Kannada News Now
1.8M Followersಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಪ್ರಸ್ತಾವನೆಯು ಸರ್ಕಾರದ ಮುಂದೆ ಇರುವುದಿಲ್ಲ ಎಂದು ಹೇಳುವ ಮೂಲಕ, ಬಿಗ್ ಶಾಕ್ ನೀಡಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವಂತ ಚಳಿಗಾಲದ ಅಧಿವೇಶನದಲ್ಲಿ ರಾಯಚೂರು ಗ್ರಾಮಾಂತರದ ವಿಧಾನಸಭೆ ಶಾಸಕ ಬಸನಗೌಡ ದದ್ದಲ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಸಿಎಂ ಬೊಮ್ಮಾಯಿ ಅವರು ಹೊಸ ಪಿಂಚಣಿ ರದ್ದು ಪಡಿಸಿ ಓಪಿಎಸ್ ಯೋಜನೆ ಜಾರಿ ಮಾಡುವ ಆಸಕ್ತಿ ಸರ್ಕಾರಕ್ಕೆ ಇದೆಯೇ ಎನ್ನುವ ಪ್ರಶ್ನೆ, ಕೇಂದ್ರ ಸರ್ಕಾರ 01-01-2004ರಂದು ಹೊಸ ರಾಷ್ಟ್ರೀಯ ಪಿಂಚಣಿ ಯೋಜನೆ ಅನುಷ್ಠಾನಗೊಳಿಸಿರುತ್ತದೆ. ಅದರಂತೆ ಕರ್ನಾಟಕದಲ್ಲಿ 31-03-2006ರ ಅನ್ವಯ ದಿನಾಂಕ01-04-2006ರಂದು ಮತ್ತು ತದನಂತರ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿರುತ್ತದೆ ಎಂದಿದ್ದಾರೆ.
ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವಂತೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಗಮನಕ್ಕೆ ಬಂದಿದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ್ದು, ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಪ್ರಸ್ತಾಪನೆಯು ಸರ್ಕಾರದ ಮುಂದೆ ಇರುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಇನ್ನೂ ಹೊಸ ಪಿಂಚಣಿ ಯೋಜನೆಯ ಸರ್ಕಾರಿ ನೌಕರರನ್ನು ಹಳೇ ಪಿಂಚಣಿ ಯೋಜನೆಯ ವ್ಯಾಪ್ತಿಗೆ ತರಲ ಸಮಿತಿಯನ್ನು ರಚಿಸುವುದಿಲ್ಲ. ರಾಜ್ಯಧ್ಯಂತ ದಿನಾಂಕ 30-11-2022ರವರೆಗೆ ಸರ್ಕಾರಿ ವಲಯದ 2,60,648 ನೌಕರರು, ಸ್ವಾಯತ್ತ ಸಂಸ್ಥೆ ವಲಯದಲ್ಲಿ 37,277 ಸೇರಿದಂತೆ ಒಟ್ಟು 2,97,925 ಎನ್ ಪಿಎಸ್ ನೌಕರರರು ಇರುವುದಾಗಿ ಹೇಳಿದ್ದಾರೆ.
Disclaimer
This story is auto-aggregated by a computer program and has not been created or edited by Dailyhunt Publisher: Kannada News Now