Kannada News Now

1.7M Followers

ರಾಜ್ಯದ 'ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ'ರಿಗೆ ಗುಡ್ ನ್ಯೂಸ್: ಡಿ.24ರಿಂದ ಜಿಲ್ಲಾ ಕೇಂದ್ರದಲ್ಲೇ 'ವರ್ಗಾವಣೆಗೆ ಕೌನ್ಸಿಲಿಂಗ್' ಹಾಜರಾಗಲು ಅವಕಾಶ

21 Dec 2021.12:53 PM

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರು ( Head Master ) ಹಾಗೂ ತತ್ಸಮಾನ ಗ್ರೂಪ್-ಬಿ ವೃಂದದ ಅಂತರ ವಿಭಾಗದ ಕೋರಿಕೆ ವರ್ಗಾವಣೆ ( Teacher Transfer ) ದಿನಾಂಕ 24-12-2021ರಿಂದ ಆರಂಭಗೊಳ್ಳಲಿದೆ. ಈ ವರ್ಗಾವಣೆಯ ಕೌನ್ಸಿಲಿಂಗ್ ಗಾಗಿ ಜಿಲ್ಲಾ ಕೇಂದ್ರಗಳಲ್ಲಿಯೇ ಕೌನ್ಸಿಲಿಂಗ್ ಗೆ ಹಾಜರಾಗಲು ಅವಕಾಶ ನೀಡಿದೆ.

ಮುಷ್ಕರದ ವೇಳೆ ವಜಾಗೊಂಡಿದ್ದ KSRTC ನೌಕರರಿಗೆ ಭರ್ಜರಿ ಗುಡ್ ನ್ಯೂಸ್: 4 ವಾರದಲ್ಲೇ ಮರುನೇಮಕಕ್ಕೆ ಸಾರಿಗೆ ಸಚಿವರಿಂದ ಅಧಿಕಾರಿಗಳಿಗೆ ಡೆಡ್ ಲೈನ್

ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ( School Education Department ) ಜಂಟಿ ನಿರ್ದೇಶಕರು ಮಾಹಿತಿ ನೀಡಿದ್ದು, ದಿನಾಂಕ 24-12-2021ರಿಂದ ಸರ್ಕಾರಿ ಪ್ರೌಢ ಶಾಲಾ ( High School ) ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್-ಬಿ ವೃಂದದ ಅಂತರ ವಿಭಾಗದ ಕೋರಿಕೆ ವರ್ಗಾವಣೆಗೆ ಕೌನ್ಸಿಲಿಂಗ್ ಆರಂಭಗೊಳ್ಳಲಾಗುತ್ತಿದೆ. ಕೌನ್ಸಿಲಿಂಗ್ ಕೇಂದ್ರೀಕೃತ ಮಾದರಿಯಲ್ಲಿ ಒಂದೇ ಸ್ಥಳದಲ್ಲಿ ಹಮ್ಮಿಕೊಳ್ಳುವ ಬದಲಿಗೆ, ಆಯಾ ಜಿಲ್ಲೆಗೆ ಸಂಬಂಧಪಟ್ಟ ಅಭ್ಯರ್ಥಿಗಳು ಅದೇ ಜಿಲ್ಲೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಹಾಜರಾಗಲು ಅನುವು ಮಾಡಿಕೊಡಲಾಗಿದೆ.

'ಮಂಗಳಮುಖಿ'ಯರಿಗೆ ಸುವರ್ಣಾವಕಾಶ: ರಾಜ್ಯ 'ಪೊಲೀಸ್ ಇಲಾಖೆ'ಯಲ್ಲಿ ಖಾಲಿ ಇರುವ 'PSI ಹುದ್ದೆ'ಗಳಿಗೆ ಅರ್ಜಿ ಆಹ್ವಾನ

ಈ ಹಿನ್ನಲೆಯಲ್ಲಿ ಅಭ್ಯರ್ಥಿಗಳು ಆಯಾ ಜಿಲ್ಲೆಯ ಉಪ ನಿರ್ದೇಶಕರ ಕಚೇರಿಯಲ್ಲಿಯೇ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಹಾಜರಾಗಿ, ಜೂಮ್ ಮೀಟ್ ಮಾದರಿಯಲ್ಲಿ ಪಾಲ್ಗೊಂಡಿ, ವಿಭಾಗದ ಯಾವುದೇ ಖಾಲಿ ಹುದ್ದೆಯನ್ನು ನಿಯಮಾನುಸಾರ ಆಯ್ಕೆ ಮಾಡಿಕೊಳ್ಳಬಹುದು. ಆ ನಿಟ್ಟಿನಲ್ಲಿ ಉಪ ನಿರ್ದೇಶಕರು ಸಮರ್ಪಕವಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.

'ಸರ್ಕಾರಿ ನೌಕರ'ರಿಗೆ ಭರ್ಜರಿ ಸಿಹಿಸುದ್ದಿ: 2022ನೇ ಸಾಲಿನ 'ಗಳಿಕೆ ರಜೆ ಆಧ್ಯರ್ಪಿಸಿ ನಗದೀಕರಿಸ'ಲು ಅನುಮತಿಸಿ ರಾಜ್ಯ ಸರ್ಕಾರ ಆದೇಶ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags