Dailyhunt
SHOCKING : ಜಗತ್ತಿಗೆ ಕಾಲಿಟ್ಟ ಮತ್ತೊಂದು ಮಹಾಮಾರಿ ವೈರಸ್ : `ಹ್ಯಾಂಟವೈರಸ್‌'ಗೆ ಮೂವರು ಬಲಿ.!

SHOCKING : ಜಗತ್ತಿಗೆ ಕಾಲಿಟ್ಟ ಮತ್ತೊಂದು ಮಹಾಮಾರಿ ವೈರಸ್ : `ಹ್ಯಾಂಟವೈರಸ್‌'ಗೆ ಮೂವರು ಬಲಿ.!

Kannada News Now 1 week ago

ವದೆಹಲಿ: ಜಗತ್ತು ಕೊರೊನಾ ಮಹಾಮಾರಿಯಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ, ಇದೀಗ 'ಹಂತಾವೈರಸ್' (Hantavirus) ಭೀತಿ ವಿಶ್ವದಾದ್ಯಂತ ಸಂಚಲನ ಮೂಡಿಸಿದೆ. ಡಚ್ ಕ್ರೂಸ್ ಶಿಪ್‌ವೊಂದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ಈ ವೈರಸ್‌ಗೆ ಬಲಿಯಾದ ಬೆನ್ನಲ್ಲೇ, ಜಗತ್ತಿಗೆ ಮತ್ತೊಂದು ಗಂಡಾಂತರ ಎದುರಾಗಿದೆಯೇ ಎಂಬ ಆತಂಕ ಶುರುವಾಗಿದೆ.

ಡಚ್ ಕ್ರೂಸ್ ಶಿಪ್‌ನಲ್ಲಿ ನಡೆದಿದ್ದೇನು?
ಇತ್ತೀಚೆಗೆ ಡಚ್ ಕ್ರೂಸ್ ಶಿಪ್‌ವೊಂದರಲ್ಲಿ 23 ದೇಶಗಳಿಗೆ ಸೇರಿದ ಸುಮಾರು 149 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ಹಡಗು ಬ್ರೆಜಿಲ್, ಅಂಗೋಲಾ ಮತ್ತು ಸ್ಪೇನ್ ದೇಶಗಳ ಮೂಲಕ ಸಂಚರಿಸಿತ್ತು. ಈ ವೇಳೆ ಹಡಗಿನಲ್ಲಿದ್ದ ಮೂವರು ಪ್ರಯಾಣಿಕರು ಹಂತಾವೈರಸ್ ಲಕ್ಷಣಗಳಿಂದ ಸಾವನ್ನಪ್ಪಿದ್ದಾರೆ. 23 ದೇಶಗಳ ಪ್ರಯಾಣಿಕರು ಈ ಹಡಗಿನಲ್ಲಿದ್ದ ಕಾರಣ, ವೈರಸ್ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಡುವ ಸಾಧ್ಯತೆ ಇದೆಯೇ ಎಂಬ ಚರ್ಚೆ ಆರಂಭವಾಗಿದೆ.

ಏನಿದು ಹಂತಾವೈರಸ್?
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಹಂತಾವೈರಸ್ ಎಂಬುದು 'ಹಂಟಾವಿರಿಡೆ' ಕುಟುಂಬಕ್ಕೆ ಸೇರಿದ ವೈರಸ್‌ಗಳ ಗುಂಪಾಗಿದೆ. ಇದು ಮುಖ್ಯವಾಗಿ ಇಲಿ ಮತ್ತು ಹೆಗ್ಗಣಗಳ ಮೂಲಕ ಹರಡುತ್ತದೆ.

ಹರಡುವಿಕೆ: ಸೋಂಕಿತ ಇಲಿಗಳ ಮೂತ್ರ, ಲಾಲಾರಸ ಅಥವಾ ಮಲದೊಂದಿಗೆ ಮನುಷ್ಯರು ನೇರ ಸಂಪರ್ಕಕ್ಕೆ ಬಂದಾಗ ಈ ಸೋಂಕು ತಗುಲುತ್ತದೆ.

ಪ್ರಭಾವ: ಈ ವೈರಸ್ ನೇರವಾಗಿ ಮನುಷ್ಯನ ಶ್ವಾಸಕೋಶ ಮತ್ತು ಹೃದಯದ ಮೇಲೆ ಪರಿಣಾಮ ಬೀರುವುದರಿಂದ ಇದನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.

ವಿಶೇಷವೆಂದರೆ, ದಕ್ಷಿಣ ಅಮೆರಿಕಾದಲ್ಲಿ ಕಂಡುಬರುವ 'ಆಂಡಿಸ್ ವೈರಸ್' ಎಂಬ ಹಂತಾವೈರಸ್ ತಳಿ ಮನುಷ್ಯನಿಂದ ಮನುಷ್ಯನಿಗೂ ಹರಡಬಲ್ಲದು ಎಂಬುದು ತಜ್ಞರ ಆತಂಕಕ್ಕೆ ಕಾರಣವಾಗಿದೆ.

ವೈರಸ್‌ನ ಲಕ್ಷಣಗಳೇನು?
ವೈರಸ್ ದೇಹವನ್ನು ಪ್ರವೇಶಿಸಿದ ಒಂದರಿಂದ ಎಂಟು ವಾರಗಳ ನಂತರ ಲಕ್ಷಣಗಳು ಗೋಚರಿಸುತ್ತವೆ. ಆರಂಭದಲ್ಲಿ ಇದು ಸಾಮಾನ್ಯ ಜ್ವರದಂತೆ ಕಂಡರೂ, ನಂತರ ತೀವ್ರ ಸ್ವರೂಪ ಪಡೆಯುತ್ತದೆ.

ತೀವ್ರ ಜ್ವರ ಮತ್ತು ತಲೆನೋವು.

ನಡುವು, ತೊಡೆ ಮತ್ತು ಬೆನ್ನು ಭಾಗದಲ್ಲಿ ತೀವ್ರ ಸ್ನಾಯು ನೋವು.

ವಾಕರಿಕೆ, ವಾಂತಿ ಮತ್ತು ಹೊಟ್ಟೆ ನೋವು.

ರೋಗ ಉಲ್ಬಣಗೊಂಡರೆ ಉಸಿರಾಟದ ತೊಂದರೆ.

ಭಾರತಕ್ಕೆ ಇದೆಯೇ ಅಪಾಯ?
ಸದ್ಯಕ್ಕೆ ಭಾರತೀಯರು ಹಂತಾವೈರಸ್ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ತಜ್ಞರು ಸಮಾಧಾನಪಡಿಸಿದ್ದಾರೆ. ಅದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ:

ಭೌಗೋಳಿಕ ದೂರ: ಸೋಂಕು ಕಾಣಿಸಿಕೊಂಡ ಕ್ರೂಸ್ ಶಿಪ್ ಸಂಚರಿಸಿದ ಮಾರ್ಗಕ್ಕೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ.

ಹರಡುವಿಕೆ: ಏಷ್ಯಾ ಖಂಡದಲ್ಲಿ ಕಂಡುಬರುವ ಹಂತಾವೈರಸ್ ತಳಿಗಳು ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ. ಇವು ಕೇವಲ ಇಲಿಗಳ ಮೂಲಕ ಅತಿ ವಿರಳವಾಗಿ ಹರಡುತ್ತವೆ.

ಮುನ್ನೆಚ್ಚರಿಕಾ ಕ್ರಮಗಳು:
ವೈರಸ್ ಅಪಾಯ ಕಡಿಮೆ ಇದ್ದರೂ, ಶುಚಿತ್ವ ಕಾಪಾಡುವುದು ಅವಶ್ಯಕ.

ಮನೆಯ ಸುತ್ತಮುತ್ತ ಇಲಿಗಳು ಬರದಂತೆ ಜಾಗ್ರತೆ ವಹಿಸಿ.

ಇಲಿಗಳ ತ್ಯಾಜ್ಯವಿರುವ ಜಾಗವನ್ನು ಸ್ವಚ್ಛಗೊಳಿಸುವಾಗ ಕಡ್ಡಾಯವಾಗಿ ಮಾಸ್ಕ್ ಮತ್ತು ಗ್ಲೌಸ್ ಧರಿಸಿ.

ಆಹಾರ ಪದಾರ್ಥಗಳ ಮೇಲೆ ಇಲಿಗಳು ಓಡಾಡದಂತೆ ಎಚ್ಚರಿಕೆ ವಹಿಸಿ.

ಯಾವುದೇ ಸಂಶಯಾಸ್ಪದ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

Dailyhunt
Disclaimer: This content has not been generated, created or edited by Dailyhunt. Publisher: Kannada News Now