Kannada News Now
Kannada News Now

ರಾಜ್ಯ 'ಸರ್ಕಾರಿ ನೌಕರ'ರಿಗೆ ಗುಡ್ ನ್ಯೂಸ್ : ಸದ್ಯದಲ್ಲೇ 'ತುಟ್ಟಿಭತ್ಯೆ(DA)' ಬಿಡುಗಡೆ, ಸದನದಲ್ಲಿ ಸಿಎಂ ಯಡಿಯೂರಪ್ಪ ಮಾಹಿತಿ

ರಾಜ್ಯ 'ಸರ್ಕಾರಿ ನೌಕರ'ರಿಗೆ ಗುಡ್ ನ್ಯೂಸ್ : ಸದ್ಯದಲ್ಲೇ 'ತುಟ್ಟಿಭತ್ಯೆ(DA)' ಬಿಡುಗಡೆ, ಸದನದಲ್ಲಿ ಸಿಎಂ ಯಡಿಯೂರಪ್ಪ ಮಾಹಿತಿ
  • 634d
  • 1.2k shares

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಲಾಕ್ ಡೌನ್ ನಿಂದ ಉಂಟಾದಂತ ಆರ್ಥಿಕ ಪರಿಸ್ಥಿತಿಯಿಂದಾಗಿ ತುಟ್ಟಿ ಭತ್ಯೆ(ಡಿಎ) ಬಿಡುಗಡೆಯನ್ನು ರಾಜ್ಯ ಸರ್ಕಾರ ತಡೆ ಹಿಡಿದಿತ್ತು. ಇದೀಗ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

BIG NEWS : ಏಪ್ರಿಲ್ 5 ರಿಂದ ದೇಶಾದ್ಯಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ

ಈ ಕುರಿತಂತೆ ಕರ್ನಾಟಕ ವಿಧಾನ ಪರಿಷತ್ ನಲ್ಲಿ ಪದವೀಧರ ಕ್ಷೇತ್ರದ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಕೇಳಿದಂತ ರಾಜ್ಯ ಸರ್ಕಾರ ನೌಕರರಿಗೆ ಯಾವಾಗಿನಿಂದ ತುಟ್ಟು ಭತ್ಯೆಯನ್ನು ತಡೆಹಿಡಿಯಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ 2018ರ ಪರಿಷ್ಕೃತ ರಾಜ್ಯ ವೇತನ ಶ್ರೇಣಿಗಳಲ್ಲಿ ತುಟ್ಟಿ ಭತ್ಯೆಯನ್ನು ಮುಂಜೂರು ಮಾಡುವಲ್ಲಿ ಕೇಂದ್ರ ಸರ್ಕಾರದ ತುಟ್ಟಿ ಭತ್ಯೆ ದರಗಳೊಂದಿಗೆ ಹೋಲಿಸಿ, ಲೆಕ್ಕಹಾಕಿ, ಮಂಜೂರು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

No Internet connection

Link Copied