Wednesday, 16 Sep, 7.02 pm Kannada News Now

ಕರ್ನಾಟಕ
'ಸಂಜನಾ ಗಲ್ರಾನಿ' ಎರಡು ದಿನ ನ್ಯಾಯಾಂಗ ವಶಕ್ಕೆ : ಪರಪ್ಪನ ಅಗ್ರಹಾರದತ್ತ 'ಮಾದಕ ಬೆಡಗಿ'

ಬೆಂಗಳೂರು: ಕನ್ನಡ ನಟಿ ಸಂಜನಾ ಗಲ್ರಾನಿಯನ್ನು 1 ನೇ ಎಸಿಎಂಎಂ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇಂದು ನಟಿ ಸಂಜನಾರನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಸಂಜನಾ ಪರಪ್ಪನ ಅಗ್ರಹಾರ ತಲುಪಲಿದ್ದಾರೆ. ಸಂಜನಾ ಜೊತೆಗೆ, ಆರೋಪಿ ವಿರೇನ್ ಖನ್ನಾ, ರವಿಶಂಕರ್ ಮತ್ತು ಇತರರನ್ನು ನ್ಯಾಯಾಂಗ ವಶಕ್ಕೆ ಕಳುಹಿಸಲಾಗಿದೆ. ಸೆಪ್ಟೆಂಬರ್ 16 ರಂದು ಸಂಜನಾ ಮತ್ತು ಇತರ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸ್ಯಾಂಡಲ್ ವುಡ್ ಡ್ರಗ್ ರಾಕೆಟ್ ಪ್ರಕರಣದಲ್ಲಿ ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಕಸ್ಟಡಿಗೆ ಕಳುಹಿಸಿದೆ.

SBI ಬ್ಯಾಂಕ್‌ ಗ್ರಾಹಕರಿಗೆ ಮಹತ್ವದ ಮಾಹಿತಿ : ಹಣ ಡ್ರಾ ಮಾಡಲು ಇನ್ಮುಂದೆ OTP ಕಡ್ಡಾಯ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top