ಭಾರತ
ಶಾಕಿಂಗ್ : ಅಪ್ರಾಪ್ತ ಬಾಲಕಿ ಸೇರಿ ಒಂದೇ ಕುಟುಂಬದ ನಾಲ್ವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ

ಜೈಪುರ್ : ರಾಜಸ್ಥಾನದ ದಸ್ಸಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿ ಸೇರಿದಂತೆ ಕುಟುಂಬದ ನಾಲ್ವರು ಸದಸ್ಯರ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ನಂತರ ವ್ಯಕ್ತಿಯನ್ನು ವಿಷ್ಣು ಗುರ್ಜರ್ ಎಂದು ಗುರುತಿಸಿದ್ದು, ಈತ ಕುಟುಂಬದ ಮನೆಯ ಬಳಿ 'ಢಾಬಾ' ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
ಮಾಹಿತಿಗಳ ಪ್ರಕಾರ, ವಿಷ್ಣು ಗುರ್ಜರ್ ಒಂದು ವರ್ಷದ ಕಾಲ ಕುಟುಂಬದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದನು. ಆದರೆ ಆರೋಪಿ ಈಗ ತನ್ನ ತಂಗಿ ಮತ್ತು ಮಗಳನ್ನು ಬಲೆಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ ಎಂದು ತಿಳಿದಾಗ, ಪೊಲೀಸರ ಮೊರೆ ಹೋಗಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಹಿಳೆ ವಿಷ್ಣು ಗುರ್ಜರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ನಂತರ ಕುಟುಂಬದ ಇತರ ಮಹಿಳೆಯರು ಮುಂದೆ ಬಂದು ಪೊಲೀಸರ ಮೊರೆ ಹೋಗಿದ್ದಾರೆ.
ಶಾಕಿಂಗ್ : ಮೂಢನಂಬಿಕೆಗೆ ದಾಸರಾಗಿ ಹೆತ್ತ ಮಕ್ಕಳನ್ನೇ ಕೊಲೆ ಮಾಡಿದ ತಂದೆ -ತಾಯಿ
ಜನವರಿ 21ರಂದು ವಿಷ್ಣು ಗುರ್ಜರ್ ವಿರುದ್ಧ ಮೊದಲ ದೂರು ದಾಖಲಾಗಿತ್ತು. ಅದೇ ದಿನ ಮಹಿಳೆಯ ಸಹೋದರಿ ಕೂಡ ಪೊಲೀಸರ ಮೊರೆ ಹೋಗಿ ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ. ಈ ವಿಷಯ ಕುಟುಂಬದ ಇತರ ಸದಸ್ಯರಿಗೂ ಗೊತ್ತಾಗಿ, ಅವರೂ ಪೊಲೀಸರ ಮೊರೆ ಹೋಗಿದ್ದಾರೆ.
ಜನವರಿ 23 ಮತ್ತು 24ರಂದು ವಿಷ್ಣು ಗುರ್ಜರ್ ವಿರುದ್ಧ ಮತ್ತೆರಡು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್ ಸೇರಿಕೊಳ್ಳಿ https://bit.ly/3sQOxW9