ಕರ್ನಾಟಕ
`SSLC' ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ : ಪರೀಕ್ಷೆ ಶುಲ್ಕ ಪಾವತಿಸಲು ಮಾ.24 ರವರೆಗೆ ಅವಕಾಶ

ಬೆಂಗಳೂರು : ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಹತ್ವದ ಮಾಹಿತಿಯೊಂದನ್ನು ನೀಡಿದದು, ಜೂನ್ ತಿಂಗಳಲ್ಲಿ ನಡೆಯಲಿರುವ ಪ್ರಸಕ್ತ ಸಾಲಿನ ಎಸ್ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ನೋಂದಣಿ ಹಾಗೂ ಶುಲ್ಕ ಪಾವತಿಗೆ ಮಾರ್ಚ್ 24 ರವರೆಗೆ ಕಾಲಾವಕಾಶ ನೀಡಲಾಗಿದೆ.
ಅಕ್ರಮ `BPL' ಕಾರ್ಡ್ ದಾರರಿಗೆ ಬಿಗ್ ಶಾಕ್!
ಪ್ರತಿ ಶಾಲೆಯು ಪರೀಕ್ಷೆಗೆ ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಂಡು ಅದರ ಮಾಹಿತಿಯನ್ನು ಅಪ್ ಲೋಡ್ ಮಾಡಲು ಮಾರ್ಚ್ 3 ರವರೆಗೆ ಇದ್ದ ಕಾಲಾವಕಾಶವನ್ನು ಮಾರ್ಚ್ 10 ಕ್ಕೆ ವಿಸ್ತರಿಸಲಾಗಿದೆ. ಅದೇ ರೀತಿ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕದ ಚಲನ್ ಪಡೆಯಲು ಮಾರ್ಚ್ 23 ರವರೆಗೆ, ಚಲನ್ ಮೂಲಕ ಬ್ಯಾಂಕ್ ಗೆ ಪರೀಕ್ಷಾ ಶುಲ್ಕ ಪಾವತಿಸಲು ಮಾರ್ಚ್ 10 ರ ವರೆಗಿದ್ದ ಕಾಲಾವಕಾಶವನ್ನು ಮಾರ್ಚ್ 24 ರ ವರೆಗೆ ವಿಸ್ತರಿಸಲಾಗಿದೆ.
ನೀವು 'FDA ಕೀ-ಉತ್ತರ'ದ ಬಗ್ಗೆ 'ಆಕ್ಷೇಪಣೆ' ಸಲ್ಲಿಸಬೇಕಾ.? ಹಾಗಿದ್ದರೇ KPSCಯ ಈ ಸೂಚನೆ ಪಾಲಿಸಿ.!
2002 ಮತ್ತು ಅದಕ್ಕೂ ಹಿಂದಿನ ವರ್ಷಗಳ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಪುನರಾವರ್ತಿತ ಅಭ್ಯರ್ಥಿಗಳು ನೆಫ್ಟ್ ಚಲನ್ ಮೂಲಕ ಶುಲ್ಕ ಪಾವತಸಿದ ಮೂಲ ಚಲನ್ ನಾಮಿನಲ್ ರೋಲ್ ಮತ್ತು ಸಂಬಂಧಿತಿ ಇತರ ದಾಖಲೆಗಳನ್ನು ಮಾರ್ಚ್ 31 ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ.