Dailyhunt Logo
  • Light mode
    Follow system
    Dark mode
    • Play Story
    • App Story
ರೂ. 2000 ದಾಟಿದರೂ ಗ್ರಾಹಕರಿಗೆ UPI ಉಚಿತ, ಯಾವುದೇ ಶುಲ್ಕವಿಲ್ಲ: ಗೊಂದಲಕ್ಕೆ ತೆರೆ ಎಳೆದ ಕೇಂದ್ರ ಸರ್ಕಾರದ ಹೊಸ ಗೆಜೆಟ್ ಅಧಿಸೂಚನೆ!

ರೂ. 2000 ದಾಟಿದರೂ ಗ್ರಾಹಕರಿಗೆ UPI ಉಚಿತ, ಯಾವುದೇ ಶುಲ್ಕವಿಲ್ಲ: ಗೊಂದಲಕ್ಕೆ ತೆರೆ ಎಳೆದ ಕೇಂದ್ರ ಸರ್ಕಾರದ ಹೊಸ ಗೆಜೆಟ್ ಅಧಿಸೂಚನೆ!

Kannada News Now 3 weeks ago

ನವದೆಹಲಿ:ಸಣ್ಣ ಪ್ರಮಾಣದ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ಸೇವೆಗಳ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳು ಹಾಗೂ ರೂಪೇ ಡೆಬಿಟ್ ಕಾರ್ಡ್ ಮೂಲಕ ಮಾಡುವ ಪಾವತಿಗಳ ಮೇಲೆ ಯಾವುದೇ ಶುಲ್ಕ ವಿಧಿಸಬಾರದು ಎಂದು ಬ್ಯಾಂಕುಗಳು ಮತ್ತು ಪಾವತಿ ಸೇವಾ ಸಂಸ್ಥೆಗಳಿಗೆ ಆದೇಶಿಸಿದೆ.

ಸೆಪ್ಟೆಂಬರ್ 14 ರಂದು ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ 2007 ರ ಸೆಕ್ಷನ್ 10A ಅಡಿಯಲ್ಲಿ ಸರ್ಕಾರ ಈ ಕುರಿತು ಅಧಿಕೃತ ಗೇಜೆಟ್ ಅಧಿಸೂಚನೆ ಹೊರಡಿಸಿದೆ.

ಹೊಸ ನಿಯಮದ ಪ್ರಕಾರ, 2,000 ರೂಪಾಯಿವರೆಗಿನ ಡಿಜಿಟಲ್ ಪಾವತಿಗಳಿಗೆ ಗ್ರಾಹಕರಾಗಲಿ ಅಥವಾ ಹಣ ಪಡೆಯುವ ವ್ಯಾಪಾರಿಗಳಾಗಲಿ ಯಾವುದೇ ರೀತಿಯ ನೇರ ಅಥವಾ ಪರೋಕ್ಷ ಸೇವಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಉದಾಹರಣೆಗೆ, ಕಿರಾಣಿ ಅಂಗಡಿ ಅಥವಾ ರಸ್ತೆಬದಿಯ ವ್ಯಾಪಾರಿಗಳಿಗೆ 800 ರೂಪಾಯಿಯನ್ನು ಯುಪಿಐ ಅಥವಾ ರೂಪೇ ಡೆಬಿಟ್ ಕಾರ್ಡ್ ಮೂಲಕ ಪಾವತಿಸಿದರೆ, ಬ್ಯಾಂಕುಗಳು ಇಬ್ಬರ ಮೇಲೆಯೂ ಹೆಚ್ಚುವರಿ ಶುಲ್ಕ ಹೇರುವಂತಿಲ್ಲ. ಸಣ್ಣ ಉದ್ಯಮಿಗಳು ಹಾಗೂ ದಿನನಿತ್ಯದ ಸಣ್ಣ ಮೊತ್ತದ ವಹಿವಾಟು ಮಾಡುವ ಸಾರ್ವಜನಿಕರಿಗೆ ಈ ನಿಯಮದಿಂದ ಭಾರಿ ಅನುಕೂಲವಾಗಲಿದೆ.

ಆದಾಗ್ಯೂ, ಈ ಅಧಿಸೂಚನೆಯು 2,000 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಯುಪಿಐ ವಹಿವಾಟುಗಳ ಮೇಲಿನ ಶುಲ್ಕದ ಬಗ್ಗೆ ಯಾವುದೇ ಸ್ಪಷ್ಟ ಉಲ್ಲೇಖ ಮಾಡಿಲ್ಲ. ಆದರೆ, ಸರ್ಕಾರವು ಇತ್ತೀಚೆಗೆ ಮಂಡಿಸಿದ ವಿಧೇಯಕದ ಪ್ರಕಾರ, ಭವಿಷ್ಯದಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಮೌಲ್ಯದ ಆಯ್ಕೆ ಮಾಡಿದ ವ್ಯಾಪಾರಿ ವಹಿವಾಟುಗಳಿಗೆ ಮಾತ್ರ ನಾಮಮಾತ್ರದ ಮರ್ಚೆಂಟ್ ಡಿಸ್ಕೌಂಟ್ ದರ (MDR) ವಿಧಿಸುವ ಬಗ್ಗೆ ಚರ್ಚೆಯಿದೆಯಾದರೂ, ಸಾಮಾನ್ಯ ಗ್ರಾಹಕರ ವೈಯಕ್ತಿಕ ಪಾವತಿಗಳು ಮತ್ತು ಸಣ್ಣ ವಹಿವಾಟುಗಳು ಸಂಪೂರ್ಣವಾಗಿ ಉಚಿತವಾಗಿಯೇ ಉಳಿಯಲಿವೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now