Friday, 24 Sep, 10.45 am Kannada News Now

ಹೋಮ್
ರಾಜ್ಯದಲ್ಲೇ ಪ್ರಥಮ ಪ್ರಯೋಗ : 'ಹಾವೇರಿ ಜಿಲ್ಲಾ ಪಂಚಾಯ್ತಿ'ಯಿಂದ ವಿನೂತನ ಕಾರ್ಯ, ಕಸ ವಿಲೇವಾರಿಗೆ ನಿಂತ 'ನಾರಿ ಶಕ್ತಿ'

ಹಾವೇರಿ : ಬಹುತೇಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಸ ವಿಲೇವಾರಿ ಕೆಲಸ ಮಾಡುತ್ತಿರೋರು ಪುರುಷರೇ ಆಗಿದ್ದಾರೆ. ಆದ್ರೇ.. ಹಾವೇರಿ ಜಿಲ್ಲಾ ಪಂಚಾಯ್ತಿಯಿಂದ ರಾಜ್ಯದಲ್ಲೇ ಪ್ರಥಮ ಎನ್ನುವಂತೆ ವಿನೂತನ ಕಾರ್ಯಕ್ಕೆ ಕೈಹಾಕಿದ್ದು, ಕಸ ವಿಲೇವಾರಿಯಲ್ಲಿ ನಾರಿ ಶಕ್ತಿಯನ್ನು ಬಳಸಿಕೊಳ್ಳಲಾಗಿದೆ.

ತೈಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಿಂದ ಟಾಂಗಾ Rally : 'ಟಾಂಗಾ' ಮೂಲಕ ಸರ್ಕಾರಕ್ಕೆ 'ಟಾಂಗ್'

ಹಾವೇರಿ ಜಿಲ್ಲಾ ಪಂಚಾಯ್ತಿಯಿಂದ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕಸ ವಿಲೇವಾರಿಗೆ ಬಳಸುವಂತ ಸ್ವಚ್ಛ ವಾಹಿನಿ ವಾಹನ ಚಾಲನೆಗೆ, ಆಯ್ತ 32 ಮಹಿಳೆಯರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇಂತಹ ಮಹಿಳೆಯರಿಗೆ ಜಿಲ್ಲಾ ಪಂಚಾಯ್ತಿಯಿಂದ ತರಬೇತಿ ಕೂಡ ನೀಡಲಾಗಿದ್ದು, ಹಾವೇರಿ ಜಿಲ್ಲೆಯ ಆಯ್ತ ಗ್ರಾಮ ಪಂಚಾಯ್ತಿಗಳಲ್ಲಿ ಮಹಿಳಾ ಮಣಿಗಳು ಕೂಡ ಕಸ ವಿಲೇವಾರಿ ನಡೆಸಲಿದ್ದಾರೆ.

BIG BREAKING : ಯಶವಂತಪುರದ ಬಿಬಿಎಂಪಿ ಆಸ್ಪತ್ರೆಯಲ್ಲಿ ವೈದ್ಯೆ, ಸಿಬ್ಬಂದಿಗಳ ಮೇಲೆ ಹಲ್ಲೆಗೆ ಯತ್ನ

ಅಂದಹಾಗೇ ಗ್ರಾಮ ಪಂಚಾಯ್ತಿ ಮಹಿಳಾ ಒಕ್ಕೂಟಗಳ ಗುಂಪಿನ ಸದಸ್ಯರಿಗೆ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಘನ ತ್ಯಾಜ್ಯ ನಿರ್ವಹಣೆ ಅನುಷ್ಠಾನ ತರಬೇತಿ ನೀಡುತ್ತಿದೆ. ಈ ತರಬೇತಿಯನ್ನು 32 ಮಹಿಳಾ ಸದಸ್ಯರು ಪೂರ್ಣಗೊಳಿಸಿದ್ದು, ಇದೀಗ ಹಾವೇರಿ ಜಿಲ್ಲೆಯ ಆಯ್ತ ಗ್ರಾಮ ಪಂಚಾಯ್ತಿಗಳ ಮಟ್ಟದಲ್ಲಿ ಕಸ ವಿಲೇವಾರಿಯಲ್ಲಿ ತೊಡಗಿದ್ದಾರೆ.

BIG NEWS : ಸೆ.27ಕ್ಕೆ ಭಾರತ್ ಬಂದ್ : ಪಾಪ್ಯುಲರ್ ಫ್ರಂಟ್ ನಿಂದ ಸಂಪೂರ್ಣ ಬೆಂಬಲ ಘೋಷಣೆ

ಇನ್ನೂ ಬೆಂಗಳೂರಿನಿಂದ ಬಂದಂತ ನುರಿತ ವಾಹನ ಚಾಲಕರಿಂದ 32 ಮಹಿಳೆಯರಿಗೆ ವಾಹನ ತರಬೇತಿ ನೀಡಲಾಗಿದೆ. ಹಾವೇರಿ ಸಮೀಪದ ದೇವಗಿರಿಯಲ್ಲಿ ರೂಡ್ ಸೆಟ್ ಸಂಸ್ಥೆಯಿಂದ ತರಬೇತಿ ನೀಡಲಾಗಿದ್ದು, ಕಸ ವಿಲೇವಾರಿಗೆ ಮಹಿಳೆಯರು ತೊಡಗಿಸಿಕೊಳ್ಳೋದಕ್ಕೆ ಅವಕಾಶ ನೀಡಿದ್ದಕ್ಕೆ ತರಬೇತಿ ಪಡೆದವರು ಸಂತಸ ವ್ಯಕ್ತ ಪಡಿಸಿದ್ದಾರೆ.

BREAKING NEWS : ಭಾರತದಲ್ಲಿ 24 ಗಂಟೆಗಳಲ್ಲಿ 31,382 ಹೊಸ ಕೋವಿಡ್ ಪ್ರಕರಣ, 318 ಮಂದಿ ಸಾವು



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top