Monday, 21 Sep, 11.17 am Kannada News Now

ಭಾರತ
SHOCKING :ಕಾಶ್ಮೀರ ಗಡಿಯಲ್ಲಿ ಸೇನೆಯ ಕಣ್ಣು ತಪ್ಪಿಸಿ ಭೂಗತ ಬಂಕರ್‌ಗಳನ್ನು ನಿರ್ಮಿಸಿರುವ ಉಗ್ರರು

ಶ್ರೀನಗರ: ಸೇನೆಯ ಹದ್ದಿನಗಣ್ಣಿನಿಂದ ತಪ್ಪಿಸಿಕೊಳ್ಳಲು ಉಗ್ರರು ಕಾಶ್ಮೀರ ಗಡಿಯಲ್ಲಿ ಭೂಗತ ಬಂಕರ್‌ಗಳನ್ನು ನಿರ್ಮಿಸಿರುವ ಆತಂಕಕಾರಿ ವಿಷಯವನ್ನು ಭಾರತೀಯ ಸೇನೆ ಬಹಿರಂಗಪಡಿಸಿದೆ.

ಸೇನೆಯ ಕಣ್ಣು ತಪ್ಪಿಸಿ ಸೇಬಿನ ತೋಟಗಳು, ನದಿಗಳ ಅಡಿಯಲ್ಲೂ ಭುಗತ್ ಬಂಕರ್‌ಗಳನ್ನು ನಿರ್ಮಿಸಿರುವ ಸಂಗತಿ ತಡವಾಗಿ ಸ್ಫೋಟಗೊಂಡಿದೆ. ಪುಲ್ವಾಮಾ, ಶೋಪಿಯಾನ್‌ ಜಿಲ್ಲೆಗಳಲ್ಲಿ ಭೂಗತ ಬಂಕರ್‌ಗಳನ್ನು ನಿರ್ಮಿಸಿರುವುದನ್ನು ನೋಡಿದ್ದೇವೆ. ರಾಂಬಿ ಅರಾ ನದಿಯ ಮಧ್ಯದಲ್ಲಿ ಕಬ್ಬಿಣದ ಬಂಕರ್‌ ನಿರ್ಮಿಸಿದ್ದ ಸಂಗತಿ ನಮಗೆ ಆಘಾತ ನೀಡಿತ್ತು ಎಂದು ಸೇನೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಸೇಬಿನ ತೋಟಗಳ ಅಡಿಯಲ್ಲೂ ಇಂಥದ್ದೇ ಮಾದರಿಯ ಬಂಕರ್‌ಗಳನ್ನು ನಿರ್ಮಿಸಿದ್ದರು. ಇದಕ್ಕಾಗಿ ಉಗ್ರರು ಖಾಲಿ ಟಾರ್‌ ಬ್ಯಾರೆಲ್‌ಗ‌ಳನ್ನು ಬಳಸಿಕೊಂಡಿದ್ದರು' ಎಂದು 44 ರಾಷ್ಟ್ರೀಯ ರೈಫ‌ಲ್ಸ್‌ ಮುಖ್ಯಸ್ಥ ಕ್ಯಾ. ಎ.ಕೆ. ಸಿಂಗ್‌ ತಿಳಿಸಿದ್ದಾರೆ.

ಉಗ್ರರ ಈ ಹೊಸ ಟ್ರೆಂಡ್ ಬರೀ ಶೋಪಿಯಾನ್‌ಗೆ ಮಾತ್ರ ಸೀಮಿತವಾಗಿಲ್ಲ. ಪುಲ್ವಾಮಾ ಜಿಲ್ಲೆಯ ಸೇಬಿನ ತೋಟಗಳು, ದಟ್ಟಕಾಡುಗಳಲ್ಲೂ ಇಂಥ ಬಂಕರ್‌ಗಳಿವೆ ಎಂದಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top