Monday, 21 Sep, 11.33 am Kannada News Now

ಭಾರತ
ಸುಶಾಂತ್ ಸಿಂಗ್ ಪ್ರಕರಣ : ಅಂತಿಮ ಹಂತದಲ್ಲಿ ಸಿಬಿಐ ತನಿಖೆ, ಏಮ್ಸ್ ವೈದ್ಯಕೀಯ ಮಂಡಳಿ ಜೊತೆ ಸಭೆ

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಡೆಸುತ್ತಿರುವ ತನಿಖೆ ಕೊನೆಯ ಹಂತಕ್ಕೆ ಬಂದಿದ್ದು ಮಂಗಳವಾರ ಸಿಬಿಐ ಜೊತೆ ಏಮ್ಸ್ ವೈದ್ಯಕೀಯ ಮಂಡಳಿ ಸಭೆ ನಡೆಸಲಿದೆ.

ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಸಿಬಿಐ ಮೂಲಗಳ ಪ್ರಕಾರ, ಏಮ್ಸ್ ವಿಧಿವಿಜ್ಞಾನ ತಂಡವು ದಕ್ಷಿಣ ದೆಹಲಿಯ ಲೋಧಿ ರಸ್ತೆ ಬಳಿಯ ಕಚೇರಿಯಲ್ಲಿ ವಿಶೇಷ ತನಿಖಾ ದಳದ ಸದ್ಯರನ್ನು ಭೇಟಿಯಾಗಲಿದೆ.

ಸಿಬಿಐನ ವಿಶೇಷ ತನಿಖಾ ದಳ ಹಾಗೂ ಸಿಎಫ್​​ಎಸ್​ಎಲ್​ ತಮ್ಮ ತನಿಖಾ ವರದಿಯನ್ನು ಏಮ್ಸ್​​ನೊಂದಿಗೆ ಹಂಚಿಕೊಳ್ಳಲಿದೆ. ಈ ವರದಿಯ ಅಧ್ಯಯನ ನಡೆಸಿ, ಸುಶಾಂತ್ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಅಂತಿಮ ತೀರ್ಮಾನವನ್ನು ಪ್ರಕಟಿಸಲಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top