Kannada News Now

1.8M Followers

'ಸರ್ಕಾರಿ ನೌಕರ'ರಿಗೆ ಬಿಗ್ ರಿಲೀಫ್ : ಇನ್ಮುಂದೆ 'ಮೂಗರ್ಜಿ'ಯಲ್ಲಿ ದೂರು ನೀಡಿದ್ರೆ ಪರಿಗಣನೆ ಇಲ್ಲ - ರಾಜ್ಯ ಸರ್ಕಾರ ಆದೇಶ

03 Nov 2021.4:59 PM

ಬೆಂಗಳೂರು : ರಾಜ್ಯದ ಸರ್ಕಾರಿ ಅಧಿಕಾರಿಗಳ ( Karnataka Government Officer ) ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ, ಅನಾಮಧೇಯ ಪತ್ರಗಳ ಮೂಲಕ ಆರೋಪ ಮಾಡುತ್ತಿದ್ದಂತ ಪತ್ರಗಳಿಗೆ, ಇದೀಗ ರಾಜ್ಯ ಸರ್ಕಾರ ( Karnataka Government ) ಬ್ರೇಕ್ ಹಾಕಿದೆ.

ಇನ್ಮುಂದೆ ಮೂಗರ್ಜಿಗಳಿಗೆ ಮಾನ್ಯತೆ ಇಲ್ಲ ಎಂಬುದಾಗಿ ಖಡಕ್ ಆದೇಶದಲ್ಲಿ ಸೂಚಿಸಿದೆ. ಈ ಮೂಲಕ ಅಧಿಕಾರಿ, ನೌಕರರ ವಿರುದ್ಧದ ಅನಾಮಧೇಯ ದೂರುಗಳನ್ನು ಪರಿಗಣಿಸದಂತೆ ಸುತ್ತೋಲೆಯಲ್ಲಿ ಸೂಚಿಸಿದೆ.

ಈ ಕುರಿತಂತೆ ರಾಜ್ಯದ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸುತ್ತೋಲೆಯಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದು, ಇನ್ಮುಂದೆ ಮೂಗರ್ಜಿಗಳನ್ನು ಪರಿಗಣಿಸಬಾರದು. ವಿಳಾಸ ಇರುವ ದೂರುಗಳನ್ನ ಮಾತ್ರವೇ ಸ್ವೀಕರಿಸಬೇಕು. ಸೂಕ್ತ ದಾಖಲೆ ಇಲ್ಲದ ದೂರುಗಳ್ನು ಪರಿಗಣಿಸಬೇಡಿ. ಅಧಿಕಾರಿ, ನೌಕರರ ವಿರುದ್ಧದ ಅನಾಮಧೇಯ ದೂರುಗಳನ್ನು ಮಾನ್ಯ ಮಾಡದಂತೆ ಸೂಚಿಸಿದೆ.

ಈ ಹಿನ್ನಲೆಯಲ್ಲಿ ಇನ್ಮುಂದೆ ವಿಳಾಸ, ಹೆಸರು ಇಲ್ಲದೇ ಯಾವುದೇ ಸರ್ಕಾರಿ ಅಧಿಕಾರಿ, ನೌಕರರ ಮೇಲೆ ಅನಾಮಧೇಯ ಪತ್ರದಲ್ಲಿ ದೂರು ಕಳುಹಿಸಿದ್ರೇ.. ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಮೂಗರ್ಜಿಗಳಿಗೆ ಮಾನ್ಯತೆ ಕೂಡ ನೀಡುವುದಿಲ್ಲ. ಈ ಮೂಲಕ ರಾಜ್ಯದ ಸರ್ಕಾರಿ ನೌಕರಿಗೆ ಬಿಗ್ ರಿಲೀಫ್ ನೀಡಿದೆ.Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags