿಲ್ಲೆಯ ಹೊರಗೆ, ಒಂದು ಬಾರಿ, 2019-20ನೇ ಸಾಲಿನಲ್ಲಿ ವರ್ಗಾವಣೆ ಪೂರ್ವದಲ್ಲಿ ಎಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೋ, ಆ ಸಂಬಂಧ ಪಟ್ಟ ತಾಲೂಕು, ಜಿಲ್ಲೆಯೊಳಗೆ ಒಂದು ಬಾರಿ ಸ್ಥಳ ನಿಯುಕ್ತಿಯ ಪ್ರಯೋಜನ ಪಡೆಯಲು, ಸರ್ಕಾರ ಅನುಮತಿಸಿದೆ. ಈ ಮೂಲಕ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ ನೀಡಿದೆ.

Bruhath Covid19 Vaccine Mela : ಕೊರೋನಾ ಲಸಿಕೆ ಪಡೆಯೋ ನಿರೀಕ್ಷೆಯಲ್ಲಿರೋರೆ ಗಮನಿಸಿ : ನಾಳೆ ರಾಜ್ಯಾಧ್ಯಂತ ಬೃಹತ್ ಲಸಿಕಾ ಮೇಳ

ಈ ಕುರಿತಂತೆ ವಿಶೇಷ ರಾಜ್ಯ ಪತ್ರದಲ್ಲಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ( ಶಿಕ್ಷಕರ ವರ್ಗಾವಣೆ ನಿಯಂತ್ರಣ ) ( ತಿದ್ದುಪಡಿ ) ವಿಧೇಯಕ 2021ಕ್ಕೆ ತಿದ್ದು ಪಡಿತರಲಾಗಿದ್ದು, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ( ಶಿಕ್ಷಕರ ವರ್ಗಾವಣೆ ನಿಯಂತ್ರಣ ) ( ತಿದ್ದುಪಡಿ ) ಅಧಿನಿಯಮದ 10ನೇ ಪ್ರಕರಣಕ್ಕೆ ತಿದ್ದು ಪಡಿ ತರಲಾಗಿದೆ.

ರಸ್ತೆ ಆಗೋವರೆಗೆ ಮದುವೆಯಾಗೋಲ್ಲವೆಂದ ಹುಡುಗಿಯ ಹಠಕ್ಕೆ ಮಣಿದ ಜಿಲ್ಲಾಡಳಿತ : ರಸ್ತೆನೂ ಮಾಡ್ತೀವಿ, ಮದುವೆನೂ ಮಾಡ್ತೀವಿ ಅಂದ ಡಿಸಿ

ಈ ತಿದ್ದುಪಡಿಯಂತೆ ಕಡ್ಡಾಯ ವರ್ಗಾವಣೆ, ವಲಯ ವರ್ಗಾವಣೆಯ ಮೇಲೆ ಅಥವಾ ಸಮರ್ಪಕ ಮರುಹಂಚಿಕೆಯ ಮೇರೆಗೆ 2019-20ನೇ ವರ್ಷದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನ ಸಂದರ್ಭದಲ್ಲಿ ತಾಲೂಕಿನ ಹೊರಗೆ ಅಥವಾ ಪ್ರೌಢ ಶಾಲಾ ಶಿಕ್ಷಕನ ಸಂದರ್ಭದಲ್ಲಿ ಜಿಲ್ಲೆಯ ಹೊರಗೆ ವರ್ಗಾವಣೆ ಗೊಂಡ ಶಿಕ್ಷಕನ ಸಂಬಂಧದಲ್ಲಿ, 2021ರ ಪ್ರಾರಂಭದ ದಿನಾಂಕದ ನಿಕಟ ತರುವಾಯ ಮಾಡಿದ ವರ್ಗಾವಣೆಯಲ್ಲಿ, 2019-20ನೇ ಸಾಲಿನ ವರ್ಗಾವಣೆ ಪೂರ್ವದಲ್ಲಿ ಎಲ್ಲಿ ಕಾರ್ಯನಿರ್ವಹಿಸುತ್ತಿದ್ದರೋ, ಆ ಸಂಬಂಧಪಟ್ಟ ತಾಲೂಕು ಅಥವಾ ಜಿಲ್ಲೆಯೊಳಗೆ ಸ್ಥಳನಿಯುಕ್ತಯ ಪ್ರಯೋಜನವನ್ನು ನೀಡುವುದಕ್ಕಾಗಿ, ಮುಂಬರುವ ಇತರ ರೀತಿಯ ವರ್ಗಾವಣೆಗಳಿಗೆ ಪೂರ್ವದಲ್ಲಿ ಖಾಲಿ ಹುದ್ದೆಗಳ ಲಭ್ಯತೆಗೆ ಒಳಪಟ್ಟು, ಅವರು ಕಾರ್ಯನಿರ್ವಹಿಸುತ್ತಿರುವ ತಾಲೂಕು ಅಥವಾ ಜಿಲ್ಲೆಯೊಳಗೆ ಒಂದು ಸಲದ ಕ್ರಮವಾಗಿ ( One time measure ) ನಿಯಮಿಸಬಹುದಾದಂತ ರೀತಿಯಲ್ಲಿ ವರ್ಗಾವಣೆಯ ಸ್ಥಳವನ್ನು ಆಯ್ಕೆ ಮಾಡಲು ಅವಕಾಶ ಒದಗಿಸಲಾಗಿದೆ.

ರಾಜ್ಯದ 56 ಮುನ್ಸಿಪಾಲ್ಟಿಗಳಿಗೆ ಮೀಸಲಾತಿ ಪ್ರಕಟಿಸಿ : ಸರ್ಕಾರಕ್ಕೆ ಹೈಕೋರ್ಟ್ ಸೂಚನೆDailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top