Kannada News Now
1.7M Followers ಬೆಂಗಳೂರು : 2021-22ನೇ ಸಾಲಿಗೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವೇತನ ವೆಚ್ಚದ ಬಾಬ್ತುಗಳಿಗೆ ಎರಡನೇ ಕಂತಿನ 4 ತಿಂಗಳ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ.
ಅಲೆಮಾರಿ/ಅರೆಮಾರಿ ಜನಾಂಗದವರಿಂದ ಮನೆ ನಿರ್ಮಾಣ ಕೋರಿ ಅರ್ಜಿ ಆಹ್ವಾನ
ಈ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್ ಆರ್ ಎಸ್ ನಾಧನ್ ನಡವಳಿಗಳನ್ನು ಹೊರಡಿಸಿದ್ದು, 2021-22ನೇ ಸಾಲಿನ ಅಯವ್ಯಯದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವೇತನ ಬಾಬ್ತಿಗೆ ನಿಗದಿಪಡಿಸಿರುವ ಒಟ್ಟಾರೆ ಅನುದಾನದಲ್ಲಿ 2ನೇ ಕಂತಿನ 4 ತಿಂಗಳ ಅನುದಾನ ಬಿಡುಗಡೆಗೊಳಿಸಿ, ಆದೇಶಿಸಲಾಗಿದೆ.
ಒಟ್ಟಾರೆ ಅನುದಾನದಲ್ಲಿ ಮೊದಲನೇ ಕಂತಿನ 5 ತಿಂಗಳ ಅನುದಾನವಾಗಿ ರೂ.68,123.41 ಲಕ್ಷಗಳನ್ನು ಬಿಡುಗಡೆಗೊಳಿಸಿ, ಆದೇಶಿಸಲಾಗಿದೆ. ಪ್ರಸ್ತುತ 2021-22ನೇ ಸಾಲಿನ ಅಯವ್ಯಯದಲ್ಲಿ 2ನೇ ಕಂತಿನ 4 ತಿಂಗಳ ಅನುದಾನ ಬಿಡುಗಡೆ ಮಾಡಿ ಅನಮತಿ ನೀಡಿ ಆದೇಶಿಸಿದ್ದಾರೆ.
Disclaimer
This story is auto-aggregated by a computer program and has not been created or edited by Dailyhunt Publisher: Kannada News Now