ಕರ್ನಾಟಕ
ಶಿವಮೊಗ್ಗ ಹುಣಸೋಡು ಗಣಿ ಪ್ರದೇಶ ಸ್ಪೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

ಶಿವಮೊಗ್ಗ : ಶಿವಮೊಗ್ಗದ ಹುಣಸೋಡು ಗಣಿ ಪ್ರದೇಶದಲ್ಲಿ ನಡೆದಂತಹ ಸ್ಪೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು,ಸ್ಪೋಟ ಪ್ರಕರಣದ ಪ್ರಮುಖ ಆರೋಪಿ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದ್ದ, ಇದೀಗ ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಶಿವಮೊಗ್ಗ ಸ್ಪೋಟ ಪ್ರಕರಣದಲ್ಲಿ ಇದೀಗ ಭದ್ರಾವತಿಯ ನಿವಾಸಿ ಕರಿಗೌಡ ಎಂಬುವವನ ಮೇಲೆ ಪೊಲೀಸರಿಗೆ ಅನುಮಾನ ಶುರುವಾಗಿದ್ದು, ಪ್ರವೀಣ್ ಎಂಬುವವನ ಮೂಲಕ ಕರಿಗೌಡ ಸ್ಪೋಟಕ ಸ್ಪಪ್ಲೈ ಮಾಡುತ್ತಿದ್ದ ಎಂಬ ಶಂಕೆ ವ್ಯಕ್ತವಾಗಿದೆ.
GOOD NEWS: EPFOನಿಂದ ಶೇ.8.5 ಬಡ್ಡಿ ನೀಡಲು ಶುರು, PF ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಭದ್ರಾವತಿಯಲ್ಲಿ ಅಕ್ರಮವಾಗಿ ಸ್ಪೋಟಕ ಸಂಗ್ರಹಿಸಿ ಅಲ್ಲಿಂದ ಸಪ್ಲೈ ಮಾಡಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದ್ದು, ಆದರೆ ಈ ಬಗ್ಗೆ ಇನ್ನೂ ಆಧಾರಗಳು ಸಿಕ್ಕಿಲ್ಲ. ಸದ್ಯ ಕರಿಗೌಡ ನಾಪತ್ತೆಯಾಗಿದ್ದು, ಕರಿಗೌಡನ ಪತ್ತೆಗಾಗಿ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ.
ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್ ಸೇರಿಕೊಳ್ಳಿ
https://bit.ly/363lK75