Thursday, 28 Jan, 10.50 am Kannada News Now

ಕರ್ನಾಟಕ
'ಸಹಾಯಧನ'ಕ್ಕಾಗಿ 'ಕ್ರೀಡಾಪಟು'ಗಳಿಂದ ಅರ್ಜಿ ಆಹ್ವಾನ

ಹಾವೇರಿ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯಡಿ ನೊಂದಾಯಿತ ಕ್ರೀಡಾ ವಿಜ್ಞಾನ ಸಂಸ್ಥೆಗಳ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅಂತರರಾಷ್ಟ್ರೀಯ, ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಅಥವಾ ರಾಜ್ಯ ಮಟ್ಟದ/ಅಂತರ ರಾಜ್ಯ/ಅಂತರ ವಿಶ್ವವಿದ್ಯಾಲಯ/ರಾಜ್ಯ ಮಟ್ಟದ ಶಾಲಾ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ಸಾಧನೆ ದಾಖಲಿಸಿರುವ ಜಿಲ್ಲೆಯ ಕ್ರೀಡಾಪಟುಗಳು(ವಿಕಲಚೇತನ ಕ್ರೀಡಾಪಟುಗಳು ಸೇರಿದಂತೆ) ತಮ್ಮ ಸಾಧನೆಯ ವಿವರಗಳನ್ನು ಸಲ್ಲಿಸಬೇಕು.

ದೇಶದ ಒಟ್ಟು ಕೊರೋನಾ ಸೋಂಕಿತರಲ್ಲಿ ಮಹಾರಾಷ್ಟ್ರ, ಕೇರಳದಲ್ಲೇ ಶೇ.70ರಷ್ಟು ಪ್ರಕರಣಗಳು ದಾಖಲು

ಅಭ್ಯರ್ಥಿಯು ಭಾರತೀಯ ನಾಗರಿಕರಾಗಿದ್ದು ಅಥವಾ ಕರ್ನಾಟಕದಲ್ಲಿ ಕನಿಷ್ಠ ಹತ್ತು ವರ್ಷಗಳ ಕಾಲ ಸಾಮಾನ್ಯ ನಿವಾಸಿಯಾಗಿರುವ ಹಿಂದಿನ ಮೂರು ವರ್ಷಗಳಲ್ಲಿ ನಿರಂತರವಾಗಿ ರಾಜ್ಯವನ್ನು ಪ್ರತಿನಿಧಿಸುವ ಯುವ ಕ್ರೀಡಾಪಟುವಾಗಿರಬೇಕು.

ಅಂತರರಾಷ್ಟ್ರೀಯ, ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಅಥವಾ ರಾಜ್ಯ ಮಟ್ಟದ/ಅಂತರ ರಾಜ್ಯ/ಅಂತರ ವಿಶ್ವವಿದ್ಯಾಲಯ/ರಾಜ್ಯ ಮಟ್ಟದ ಶಾಲಾ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ಸಾಧನೆ ದಾಖಲಿಸಿರುವ ಕ್ರೀಡಾಪಟುಗಳು(ವಿಕಲಚೇತನ ಕ್ರೀಡಾಪಟುಗಳು ಸೇರಿದಂತೆ) ಹಾಗೂ ಆಯಾ ಕ್ರೀಡೆಗಳ ವೈಶಿಷ್ಟ್ಯತೆ ಆಧರಿಸಿ, ಭಾಗವಹಿಸಿವಿಕೆ/ಪದಕ ವಿಜೇತರಾಗಿ ಗಣನೀಯ ಸಾಧನೆ ದಾಖಲಿಸಿದ/ದಾಖಲಿಸುವ ಸಂಭಾವ್ಯ ಕ್ರೀಡಾಪಟುಗಳು ಆಗಿರಬೇಕು.

BIG BREAKING : ಬೆಳ್ಳಂಬೆಳಗ್ಗೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಭೂಕಂಪನ!

ಒಂದು ಬಾರಿ ಈ ಕಾರ್ಯಕ್ರಮದಡಿ ಸೌಲಭ್ಯ ಪಡೆದ ಕ್ರೀಡಾಪಟುಗಳು ಮುಂದಿನ ಸಾಲುಗಳಲ್ಲಿ ಸೌಲಭ್ಯ ಪಡೆಯಲು ಹಿಂದಿನ ಸಾಲುಗಳ ಸಾಧನೆಯೊಂದಿಗೆ ಈಗಾಗಲೇ ಪಡೆದ ಸೌಲಭ್ಯಗಳ ಸದ್ವಿನಿಯೋಗ ಮಾಡಿರುವ ಬಗ್ಗೆ ಹಾಗೂ ಕ್ರೀಡಾ ಸಾಧನೆಯಲ್ಲಿನ ಪ್ರಗತಿಯ ಬಗ್ಗೆ ಮರು ನೋಂದಣಿಯಾಗಿರುವ ಕ್ರೀಡಾಪಟುಗಳು ಸೂಕ್ತದಾಖಲೆಗಳನ್ನು ಒದಗಿಸಬೇಕು. 19 ವರ್ಷದೊಳಗಿನ ಯುವ ಕ್ರೀಡಾಪಟುಗಳಿಗೆ ಈ ಕಾರ್ಯಕ್ರಮದಡಿ ಸೌಲಭ್ಯ ನೀಡಲು ಆದ್ಯತೆ ನೀಡುವುದು ಹಾಗೂ ಕನಿಷ್ಟ 75%ರಷ್ಟು ಪ್ರಾತಿನಿಧ್ಯ ನೀಡಲಾಗುವುದು.

ಕ್ರೀಡಾಪಟುಗಳ ಸಾಧನೆ ಪಟ್ಟಿಯನ್ನು ದಿನಾಂಕ 03-02-2021ರೊಳಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹಾವೇರಿ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 18004251448 ಅಥವಾ 08375-232070ನ್ನು ಸಂಪರ್ಕಿಸಬಹುದು.Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top