Kannada News Now
1.7M Followersಬೆಂಗಳೂರು : ಸರ್ಕಾರಿ ನೌಕರರ ಸೇವಾ ಸಂಘಗಳನ್ನು ಜಾತಿ, ಧರ್ಮ, ಇತ್ಯಾದಿ ಒಳಗಿರುವ ಯಾವುದೇ ಸಮೂಹ ಆಧಾರದ ಮೇಲೆ ರಚಿಸತಕ್ಕದ್ದಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ತೇಜಾವತಿ ಎನ್ ಆದೇಶ ಹೊರಡಿಸಿದ್ದು, ನಿರ್ದಿಷ್ಟ ವೃಂದ ಅಥವಾ ವರ್ಗಕ್ಕೆ ಸೇರಿರುವ ವ್ಯಕ್ತಿಗಳಲ್ಲಿ ಶೇ.50 ಕ್ಕಿಂತ ಹೆಚ್ಚು ಸದಸ್ಯತ್ವ ಹೊಂದಿರುವ ಯಾವುದೇ ಸೇವಾ ಸಂಘಕ್ಕೆ ಮಾನ್ಯತೆ ನೀಡಬಹುದಾಗಿದ್ದು, ಎಲ್ಲಾ ಅಂತಹ ಸರ್ಕಾರಿ ನೌಕರರು ಸಂಘಟದ ಸದಸ್ಯತ್ವಕ್ಕೆ ಅರ್ಹರಾಗಿರುತ್ತಾರೆ.
ಸರ್ಕಾರಿ ನೌಕರರ ಸೇವಾ ಸಂಘಗಳಿಗೆ ಮಾನ್ಯತೆ ನೀಡುವಾಗ ಸದರಿ ಸಂಘವು ನಿರ್ದಿಷ್ಟ ವೃಂದ ಅಥವಾ ವರ್ಗಕ್ಕೆ ಸೇರಿರುವ ಸೇವಾ ಸಂಘಗಳಿಗೆ ಮಾತ್ರ ಇಲಾಖೆಗಳು ಮಾನ್ಯತೆ ನೀಡುವಂತೆ ಮತ್ತು ಈಗಾಗಲೇ ಜಾತಿ , ಧರ್ಮ , ಇತ್ಯಾದಿ ಒಳಗಿರುವ ಯಾವುದೇ ಸಮೂಹದ ಮೇಲೆ ರಚಿತವಾಗಿರುವ ಸೇವಾ ಸಂಘಗಳ ಮಾನ್ಯತೆಯನ್ನು ರದ್ದುಪಡಿಸುವಂತೆ ಹಾಗೂ ಮಾನ್ಯತೆ ಪಡೆಯದೇ ಚಾಲ್ತಿಯಲ್ಲಿರುವ ಸಂಘಗಳನ್ನು ನಿರ್ಬಂಧಿಸುವಂತೆ ಆಡಳಿತ ಇಲಾಖೆಗಳಿಗೆ/ಸಕ್ಷಮ ಪ್ರಾಧಿಕಾರಗಳಿಗೆ ಸೂಚನೆ ನೀಡಲಾಗಿದೆ.
BIGG BREAKING NEWS: 'ವರನಟ ಡಾ.ರಾಜ್ ಕುಮಾರ್' ಕಂಚಿನ ಪುತ್ಥಳಿ ಕಳ್ಳತನ
'ಮೆಟ್ರಿಕ್' ನಂತರದ ವಿದ್ಯಾರ್ಥಿ ವೇತನ : ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ
Disclaimer
This story is auto-aggregated by a computer program and has not been created or edited by Dailyhunt Publisher: Kannada News Now