Kannada News Now
1.7M Followersಬೆಂಗಳೂರು : ರಾಜ್ಯ ಸರ್ಕಾರದಿಂದ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಂತ ಅನುದಾನರಹಿತ ಖಾಸಗಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರಿಗೆ 5 ಸಾವಿರ ವಿಶೇಷ ಆರ್ಥಿಕ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಿತ್ತು. ಇಂತಹ ಲಾಕ್ ಡೌನ್ ವಿಶೇಷ ಪರಿಹಾರದ ಪ್ಯಾಕೇಜ್ ಹಣ ಹೇಗೆ ಪಡೆಯೋದು ಎನ್ನುವ ಬಗ್ಗೆ ಮುಂದೆ ಓದಿ..
ಈ ಕುರಿತಂತೆ ವಿಧಾನ ಪರಿಷತ್ ಸದಸ್ಯರಾದಂತ ಕೆ ಟಿ ಶ್ರೀಕಂಠೇಗೌಡ ಅವರು, ಮಾಹಿತಿಯನ್ನು ಹಂಚಿಕೊಂಡಿದ್ದು, ಆತ್ಮೀಯ ಶಿಕ್ಷಕ ಬಂಧುಗಳೇ.. ಕೋವಿಡ್ 2ನೇ ಅಲೆಯ ಪರಿಹಾರದ ಪ್ಯಾಕೇಜ್ ಅನ್ನು ಅನುದಾನ ರಹಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಕರಿಗೆ ತಲಾ 5 ಸಾವಿರ ರೂ ಗಳನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
7th Pay Commission: ಕೇಂದ್ರ ಸರ್ಕಾರಿ ನೌಕರರ DA, DR ಕುರಿತು ಮುಖ್ಯ ಮಾಹಿತಿ
ಇಂತಹ ಲಾಕ್ ಡೌನ್ ವಿಶೇಷ ಪರಿಹಾರ ಹಣವನ್ನು ರಾಜ್ಯದ ಅನುದಾನ ರಹಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರು ಪಡೆಯಲು, ಅಗತ್ಯ ದಾಖಲೆಗಳನ್ನು ಶಾಲಾ ಮುಖ್ಯ ಶಿಕ್ಷಕರ ಮೂಲಕ ಬಿಇಓಗಳಿಗೆ ಪ್ರಸ್ತಾವನೆ ಸಲ್ಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಶಿಕ್ಷಕರು 5 ಸಾವಿರ ಪರಿಹಾರ ಹಣ ಪಡೆಯೋದಕ್ಕೆ ಸಲ್ಲಿಸಬೇಕಾದ ದಾಖಲೆಗಳು
ಈ ಮೇಲ್ಕಂಡ ದಾಖಲಾತಿಗಳನ್ನು ರಾಜ್ಯದ ಅನುದಾನರಹಿತ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರು ತಮ್ಮ ಶಾಲೆಯ ಮುಖ್ಯ ಶಿಕ್ಷಕರ ಮೂಲಕ, ಆಯಾ ವ್ಯಾಪ್ತಿಯ ಬಿಇಓಗಳಿಗೆ 5 ಸಾವಿರ ಲಾಕ್ ಡೌನ್ ವಿಶೇಷ ಪರಿಹಾರದ ಹಣ ಪಡೆಯಲು ಪ್ರಸ್ತಾವನೆ ಸಲ್ಲಿಸಬೇಕು. ಹೀಗೆ ಸಲ್ಲಿಸಿದ ನಂತ್ರ, ಶಿಕ್ಷಕರ ಬ್ಯಾಂಕ್ ಖಾತೆಗೆ ನೇರವಾಗಿ ವಿಶೇಷ ಪರಿಹಾರದ ಹಣ ಜಮೆ ಆಗಲಿದೆ.
ವರದಿ : ವಸಂತ ಬಿ ಈಶ್ವರಗೆರೆ
Disclaimer
This story is auto-aggregated by a computer program and has not been created or edited by Dailyhunt Publisher: Kannada News Now