Thursday, 16 Sep, 9.06 pm Kannada News Now

ಭಾರತ
Study : ನಿಮ್ಗೆ ಮಧುಮೇಹವಿದ್ರೂ, ಮೊಸರು ತಿನ್ನುತ್ತೀರಾ? ಹಾಗಾದ್ರೆ, ಈ ಮಿಸ್‌ ಮಾಡ್ದೇ ಈ ಸ್ಟೋರಿ ಓದಿ

ಡಿಜಿಟಲ್‌ ಡೆಸ್ಕ್:‌ ಈಗ ಬದಲಾಗುತ್ತಿರುವ ಜೀವನ ಶೈಲಿಯ ಪರಿಣಾಮವೋ ಏನೋ ಅನೇಕ ಜನರು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಈಗ ಬಹುತೇಕ ಎಲ್ಲ ವಯಸ್ಸಿನವ್ರಲ್ಲೂ ಕಾಣಿಸಿಕೊಳ್ತಿದೆ. ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆ ಮತ್ತು ಇಳಿಕೆಯಂತಹ ಸಮಸ್ಯೆಗಳ ಬಗ್ಗೆ ನಾವು ಆಗಾಗ್ಗೆ ಕೇಳುತ್ತೇವೆ. ಅಲ್ಲದೆ ಈ ರೋಗವನ್ನು ನಿಯಂತ್ರಿಸಲು ವಿವಿಧ ಚಿಕಿತ್ಸೆಗಳು ಲಭ್ಯವಿದೆ. ಕೆಲವು ಜನರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ನಿಯಂತ್ರಿಸಲು ಪೂರಕಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆದಾಗ್ಯೂ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಈ ರೋಗವನ್ನು ನಿಯಂತ್ರಿಸಲು ಸರಿಯಾದ ಮಾರ್ಗ ಕಂಡುಬಂದಿಲ್ಲ. ಇದರೊಂದಿಗೆ ನಾವು ರಕ್ತದಲ್ಲಿ ಸಕ್ಕರೆಯ ಶೇಕಡಾವಾರು ಪ್ರಮಾಣವನ್ನ ಕೇವಲ ಪೂರಕಗಳಿಂದ ನಿಯಂತ್ರಿಸಲು ಸಾಧ್ಯವಾಗಿದೆ.

ಇತ್ತೀಚಿನ ಅಧ್ಯಯನದ ಪ್ರಕಾರ, ಮೊಸರಿನಂತಹ ಪ್ರೋಬಯಾಟಿಕ್‌ಗಳು ಮಧುಮೇಹಿಗಳಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತೆ. ಇನ್ನದ್ರ ಅಪಾಯವನ್ನ ಕಡಿಮೆ ಮಾಡ್ಬೋದಲ್ಲದೇ ಮುಂತಾದ ಹಲವಾರು ಪ್ರಯೋಜನಗಳನ್ನ ಹೊಂದಿದೆ ಎಂದು ತಿಳಿಸಿದೆ.

ಸಕ್ಕರೆ ರೋಗಿಗಳು ತೆಗೆದುಕೊಳ್ಳುವ ಆಹಾರದಲ್ಲಿ ಸಾಕಷ್ಟು ಕಾಳಜಿ ವಹಿಸಬೇಕಾಗುತ್ತದೆ. ವಿಶೇಷವಾಗಿ ಅವರು ಸಿಹಿತಿಂಡಿಗಳಿಂದ ದೂರವಿರಬೇಕು. ಹಾಗೆಯೇ ಇತರ ಕೆಲವು ಆಹಾರಗಳಿಂದ ದೂರವಿರಬೇಕು. ಆದ್ರೆ, ಅವರು ಮೊಸರು ತೆಗೆದುಕೊಳ್ಳಬಹುದೇ? ಅಥವಾ ಇಲ್ಲವೇ? ಅನ್ನೋ ಪ್ರಶ್ನೆಗಳು ಹುಟ್ಟಿಕೊಳ್ಳುತ್ವೆ.

ನಿರ್ದಿಷ್ಟವಾಗಿ ಹೇಳುವುದಾದ್ರೆ, ತಿನ್ನುವ ಆಹಾರಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ಹೆಚ್ಚಿಸಬಹುದು. ಅದಕ್ಕಾಗಿಯೇ ಆಹಾರದ ಬಗ್ಗೆ ಅನೇಕ ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳಬೇಕಾಗುತ್ತೆ. ದಿನನಿತ್ಯ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿಯನ್ನು ಸೇವಿಸುವುದು ಅಪಾಯಕಾರಿ ಎಂದು ಕೂಡ ಹೇಳಲಾಗಿದೆ. ಆದಾಗ್ಯೂ, ಮೊಸರು ತಿನ್ನುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಇತ್ತೀಚಿನ ಅಧ್ಯಯನವು ಕಂಡುಹಿಡಿದಿದೆ.

ಮಧುಮೇಹಿಗಳು ಹೆಚ್ಚು ತರಕಾರಿಗಳು ಮತ್ತು ಸಲಾಡ್‌ಗಳನ್ನ ಸೇವಿಸಬೇಕು. ಗ್ರೀನ್ಸ್ ಮತ್ತು ಕಿತ್ತಳೆಗಳನ್ನು ತಿನ್ನುವುದರಿಂದ ಫೈಬರ್ ಮಾತ್ರವಲ್ಲ, ವಿಟಮಿನ್, ಮಿನರಲ್, ಆಯಂಟಿಆಕ್ಸಿಡೆಂಟ್ ಮತ್ತು ಫೈಟೊನ್ಯೂಟ್ರಿಯಂಟ್ ಕೂಡ ಸಿಗುತ್ತದೆ ಎಂದು ತಜ್ಞರು ಸೂಚಿಸುತ್ತಾರೆ. ದಿನಕ್ಕೆ ಎರಡು ಹಣ್ಣುಗಳನ್ನು ಸಣ್ಣ ಕಾರ್ಬೋಹೈಡ್ರೇಟ್‌ಗಳನ್ನು ನೀಡುವ ಉತ್ತಮ ತಿಂಡಿಯಾಗಿ ತೆಗೆದುಕೊಳ್ಳಬಹುದು.

ರಾಜ್ಯದ 56 ಮುನ್ಸಿಪಾಲ್ಟಿಗಳಿಗೆ ಮೀಸಲಾತಿ ಪ್ರಕಟಿಸಿ : ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ರಾಜ್ಯದ 56 ಮುನ್ಸಿಪಾಲ್ಟಿಗಳಿಗೆ ಮೀಸಲಾತಿ ಪ್ರಕಟಿಸಿ : ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ತಮಿಳುನಾಡು ಮಾಜಿ ಸಚಿವ ವೀರಮಣಿಗೆ ಸೇರಿದ 20 ಸ್ಥಳಗಳ ಮೇಲೆ ವಿಚಕ್ಷಣಾ ದಳ ದಾಳಿ : ಭಾರೀ ಬೆಲೆ ಬಾಳುವ ಚಿನ್ನ-ಬೆಳ್ಳಿ, ಆಸ್ತಿ ಜಪ್ತಿ

BIGG NEWS : ಮಾಜಿ ಶಾಸಕ 'ಮಾನಪ್ಪ ವಜ್ವಲ್' ಮಗನ ಪುಂಡಾಟ : ಉದ್ಯಮಿ ಮಗನ ಮೇಲೆ ಹಲ್ಲೆ ; ಸಿಸಿಟಿವಿಲ್ಲಿ ದೃಶ್ಯ ಸೆರೆ

Bruhath Covid19 Vaccine Mela : ಕೊರೋನಾ ಲಸಿಕೆ ಪಡೆಯೋ ನಿರೀಕ್ಷೆಯಲ್ಲಿರೋರೆ ಗಮನಿಸಿ : ನಾಳೆ ರಾಜ್ಯಾಧ್ಯಂತ ಬೃಹತ್ ಲಸಿಕಾ ಮೇಳ

YouTube : ಈ ಹೊಸ ʼFeatureʼ ಮೂಲಕ ಯಾವುದೇ ಭಾಷೆಯ ಕಾಮೆಂಟ್‌ಗಳನ್ನ ಕನ್ನಡದಲ್ಲೇ ಓದ್ಬೋದು

ಕುವೆಂಪು ವಿವಿ ವಿದ್ಯಾರ್ಥಿಗಳೇ ಗಮನಿಸಿ : ಪದವಿ ಪರೀಕ್ಷಾ ಶುಲ್ಕ ಪಾವತಿಗೆ ಸೆ.17 ಕೊನೆಯ ದಿನಾಂಕ

ಭಾರತೀಯ ಡ್ರೋನ್ ಉದ್ಯಮವು 2026 ರ ವೇಳೆಗೆ ಒಟ್ಟು 15,000 ಕೋಟಿ ವಹಿವಾಟು ನಡೆಸುತ್ತದೆ: ಜ್ಯೋತಿರಾದಿತ್ಯ ಸಿಂಧಿಯಾDailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top