Thursday, 16 Sep, 9.34 pm Kannada News Now

ಹೋಮ್
ಸವಾಲುಗಳ ಮೀರಿ ಸಕ್ಸಸ್ ಕಂಡ 'ಗ್ರೂಫಿ' : ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರಕ್ಕೆ ಪ್ರೇಕ್ಷಕ ಪ್ರಭು ಫಿದಾ

ಸಿನಿಮಾ ಡೆಸ್ಕ್ : ಕೊರೊನಾ ಬಿಕ್ಕಟ್ಟಿನ ಪರಿಸ್ಥಿಯಿಂದ ಚಿತ್ರರಂಗದ ಅನೇಕ ಆಲೋಚನೆಗಳು ತಲೆಕೆಳಗಾಗಿದೆ. ರಿಲೀಸ್ ಡೇಟ್ ಫಿಕ್ಸ್ ಆಗಿದ್ದ ಬಿಗ್ ಬಜೆಟ್ ಚಿತ್ರಗಳು ಮುಂದೂಡಲಾಗಿದೆ. ಆದರೆ ಕೆಲವೇ ಕೆಲ ಚಿತ್ರತಂಡಗಳು ಮಾತ್ರ ಶೇ.50ರಷ್ಟು ಸೀಟು ಭರ್ತಿಯ ಅವಕಾಶದಲ್ಲಿ ಚಿತ್ರ ರಿಲೀಸ್ ಮಾಡುವ ಧೈರ್ಯ ಮಾಡಿದೆ. ಅದರಲ್ಲಿ ಗ್ರೂಫಿ ಕೂಡಾ ಒಂದು. ಒಂದೊಳ್ಳೆ ಮೆಸೇಜ್ ಜೊತೆಗೆ ಫುಲ್ ಎಂಟರ್ಟೈನ್ಮೆಂಟ್ನೊಂದಿಗೆ ಆಗಸ್ಟ್ 20ರಂದು ತೆರೆ ಕಂಡ ಗ್ರೂಫಿ ಚಿತ್ರ ರಾಜ್ಯಾದ್ಯಂತ ಉತ್ತಮ ಸ್ಪಂದನೆ ಪಡೆದುಕೊಳ್ಳುತ್ತಿದೆ.

ಗ್ರೂಫಿ ನಿರ್ದೇಶಕ ರವಿ ಅರ್ಜುನ್ ಅವರ ಚೊಚ್ಚಲ ಚಿತ್ರವಾದರೂ ಕೂಡ ತೆರೆ ಮೇಲೆ ಸಿನಿಪ್ರಿಯರ ನಿರೀಕ್ಷೆ ಮೀರಿ ಚಿತ್ರ ಅದ್ಧುತವಾಗಿ ಮೂಡಿಬಂದಿದೆ. ಟೈಟಲ್ಗೂ ಕಥೆಗೂ ಬಹಳ ಲಿಂಕ್ಯಿದ್ದು, ಒಂದು ಗ್ರೂಪ್ ಸೆಲ್ಪಿಯಿಂದಾಗುವ ಅವಾಂತರದ ಸುತ್ತ ಚಿತ್ರ ಸುತ್ತಲಿದೆ.

ಕಾಡಿನಲ್ಲಿ ಯುವಕ-ಯುವತಿಯರ ಟ್ರಕ್ಕಿಂಗ್, ಒಬ್ಬ ಪತ್ರಕರ್ತ, ಐದು ಮಂದಿ ಸಾವು ಇದರ ಸುತ್ತವೇ ಚಿತ್ರದ ಸಂಪೂರ್ಣ ಕಥೆ ಹೆಣೆಯಲಾಗಿದ್ದು, ಇಡೀ ಚಿತ್ರವೇ ಸಸ್ಪೆನ್ಸ್ ಆಯಂಡ್ ಥ್ರಿಲರ್ ಆಗಿದೆ. ಆದರೆ ಪ್ರೇಕ್ಷಕರಿಗೆ ಬೋರ್ ಹೊಡೆಸದಂತೆ ನಿರ್ದೇಶಕರು ಸರಳವಾಗಿ ಕಥೆಯನ್ನು ಹೇಳಿದ್ದಾರೆ.

ಇನ್ನು ಹೊಸ ತಂಡದ ಪ್ರಯತ್ನಕ್ಕೆ ಉದ್ಯಮಿ ಕೆ.ಜಿ ಸ್ವಾಮಿ ಅವರು ಕೈ ಜೋಡಿಸಿದ್ದು, ಲಿಯಾ ಗ್ಲೋಬಲ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ಗ್ರೂಫಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.ಗ್ರೂಫಿಯಲ್ಲಿ ಹೊಸ ಪರಿಚಯ ಆರ್ಯನ್ ಎಸ್ ಜಿ, ಪದ್ಮಶ್ರೀ ಸಿ ಜೈನ್, ಗಗನ್, ಉಮಾ ಮಯೂರಿ ಮತ್ತು ಪ್ರಜ್ವಲ್ ಮುಂತಾದವರು ನಟಿಸಿದ್ದು, ಹಿರಿಯ ಕಲಾವಿದರಾದ ಸಂಗೀತ, ಶ್ರೀಧರ್, ಹನುಮಂತೇ ಗೌಡ್ರು, ರಘು ಪಾಂಡೇಶ್ವರ್ ಸೇರಿದಂತೆ ಅನೇಕ ಕಲಾವಿದರು ಗ್ರೂಫಿಯಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ವಿಜೇತ್ ಕೃಷ್ಣ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಗ್ರೂಫಿ ಚಿತ್ರದ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಲಕ್ಷೀಕಾಂತ್ ಇಡೀ ಚಿತ್ರವನ್ನು ಅದ್ಭುತವಾಗಿ ಸೆರೆಹಿಡಿದ್ದಾರೆ.



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top