ಭಾರತ
`PUBGʼ ಪ್ರಿಯರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ದೇಶದಲ್ಲಿ ಅಧಿಕೃತವಾಗಿ ನೋಂದಣಿಯಾಗಿರುವ ಬಹುತೇಕರ ನೆಚ್ಚಿನ ಆಟ ಪಬ್ಜಿ ಭಾರತದಲ್ಲಿ ಮತ್ತೆ ತನ್ನ ಹೆಜ್ಜೆ ಹಾಕಲು ಸಿದ್ಧತೆ ನಡೆಸಿದೆ.
ವೈರಲ್ ಆಗಿರುವ ಗೇಮಿಂಗ್ ಆಪ್ PUBG ಯ ಇತ್ತೀಚಿನ ಬೆಳವಣಿಗೆಯಲ್ಲಿ, ಕಂಪನಿಯ ಭಾರತದ ಅಂಗಸಂಸ್ಥೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಿಂದ ನೋಂದಣಿಯಾಗಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಈ ಸಂಸ್ಥೆ ಖಾಸಗಿ ಕಂಪನಿಯಾಗಿ 'ವಿದೇಶಿ ಕಂಪನಿಯ ಅಧೀನ ಸಂಸ್ಥೆ' ಎಂಬ ಉಪವಿಭಾಗದಲ್ಲಿ ನೋಂದಣಿಯಾಗಿದೆ.
ಇದರ ಅಧಿಕೃತ ವಿವರಗಳು ಇಲ್ಲಿದೆ
`ಈ ಮಧ್ಯೆ, ವರದಿಗಳ ಪ್ರಕಾರ, ಆಟದ ಭಾರತೀಯ ಆವೃತ್ತಿಆರಂಭದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿರಲಿದ್ದು, ಸ್ವಲ್ಪ ಸಮಯದ ನಂತರ ಐಓಎಸ್ ಲಾಂಚ್ ಆಗಲಿದೆ.
ಈ ಮೊದಲು ನವೆಂಬರ್ 12ರಂದು PUBG Corp, ತನ್ನ ಜನಪ್ರಿಯ ಗೇಮಿಂಗ್ ಆಪ್ ನ ಭಾರತೀಯ ಅಂಗ ಸಂಸ್ಥೆಯಾಗಿರುವ ಹೊಸ ಗೇಮ್ʼನ್ನ ಸೃಷ್ಟಿಸುವ ಮೂಲಕ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಬಹಿರಂಗಪಡಿಸಿದೆ.
ಅಲ್ಲದೆ, ತನ್ನ ದಕ್ಷಿಣ ಕೊರಿಯಾದ ಮಾತೃ ಸಂಸ್ಥೆಯಾದ ಕ್ರಾಫ್ಟ್ಟನ್ ಇಂಕ್ʼನ ಸಹಾಯದಿಂದ ಸ್ಥಳೀಯ ವಿಡಿಯೋ ಗೇಮ್, ಇಸ್ಪೋರ್ಟ್ಸ್, ಮನರಂಜನೆ ಮತ್ತು ಐಟಿ ಉದ್ಯಮಗಳನ್ನ ಅಭಿವೃದ್ಧಿಪಡಿಸಲು ಭಾರತದಲ್ಲಿ 100 ಮಿಲಿಯನ್ ಡಾಲರ್ ಮೊತ್ತದ ಬಂಡವಾಳ ಹೂಡುವುದಾಗಿ ಅದು ಘೋಷಿಸಿದೆ.
ವೈರಲ್ ಗೇಮಿಂಗ್ ಆಯಪ್ ಪ್ಲೇಯರ್ ಅನ್ ಗ್ರೂನ್ಸ್ ಬ್ಯಾಟಲ್ ಗ್ರೌಂಡ್ಸ್ (PUBG) ಎಂಬ 118 ಚೀನಾ ಅಪ್ಲಿಕೇಶನ್ ಗಳಲ್ಲಿ ಒಂದಾಗಿದ್ದು, ಚೀನಾದೊಂದಿಗೆ ಗಡಿ ಉದ್ವಿಗ್ನತೆಯ ನಡುವೆಯೇ ಸೆಪ್ಟೆಂಬರ್ʼನಲ್ಲಿ ಭಾರತ ಸರ್ಕಾರವು ರಾಷ್ಟ್ರೀಯ ಭದ್ರತೆಯ ಕಳವಳದ ಮೇಲೆ ನಿಷೇಧ ಹೇರಿತ್ತು.
ಈ ಹಿಂದೆ, ಆಟವು ತುಂಬಾ ವ್ಯಸನಕಾರಿಯಾಗಿದೆ ಮತ್ತು ಆದ್ದರಿಂದ ಅದನ್ನ 8 ಗಂಟೆಗಳ ಕಾಲ ನೇರವಾಗಿ ಆಡುವ ಹದಿಹರೆಯದವರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಕಳವಳವೂ ಇತ್ತು. ಆದ್ದರಿಂದ, ಆರೋಗ್ಯಕರ ಗೇಮ್ ಪ್ಲೇ ವಾತಾವರಣವನ್ನ ನಿರ್ಮಿಸಲು, ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಆಟದ ವಿಷಯವನ್ನ ಅಳವಡಿಸಲಾಗುತ್ತೆ. ಕಿರಿಯ ಆಟಗಾರರಿಗೆ ಆರೋಗ್ಯಕರ ಗೇಮ್ ಪ್ಲೇ ಹವ್ಯಾಸಗಳನ್ನ ಉತ್ತೇಜಿಸಲು ಆಟದ ಸಮಯದ ಮೇಲೆ ನಿರ್ಬಂಧಗಳನ್ನ ಹಾಕುವ ಒಂದು ವೈಶಿಷ್ಟ್ಯವು ಇದ್ರಲ್ಲಿ ಇರಲಿದೆ.
ಇದೀಗ ಕಂಪನಿಯೊಂದು ಅಧಿಕೃತವಾಗಿ ಭಾರತೀಯ ಬಳಕೆದಾರರನ್ನ ಮರಳಿ ಪಡೆಯಲು ಸಿದ್ಧತೆ ನಡೆಸುತ್ತಿರುವುದರಿಂದ, ಬಿಡುಗಡೆಯ ದಿನಾಂಕ ಮತ್ತು ಆಟದ ಬಗ್ಗೆ ಹೆಚ್ಚಿನ ವಿವರಗಳನ್ನ ನಿರೀಕ್ಷಿಸಲಾಗಿದೆ.