Sunday, 11 Apr, 1.11 pm Kannada News Now

ಕರ್ನಾಟಕ
ರೈತ ಸಮುದಾಯಕ್ಕೆ ಸಿಹಿಸುದ್ದಿ : ರಸಗೊಬ್ಬರ ಹಳೆ ದರದಲ್ಲೇ ವಿತರಣೆ : ಡಿ.ವಿ. ಸದಾನಂದಗೌಡ

ಕಲಬುರ್ಗಿ : ರೈತ ಸಮುದಾಯಕ್ಕೆ ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಸಿಹಿಸುದ್ದಿಯೊಂದನ್ನು ನೀಡಿದ್ದು, ದೇಶದಲ್ಲಿ ಇನ್ನೂ ಒಂದೂವರೆ ತಿಂಗಳಿಗೆ ಸಾಲುವಷ್ಟು ಗೊಬ್ಬರ ದಾಸ್ತಾನು ಇದೆ. ಇದಕ್ಕೆ ಹೊಸ ದರ ಅನ್ವಯಿಸದೇ ಹಳೆ ದರದಲ್ಲೇ ರೈತರಿಗೆ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಸಗೊಬ್ಬರ ಬೆಲೆ ಏರಿಕೆ ಸಂಬಂಧ ಈಗಾಗಲೇ ಒಮ್ಮೆ ಸಭೆ ನಡೆಸಲಾಗಿದೆ.ಸೋಮವಾರ ಮತ್ತೊಮ್ಮೆ ಸಭೆ ನಡೆಸಲಾಗುತ್ತದೆ. ಸಭೆ ಬಳಿಕ ರೈತರಿಗೆ ನಿರ್ದಿಷ್ಟ ಭರವಸೆ ನೀಡಲಾಗುವುದು ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೊಬ್ಬರ ಬೆಲೆ ಏರಿಕೆಯಾಗಿದೆ. ಡಿಎಪಿ ದರದಲ್ಲೇ ಶೇ. 200-220 ರಷ್ಟು ಹೆಚ್ಚಳವಾಗಿದೆ. ಇದು ನಮ್ಮ ದೇಶದಲ್ಲೂ ರಸಗೊಬ್ಬರ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top