Sunday, 20 Sep, 6.05 am Kannada News Now

ಹೋಮ್
ಸೆ.21 ರಿಂದ ಶಾಲಾ-ಕಾಲೇಜು ಓಪನ್ ಇಲ್ಲ : ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ ಸ್ಪಷ್ಟನೆ

ಬೆಂಗಳೂರು : ಸೆ.21 ರಿಂದ ಶಾಲಾ ಕಾಲೇಜು ಆರಂಭ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ ನಿರ್ಧರಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಹೌದು, ಕೊರೊನಾ ಆತಂಕದ ನಡುವೆಯೂ ಸೆ. 21 ರಿಂದ ಶಾಲಾ-ಕಾಲೇಜುಗಳ ಆರಂಭವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಸದ್ಯಕ್ಕೆ ಶಾಲಾ ಕಾಲೇಜು ಆರಂಭ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ ಸ್ಪಷ್ಟನೆ ನೀಡಿದೆ. ಕೊರೊನಾ ಕಡಿಮೆಯಾಗುವವರೆಗೆ (9 ರಿಂದ 12 ನೇ ತರಗತಿವರೆಗೆ) ಶಾಲಾ ಕಾಲೇಜು ಆರಂಭಿಸೋಲ್ಲ, ರಾಜ್ಯದಲ್ಲಿ ಕೇಂದ್ರದ ಮಾರ್ಗಸೂಚಿ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ ಸ್ಪಷ್ಟನೆ ನೀಡಿದೆ.

ಸೆಪ್ಟೆಂಬರ್ 21ರಿಂದ ದೇಶಾದ್ಯಂತ 9 ರಿಂದ 12ನೇ ತರಗತಿ ಶಾಲಾ-ಕಾಲೇಜು ಆರಂಭಕ್ಕೆ ನೂತನ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಈ ಮೂಲಕ ಸೆಪ್ಟೆಂಬರ್ 21ರಿಂದ ದೇಶಾದ್ಯಂತ 9ರಿಂದ 12ನೇ ತರಗತಿ ಶಾಲೆಗಳು ಆರಂಭವಾಗಲಿವೆ ಎನ್ನಲಾಗಿತ್ತು. ಆದರೆ ಶಾಲೆ ಪುನಾರಂಭದ ಬಗ್ಗೆ ಪೋಷಕರ ಗೊಂದಲಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top