ಕಾರವಾರ: ತಾಯಿಯ ಮಡಿಲಲ್ಲಿ ನಿದ್ರಿಸುತ್ತಿದ್ದ ಎರಡು ತಿಂಗಳ ಹೆಣ್ಣು ಮಗುವೊಂದು ನಿದ್ರೆಯಲ್ಲೇ ಮೃತಪಟ್ಟಿರುವ ಅತ್ಯಂತ ದಾರುಣ ಘಟನೆ ಕಾರವಾರದಲ್ಲಿ ನಡೆದಿದೆ. ಈ ಘಟನೆ ಪೋಷಕರಲ್ಲಿ ತೀವ್ರ ಆತಂಕ ಹಾಗೂ ಶೋಕವನ್ನು ಉಂಟುಮಾಡಿದೆ.
ಆದಿತಿ ಸುಧೀರ್ ವೆರ್ಣೇಕರ ಮೃತಪಟ್ಟ ದುರದೃಷ್ಟಕರ ಮಗುವಾಗಿದೆ.
ಶುಕ್ರವಾರ ರಾತ್ರಿ ಮಗು ತನ್ನ ತಾಯಿ ಗಾಯತ್ರಿ ವೆರ್ಣೇಕರ ಅವರೊಂದಿಗೆ ಮಲಗಿತ್ತು. ಶನಿವಾರ ಮುಂಜಾನೆ ಮಗು ಎಚ್ಚರಗೊಂಡಾಗ ತಾಯಿ ಎದೆಹಾಲು ಉಣಿಸಿ, ತದನಂತರ ಮತ್ತೆ ಮಲಗಿಸಿದ್ದರು ಎಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.
ಆದರೆ, ಬೆಳಿಗ್ಗೆ ಸುಮಾರು 7:45ರ ವೇಳೆಗೆ ತಾಯಿ ಗಾಯತ್ರಿ ಅವರು ಎಚ್ಚರಗೊಂಡು ನೋಡಿದಾಗ ಆಘಾತಕಾರಿ ದೃಶ್ಯ ಕಂಡುಬಂದಿದೆ. ಮಗುವಿನ ಮೂಗಿನಿಂದ ರಕ್ತ ಸೋರುತ್ತಿದ್ದು, ಬಾಯಿಯಲ್ಲಿ ನೊರೆ ಬಂದಿರುವುದು ಕಂಡುಬಂದಿದೆ. ತಕ್ಷಣವೇ ಕಂಗಾಲಾದ ಕುಟುಂಬಸ್ಥರು ಮಗುವನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಪರೀಕ್ಷಿಸಿದ ವೈದ್ಯರು ಮಗು ಈಗಾಗಲೇ ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಕಾರವಾರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿ

