Wednesday, 27 Jan, 6.59 pm Kannada News Now

ಕರ್ನಾಟಕ
ʼಶಿಕ್ಷಕ ಹುದ್ದೆʼಯ ನಿರೀಕ್ಷಿತರಿಗೆ ಗುಡ್‌ ನ್ಯೂಸ್:‌ ಮುಂದಿನ 2 ವರ್ಷಗಳಲ್ಲಿ ʼ20 ಸಾವಿರ ಶಿಕ್ಷಕʼರ ನೇಮಕಾತಿ..!

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವ್ರು ಶಿಕ್ಷಕ ಹುದ್ದೆಯ ನಿರೀಕ್ಷಿತರಿಗೆ ಸಿಹಿ ಸುದ್ದಿ ನೀಡಿದ್ದು, ಮುಂದಿನ ಎರಡು ವರ್ಷಗಳಲ್ಲಿ 20 ಸಾವಿರ ಶಿಕ್ಷಕರನ್ನ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಇಂದು ರಾಜ್ಯ ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢಶಾಲಾ ಶಿಕ್ಷಕರ ಸಂಘ ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ಸ್ತರಗಳ ನೌಕರರ ಸಂಘಗಳ ಪದಾಧಿಕಾರಿಗಳೊಂದಿಗೆ ಶಿಕ್ಷಣ ಸಚಿವರು ಸಭೆ ನಡೆಸಿದ್ರು. ಸಭೆಯ ನಂತರ ಮಾತನಾಡಿದ ಅವ್ರು, ಶಿಕ್ಷಕ ಮಿತ್ರ ಆಯಪ್ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ತಂತ್ರಜ್ಞಾನದ ಪರಿಹಾರ, 2,500 ಟಿಜಿಟಿ ಶಿಕ್ಷಕರ ನೇಮಕಾತಿಗೆ ಕ್ರಮ ವಹಿಸಲಾಗಿದೆ ಎಂದರು.

ಕೇಂದ್ರ ಸರ್ಕಾರದಿಂದ ದೇಶದ ರೈತರಿಗೆ ಮತ್ತೊಂದು ಗುಡ್‌ ನ್ಯೂಸ್‌: ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳ

ಇನ್ನು ಕಳೆದ ಒಂದು ವರ್ಷದಲ್ಲಿ ಮಾಡಿದ ಕಾರ್ಯಗಳ ಬಗ್ಗೆ ತಿಳಿಸಿದ ಸಚಿವರು, 2,404 ಪ್ರೌಢಶಾಲಾ ಶಿಕ್ಷಕರಾಗಿ, 1,342 ಪ್ರೌಢಶಾಲಾ ಶಿಕ್ಷಕರಿಗೆ ಮುಖ್ಯೋಪಾಧ್ಯಾಯರಾಗಿ ಬಡ್ತಿ ನೀಡಲಾಗಿದೆ ಎಂದರು. ಇನ್ನು 396 ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗೆ ಪ್ರಾಂಶುಪಾಲರಾಗಿ ಬಡ್ತಿ ನೀಡಲಾಗಿದೆ ಎಂದು ಹೇಳಿದರು.‌

ʼಆಧಾರ್‌ ಕಾರ್ಡ್ʼಗೆ ಮೊಬೈಲ್ ನಂಬರ್ ಲಿಂಕ್ ಮಾಡಿದ್ರೆ, ನೀವು ಮನೆಯಲ್ಲಿಯೇ ಕುಳಿತು ಈ ಎಲ್ಲ ಚೇಂಜಸ್‌ ಮಾಡ್ಬೋದು..!



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top