Thursday, 04 Mar, 5.47 am Kannada News Now

ಕರ್ನಾಟಕ
ʼSSLC ವಿದ್ಯಾರ್ಥಿʼಗಳಿಗೆ ಮುಖ್ಯ ಮಾಹಿತಿ: 'ಪ್ರಶ್ನೆಪತ್ರಿಕೆ ಮಾದರಿ ಬದಲಾವಣೆ', ಇಲ್ಲಿದೆ ನೂತನ ಮಾದರಿ

ಬೆಂಗಳೂರು: SSLC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದ್ದು, ಜೂ.21 ರಿಂದ ಜುಲೈ 5ರವರೆಗೆ ಪರೀಕ್ಷೆ ನಡೆಯಲಿದೆ. ಆದ್ರೆ, ಈ ಬಾರಿಯ ಪರೀಕ್ಷಾ ಪ್ರಶ್ನೆಪತ್ರಿಕೆ ಮಾದರಿಯಲ್ಲಿ ಕೊಂಚ ಬದಲಾವಣೆ ಮಾಡಿಲಾಗಿದ್ದು, ಬಹು ಆಯ್ಕೆ ಅಂದ್ರೆ, ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಹೌದು, ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಮಾಹಿತಿ ನೀಡಿದ್ದು, 'SSLC ಪರೀಕ್ಷೆ ಪ್ರಶ್ನೆಪತ್ರಿಕೆ ಮಾದರಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಲಾಗಿದ್ದು, ಪ್ರತಿವರ್ಷ 20 ಅಂಕಗಳಿಗೆ ಮಲ್ಟಿಪಲ್ ಚಾಯ್ಸ್ ಇರುತ್ತಿತ್ತು. ಆದ್ರೆ, ಈ ಬಾರಿ 30 ಅಂಕಗಳಿಗೆ ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳು ಇರುತ್ವೆ' ಎಂದಿದ್ದಾರೆ.

ಅಂದ್ಹಾಗೆ, ಎಂದಿನಂತೆ SSLC ಬೋರ್ಡ್ ಸ್ಟ್ಯಾಂಡರ್ಡ್ʼನಂತೆಯೇ ಪರೀಕ್ಷೆ ನಡೆಯಲಿದ್ದು, ಒಟ್ಟು 100 ಅಂಕಗಳಲ್ಲಿ 20 ಇಂಟರ್ನಲ್ ಅಂಕ ಮತ್ತು 80 ಮುಖ್ಯ ಪರೀಕ್ಷೆಯ ಅಂಕಗಳು ಇರುತ್ವೆ. ಇದ್ರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅದ್ರಂತೆ, ಪರೀಕ್ಷೆಯ 80 ಅಂಕಗಳಲ್ಲಿ ಪ್ರತಿಬಾರಿ 20 ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳಿರುತ್ತಿದ್ವು. ಆದ್ರೆ, ಈ ಬಾರಿ 30 ಬಹು ಆಯ್ಕೆ ಪ್ರಶ್ನೆಗಳು ಇರುತ್ವೆ.







Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top