Kannada News Now
1.7M Followersಬೆಂಗಳೂರು : ರಾಜ್ಯ ಸರ್ಕಾರಿ ನೌಕರರು ಹಲವು ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದಂತ ಕೆಜಿಐಡಿ ವ್ಯವಸ್ಥೆ, ಕೊನೆಗೂ ಆನ್ ಲೈನ್ ಆಗಿದೆ. ಇನ್ಮುಂದೆ ಕೆಜಿಐಡಿ ಮಾಹಿತಿಯನ್ನು ಸರ್ಕಾರಿ ನೌಕರರು ಆನ್ ಲೈನ್ ಮೂಲಕವೇ ಮಾಡಬಹುದಾಗಿದೆ. ಹಾಗಿದ್ದರೇ.. ಕೆಜಿಐಡಿ ಆನ್ ಲೈನ್ ಮೂಲಕ ಹೇಗೆ ಬಳಕೆ ಮಾಡಬೇಕು ಎನ್ನುವ ಬಗ್ಗೆ ಮುಂದೆ ಓದಿ..
'ಮಾರ್ಚ್ 31'ರೊಳಗೆ ನೀವು ತಪ್ಪದೇ ಈ '7 ಹಣಕಾಸಿನ ಕೆಲಸ'ಗಳನ್ನು ಮಾಡಿ ಮುಗಿಸೋದು ಮರೆಯಬೇಡಿ.!
ಕರ್ನಾಟಕ ಸರ್ಕಾರ ವಿಮಾ ಇಲಾಖೆ(ಕೆಜಿಐಡಿ) ವ್ಯವಸ್ಥೆ, ಈಗ ಸರ್ಕಾರಿ ನೌಕರರಿಗೆ ಆನ್ ಲೈನ್ ವ್ಯವಸ್ಥೆ ಕಲ್ಪಿಸಿದೆ. ಇದಕ್ಕಾಗಿ https://kgidonline.karnataka.gov.in ಎನ್ನುವಂತ ಆನ್ ಲೈನ್ ವೆಬ್ ಸೈಟ್ ಬಿಡುಗಡೆ ಮಾಡಲಾಗಿದ್ದು, ರಾಜ್ಯ ಸರ್ಕಾರಿ ನೌಕರರ ಕೆಜಿಐಡಿ ಮಾಹಿತಿ, ಈಗ ಆನ್ ಲೈನ್ ನಲ್ಲೂ ಲಭ್ಯವಾಗಲಿದೆ.
ಕೆಜಿಐಡಿ ಖಾತೆಗೆ ಲಾಗಿನ್ ಆಗೋದು ಹೇಗೆ.?
ಹೊಸ ಕೆಜಿಐಡಿ ವಿಮಾದಾರರು ಲಾಗಿನ್ ಆಗೋದು ಹೇಗೆ.?
ಹೀಗೆ ಲಾಗಿನ್ ಆದ ನಂತ್ರ ರಾಜ್ಯ ಸರ್ಕಾರಿ ನೌಕರರು ಮಾಡಬೇಕಾದ ಮತ್ತೊಂದು ಕೆಲಸವೆಂದ್ರೇ.. ನ್ಯೂ ಬ್ಯೂಸಿನೆಸ್ ಟ್ಯಾಬ್ ಅನ್ನು ಆಯ್ಕೆ ಮಾಡಿಕೊಂಡು, ತದನಂತ್ರ Apply for KGID Policy ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಈ ಬಳಿಕ, ನಾನು ಸೂಚನೆಗಳನ್ನು ಓದಿದ್ದೇನೆ ಎಂದು ಒಪ್ಪಿಗೆ ಸೂಚಿಸಿ, Proceed to Application ಆಯ್ಕೆ , ಮುಂದುವರೆಯಿರಿ.
BREAKING : ರಮೇಶ್ ಜಾರಕಿಹೊಳಿ ಸಿಡಿ ಕೇಸ್ : ನಿರೀಕ್ಷಣಾ ಜಾಮೀನು ಕೋರಿ ಶಂಕಿತ 'ಲಕ್ಷ್ಮೀಪತಿ' ಅರ್ಜಿ
ಇದಾದ ನಂತ್ರ, ಮೊದಲಿಗೆ ಮೂಲ ವಿವರಗಳನ್ನು ಭರ್ತಿ ಮಾಡಬೇಕು. ಅಂದ್ರೇ.. ರಾಜ್ಯ ಸರ್ಕಾರಿ ನೌಕರರ ಶಾಶ್ವತ ವಿಳಾಸ ಮತ್ತು ಪಿನ್ ಕೋಡ್ ಅನ್ನು ಮಾತ್ರ ಭರ್ತಿ ಮಾಡಬೇಕು. ಆನಂತ್ರ ವೈವಾಹಿಕ ಸ್ಥಿತಿ ಅನ್ನು ಬದಲಿಸುವುದಿದ್ದರೇ ಬದಲಿಸಬಹುದು. ಇಲ್ಲದೇ ಹಾಗೆಯೇ ನೆಕ್ಟ್ ಆಯ್ಕೆ , ಮುಂದುವರೆಯಿರಿ.
ಬಿಗ್ ನ್ಯೂಸ್ : ರಾಜ್ಯದಲ್ಲಿ ಮತ್ತೆ ಎರಡು ವಾರ 'ಶಾಲಾ-ಕಾಲೇಜು' ಬಂದ್.?
ಕೆಜಿಐಡಿ ಟ್ಯಾಬ್ ನಲ್ಲಿ ಕಡಿತಗೊಳಿಸಬೇಕಾದ ಮಾಸಿಕ ವಿಮಾ ಕಂತಿನ ವಿವರ (ಕನಿಷ್ಠ) ರೂ ತೋರಿಸುತ್ತದೆ. ಪ್ರೀಮಿಯಂ ಮೊತ್ತವನ್ನು ನಮೂದಿಸಿ. ಒಂದು ವೇಳೆ ನೀವು ತಮ್ಮ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸಲು ಬಯಸಿದ್ರೇ.. ಅಂತಹ ಅರ್ಜಿದಾರರು ತಮ್ಮ ಸಂಬಳದ ಶೇ.50ಕ್ಕಿಂತ ಕಡಿಮೆ ಮೊತ್ತವನ್ನು ಉಲ್ಲೇಖಿಸಬಹುದಾಗಿದೆ. ಆನಂತ್ರ ನೆಕ್ಟ್ ಆಯ್ಕೆ , ಮುಂದೆ ಸಾಗಿ..
ಮೈಮುಲ್ ಚುನಾವಣೆಯಲ್ಲಿ ಸೋಲು : ಮಾಜಿ ಸಿಎಂ ಸಿದ್ದರಾಮಯ್ಯ ಸಂಬಂಧಿ ಕೆ.ಸಿ.ಬಲರಾಮು ಆತ್ಮಹತ್ಯೆ!
ಈಗ ಕುಟುಂಬದ ವಿವರ ಭರ್ತಿಯ ಪುಟದಲ್ಲಿ ಕುಟುಂಬದ ವಿವರ ಆಯ್ಕೆ ಮಾಡಿಕೊಂಡು, ನೌಕರರು ಕುಟುಂಬದ ಸದಸ್ಯರ ಅಂದರೆ ಸಂಬಂಧ, ಸದಸ್ಯರ ಹೆಸರು, ಹುಟ್ಟಿದ ದಿನಾಂಕ, ಜೀವಂತವೇ ಅಥವಾ ಮರಣ ಸ್ಥಿತಿಯ ವಿವರ ನಮೂದಿಸಿ ನೆಕ್ಟ್ ಮುಂದುವರೆದ್ರೇ ನಂತ್ರದ ಪುಟ ತೆರೆದುಕೊಳ್ಳಲಿದೆ.
BREAKING : 'RSS ಸರಕಾರ್ಯವಾಹ'ರಾಗಿ 'ದತ್ತಾತ್ರೇಯ ಹೊಸಬಾಳೆ' ಆಯ್ಕೆ
ಅರ್ಜಿದಾರರು ಈಗಿನ ಪುಟದಲ್ಲಿ ನಾಮಿನಿ ವಿವರಗಳನ್ನು ಭರ್ತಿ ಮಾಡಬೇಕಾಗಿರುತ್ತದೆ. ನಾಮ ನಿರ್ದೇಶಿತ ವ್ಯಕ್ತಿಯ ಹೆಸರು ಆಯ್ಕೆ ಮಾಡಿ ಮತ್ತು ಶೇಕಡಾವಾರು ಹಂಚಿಕೆಯನ್ನು ನಮೂದಿಸಿ. ಇಲ್ಲಿ ಗಮನಿಸಿ, ನೀವು ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಸೇರಿಸಬಹುದು. ಆದ್ರೇ.. ಒಟ್ಟು % ಪಾಲು 100%ಕ್ಕಿಂತ ಹೆಚ್ಚು ಅಥವಾ ಕಡಿಮೆ ಇರಬಾರದು.
'ಮಾಜಿ ಸಚಿವ ರಮೇಶ್ ಜಾರಕಿಹೊಳಿ' ಎಸ್‌ಐಟಿ ಅಧಿಕಾರಿಗಳ ಮುಂದೆ ಹೇಳಿದ್ದೇನು ಗೊತ್ತಾ.?
ಇದಾದ ಬಳಿಕ ಆನಂತ್ರದ ಪುಟದಲ್ಲಿ ನೀವು ವೈಯಕ್ತಿಕ ವಿವರಗಳನ್ನು, ಡಿಕ್ಲೆರೇಷನ್ ಕಂಡಿಷನ್ ಒಪ್ಪಿ, ಮಾಸಿಕ ಪ್ರೀಮಿಯಂ ಮೊತ್ತ ನಮೂದಿಸಿ, ನೌಕರರು ಪಾವತಿ ವಿಧಾನ ಆಯ್ಕೆ ಮಾಡಿಕೊಂಡರೇ.. ನೌಕರರ ಭೌತಿಕ ವಿವರಗಳ ಭರ್ತಿಯ ನಂತ್ರ, ನೌಕರರ ಆರೋಗ್ಯ ಸ್ಥಿತಿಯ ವಿವರ ಭರ್ತಿ ಮಾಡಿ, ವೈದ್ಯರ ವಿವರಗಳಲ್ಲಿ ರಾಜ್ಯ ಪರಿಮಿತಿಯೊಳಗಿನ ವೈದ್ಯರು, ಇತರೆ ರಾಜ್ಯ ವೈದ್ಯರು ಆಯ್ಕೆ ಮಾಡಿಕೊಂಡು ಒಪ್ಪಿಗೆ ಸೂಚಿಸಿದ್ರೇ.. ನಿಮ್ಮ ಕೆಜಿಐಡಿ ಖಾತೆ ಆನ್ ಲೈನ್ ಮೂಲಕ ಸಕ್ರೀಯವಾಗಲಿದೆ. *ಶೀಘ್ರದಲ್ಲಿ ಈ ವೆಬ್‌ಸೈಟ್ ನೌಕರರಿಗೆ ಲಭ್ಯವಾಗಲಿದೆ
ವರದಿ : ವಸಂತ ಬಿ ಈಶ್ವರಗೆರೆ
Disclaimer
This story is auto-aggregated by a computer program and has not been created or edited by Dailyhunt Publisher: Kannada News Now