ಭಾರತ
ಶೀಘ್ರವೇ ತೂಕ ಇಳಿಸಿಕೊಳ್ಳಬೇಕೇ? ಹಾಗಿದ್ರೆ 5 ನಿಮಿಷದ ಈ ರೆಸಿಪಿ ಟ್ರೈ ಮಾಡಿ

ಸ್ಪೆಷಲ್ ಡೆಸ್ಕ್ : ತೂಕ ಹೆಚ್ಚಾಗಿದೆ ಎಂದು ಟೆನ್ಶನ್ ಮಾಡುತ್ತಿದ್ದೀರಾ? ಇದರಿಂದ ಮುಜುಗರದ ಜೊತೆಗೆ ಡಯಾಬಿಟೀಸ್, ಹಾರ್ಮೋನ್ ಸಮಸ್ಯೆ ಹಾಗೂ ಹೃದಯದ ಸಮಸ್ಯೆಗಳು ಕಾಣಿಸುತ್ತದೆ. ಇಂತಹ ಸಂದರ್ಭದಲ್ಲಿ ನೀವು ತೂಕ ಇಳಿಸಲು ಇನ್ನಿಲ್ಲದ ಕಸರತ್ತು ಮಾಡುತ್ತೀರಿ. ನಿಮ್ಮ ಈ ಲಿಸ್ಟ್ಗೆ ಈಗ ಹೊಸ ವಿಧಾನವೊಂದನ್ನು ಸೇರಿಸಿ. ಈ ವಿಧಾನ ಅನುಸರಿಸಿದರೆ ಶೀಘ್ರದಲ್ಲೆ ಐದು ಕೆಜಿ ತೂಕ ಇಳಿಕೆ ಮಾಡಬಹುದು.
ಅದು ಹೇಗೆ ಅಂತೀರಾ..? ಇಲ್ಲಿದೆ ನೋಡಿ ನೀವು ಅನುಸರಿಸಬೇಕಾದ ಸರಳ ವಿಧಾನ
5 ನಿಮಿಷದ ರೆಸಿಪಿಯಲ್ಲಿ 5 ಕೆಜಿ ತೂಕ ಇಳಿಕೆ : ನೀವು ಮಾಡಬೇಕಗಿರೋದು ಒಂದು ಜ್ಯೂಸ್. ಇದನ್ನು ತಯಾರಿಸಿ ದಿನದಲ್ಲಿ ಒಂದು ಬಾರಿ ಎಂಬಂತೆ ಐದು ದಿನ ಕುಡಿಯುತ್ತಾ ಬಂದರೆ ತೂಕ ಇಳಿಯೋದು ಖಂಡಿತಾ.
ಬೇಕಾಗಿರುವ ಸಾಮಾಗ್ರಿಗಳು :
300 ಎಂಎಲ್ ನೀರು, 1 ನಿಂಬೆ ಹಣ್ಣು ಮತ್ತು 60 ಗ್ರಾಂನಷ್ಟು ಪಾರ್ಸ್ಲೆ.
ಈ ಎಲ್ಲಾ ಸಾಮಾಗ್ರಿಗಳನ್ನು ಜೊತೆಯಾಗಿ ಮಿಕ್ಸಿ ಮಾಡಿ ನಿರಂತರವಾಗಿ ಸೇವನೆ ಮಾಡಬೇಕು. ಇದು ನಿಮ್ಮ ದೇಹದಲ್ಲಿರುವ ಹೆಚ್ಚುವರಿ ನೀರಿನ ಅಂಶ ಹಾಗೂ ಕೊಬ್ಬನ್ನು ನಿವಾರಿಸಿ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ ನಿಮ್ಮ ಜೀರ್ಣಕ್ರಿಯೆಯನ್ನು ಇಳಿಸುತ್ತದೆ.
5 ನಿಮಿಷದಲ್ಲಿ ಈ ರೆಸಿಪಿ ರೆಡಿ :
ಈ ಜ್ಯೂಸ್ ತಯಾರಿಸಲು ಹೆಚ್ಚು ಹೊತ್ತು ಬೇಕಾಗಿಲ್ಲ. 5 ನಿಮಿಷ ಸಾಕು. ಎಲ್ಲಾ ಸಾಮಾಗ್ರಿಗಳು ಇದ್ದರೆ ಐದು ನಿಮಿಷದಲ್ಲಿ ಈ ರೆಸಿಪಿ ರೆಡಿ. ಇದನ್ನು ಕೆಲದಿನಗಳ ಕಾಲ ನಿರಂತರ ಸೇವನೆ ಮಾಡಿದರೆ, 5 ಕೆಜಿ ಇಳಿಯೋದು ಖಂಡಿತಾ.
ಬ್ರೇಕ್ಫಾಸ್ಟ್ಗೆ ಮುನ್ನ ಸೇವನೆ ಮಾಡಿ :
ಈ ಜ್ಯೂಸ್ನ್ನು ಪ್ರತಿ ದಿನ ಬ್ರೇಕ್ಫಾಸ್ಟ್ಗೆ ಮುನ್ನ ಸೇವನೆ ಮಾಡಿ. ಇದು ನಿಮ್ಮ ಮೆಟಾಬಾಲಿಸಂನ್ನು ಹೆಚ್ಚಿಸುತ್ತದೆ. ಅಲ್ಲದೇ ಇದರಲ್ಲಿ ವಿಟಾಮಿನ್ ಮತ್ತು ಮಿನೆರಲ್ಸ್ ಕೂಡಾ ಇದೆ. 5 ದಿನದ ಬಳಿಕ 10 ದಿನ ಗ್ಯಾಪ್ ಬಿಟ್ಟು ಮತ್ತೆ ಸೇವನೆ ಮಾಡಬೇಕು.