ಕರ್ನಾಟಕ
ಶಶಿಕಲಾ ಬಳಿಕ ನಾದಿನಿ ಇಳವರಸಿಗೂ 'ಕೊರೊನಾ ವೈರಸ್' ಪಾಸಿಟಿವ್

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಪರಮಾಪ್ತೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ಜೈಲು ವಾಸ ಅನುಭವಿಸುತ್ತಿರುವ ಶಶಿಕಲಾ ಅವ್ರನ್ನ ಅನಾರೋಗ್ಯದ ಕಾರಣದಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, .ಅವ್ರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ವಿ.ಕೆ. ಶಶಿಕಲಾ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದ ಮರುದಿನ, ಅವರೊಂದಿಗೆ ಜೈಲುವಾಸ ಅನುಭವಿಸುತ್ತಿರುವ ಅವರ ನಾದಿನಿ ಜೆ. ಇಳವರಸಿ ಅವರಲ್ಲಿಯೂ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಇಳವರಸಿ ಮತ್ತು ಶಶಿಕಲಾ ಅವರು 2017ರ ಫೆಬ್ರವರಿಯಿಂದಲೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದರು. ಶಶಿಕಲಾ ಅವರು ಜನವರಿ 27ರಂದು ಬಿಡುಗಡೆಯಾಗಲಿದ್ದಾರೆ. ಇಳವರಸಿ ಫೆಬ್ರವರಿ 5ರಂದು ಬಿಡುಗಡೆಯಾಗಲಿದ್ದಾರೆ ಎನ್ನಲಾಗಿದೆ.
BREAKING : 'FDA' ಪ್ರಶ್ನೆ ಪತ್ರಿಕೆ ಸೋರಿಕೆ : 'CCB' ಪೊಲೀಸರಿಂದ ಆರು ಮಂದಿ ಆರೋಪಿಗಳು ಅರೆಸ್ಟ್
ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್ ಸೇರಿಕೊಳ್ಳಿ
https://bit.ly/3qRmLqX