ಹೋಮ್
ಶಿವಮೊಗ್ಗದ 'ಗಾಂಧಿ ಬಜಾರ್'ನ ಅಂಗಡಿಯಲ್ಲಿ ಅಗ್ನಿ ಅವಘಡ : ಲಕ್ಷಾಂತರ ರೂ ಸೌಂದರ್ಯ ವರ್ಧಕಗಳು ಬೆಂಕಿಗೆ ಆಹುತಿ

ಶಿವಮೊಗ್ಗ : ಎರಡು ದಿನಗಳ ಹಿಂದೆ ಹುಣಸೋಡಿ ಗ್ರಾಮದಲ್ಲಿ ನಡೆದಂತ ಸ್ಪೋಟಕದ ಬೆನ್ನಲ್ಲೇ, ಜಿಲ್ಲೆಯಲ್ಲಿ ಮತ್ತೊಂದು ಅಗ್ನಿ ಅವಘಡ ಉಂಟಾಗಿದೆ. ಗಾಂಧಿ ಬಜಾರ್ ನಲ್ಲಿರುವಂತ ಸೌಂದರ್ಯ ವರ್ಧಕ ಅಂಗಡಿಯಲ್ಲಿ ಬೆಂಕಿ ಅವಘಡ ಉಂಟಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸೌಂದರ್ಯ ವರ್ಧಕಗಳು ಬೆಂಕಿಗೆ ಆಹುತಿಯಾಗಿವೆ.
ನಗರದ ಗಾಂಧಿ ಬಜಾರ್ ನಲ್ಲಿರುವಂತ ಮಾತಾಶ್ರೀ ನಾವೆಲ್ಟೀಸ್ ಎಂಬ ಸೌಂದರ್ಯ ವರ್ಧಕ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ನಿನ್ನೆ ರಾತ್ರಿ ಉಂಟಾದಂತ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಅಂಗಡಿಯಲ್ಲಿದ್ದಂತ ಲಕ್ಷಾಂತರ ಮೌಲ್ಯದ ಸೌಂದರ್ಯ ವರ್ಧಕಗಳು ಬೆಂಕಿಗೆ ಆಹುತಿಯಾಗಿವೆ.
ಬೆಂಕಿ ಅವಘಡದ ಮಾಹಿತಿ ತಿಳಿದಂತ ಅಗ್ನಿ ಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಬೆಂಕಿಯನ್ನು ನಂದಿಸಿದ್ದಾರೆ. ನಷ್ಟದ ಅಂದಾಜಿನ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ.
ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್ ಸೇರಿಕೊಳ್ಳಿ
https://bit.ly/367sVuW
'FDA ಪ್ರಶ್ನೆ ಪತ್ರಿಕೆ' ಹಗರಣ : ಆರೋಪಿಗಳ 'ಈ ಐಡಿಯಾ'ಗೆ ಬೆಚ್ಚಿ ಬಿದ್ದ ಪೊಲೀಸರು.!
related stories
-
ಭಾರತ ಭಾರತದಲ್ಲಿ ನಿನ್ನೆ ಒಂದೇ ದಿನ `FASTAG' ಮೂಲಕ ಸಂಗ್ರಹವಾಗಿದ್ದು ಎಷ್ಟು ಕೋಟಿ ರೂ. ಗೊತ್ತಾ?
-
ಉತ್ತರ ಕನ್ನಡ ಸಂಕಷ್ಟದಲ್ಲಿವೆ ಎಪಿಎಂಸಿಗಳು
-
ರಾಜ್ಯ ಸುದ್ದಿ ಮತ್ತೆ ಕೋಟಿ ಒಡೆಯನಾದ ಮಾದಪ್ಪ..