Dailyhunt Logo
  • Light mode
    Follow system
    Dark mode
    • Play Story
    • App Story
ಸ್ವಿಗ್ಗಿಗೆ ಹೋಟೆಲ್ ಮಾಲೀಕರಿಂದ ಬಿಗ್ ಶಾಕ್ : ಆ.15 ರ ನಂತರ ಬೆಂಗಳೂರಲ್ಲಿ ಫುಡ್ ಡೆಲಿವರಿ ಸ್ಥಗಿತಗೊಳಿಸಲು ನಿರ್ಧಾರ!

ಸ್ವಿಗ್ಗಿಗೆ ಹೋಟೆಲ್ ಮಾಲೀಕರಿಂದ ಬಿಗ್ ಶಾಕ್ : ಆ.15 ರ ನಂತರ ಬೆಂಗಳೂರಲ್ಲಿ ಫುಡ್ ಡೆಲಿವರಿ ಸ್ಥಗಿತಗೊಳಿಸಲು ನಿರ್ಧಾರ!

Kannada News Now 1 week ago

ಬೆಂಗಳೂರು: ಆನ್‌ಲೈನ್ ಫುಡ್ ಡೆಲಿವರಿ ದೈತ್ಯ 'ಸ್ವಿಗ್ಗಿ' (Swiggy) ಸಂಸ್ಥೆಗೆ ರಾಜಧಾನಿಯ ಹೋಟೆಲ್‌ಗಳ ಸಂಘಟನೆ ಬಿಗ್ ಶಾಕ್ ನೀಡಿದೆ. ಅಧಿಕ ಕಮಿಷನ್, ಪಾವತಿಯಲ್ಲಿ ಪಾರದರ್ಶಕತೆಯ ಕೊರತೆ ಹಾಗೂ ಅನಗತ್ಯ ಹಣ ಕಡಿತಗೊಳಿಸುತ್ತಿರುವುದನ್ನು ಖಂಡಿಸಿ ಆಗಸ್ಟ್ 15ರಿಂದ ಸ್ವಿಗ್ಗಿ ಮೂಲಕ ಆಹಾರ ಸರಬರಾಜು ಮಾಡುವುದನ್ನು ಪೂರ್ಣವಾಗಿ ಸ್ಥಗಿತಗೊಳಿಸಲು ಬೆಂಗಳೂರು ಹೋಟೆಲ್‌ಗಳ ಸಂಘ (BHA) ಸೇರಿದಂತೆ ವಿವಿಧ ಮಾಲೀಕರ ಸಂಘಟನೆಗಳು ಗಂಭೀರ ತೀರ್ಮಾನ ಕೈಗೊಂಡಿವೆ.

ಕಳೆದ 10 ತಿಂಗಳುಗಳಿಂದ ಸ್ವಿಗ್ಗಿ ಆಡಳಿತ ಮಂಡಳಿ ಜೊತೆ ನಡೆದ ಸಂಧಾನ ಮಾತುಕತೆಗಳು ಸಂಪೂರ್ಣ ವಿಫಲವಾದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಈ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ. ಹೋಟೆಲ್ ಉದ್ಯಮಿಗಳ ಅನುಮತಿಯಿಲ್ಲದೆ ಪ್ರಚಾರ ವೆಚ್ಚ, ಕ್ಲಿಕ್ ವೆಚ್ಚ, ಕಸ್ಟಮರ್ ಅಕ್ವಿಸಿಷನ್ (CPA) ಹಾಗೂ ಜಾಹೀರಾತು ಶುಲ್ಕಗಳ ಹೆಸರಿನಲ್ಲಿ ಭಾರೀ ಪ್ರಮಾಣದ ಹಣ ಕಡಿತಗೊಳಿಸಲಾಗುತ್ತಿದೆ ಎಂಬುದು ಹೋಟೆಲ್ ಸಂಘಟನೆಯ ಮುಖ್ಯ ಆರೋಪವಾಗಿದೆ.

ಈ ಕುರಿತು ಸುದ್ಧಿಗೋಷ್ಠಿಯಲ್ಲಿ ಕಿಡಿಕಾರಿದ ಬಿಎಚ್‌ಎ ಗೌರವಾಧ್ಯಕ್ಷ ಪಿ.ಸಿ. ರಾವ್, "ನಮಗೆ ಸ್ವಿಗ್ಗಿಯ ಸಾಮಾನ್ಯ ಸೇವಾ ಶುಲ್ಕ ನೀಡಲು ಯಾವುದೇ ಅಭ್ಯಂತರವಿಲ್ಲ. ಆದರೆ ಸೇವಾ ಶುಲ್ಕ, ಪೇಔಟ್ ಶುಲ್ಕ, ಮ್ಯಾಪ್-ಅಪ್ ಶುಲ್ಕ ಎಂದು ಹೇಳಿ, ಸುಮಾರು ₹1 ಲಕ್ಷ ಮೌಲ್ಯದ ಆರ್ಡರ್‌ಗೆ ಹೋಟೆಲ್ ಮಾಲೀಕರಿಗೆ ಕೇವಲ ₹40,000 ದಿಂದ ₹50,000 ಮಾತ್ರ ಕೈಗೆ ನೀಡಲಾಗುತ್ತಿದೆ" ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸಂಸ್ಥೆಗೆ 15 ದಿನಗಳ ಅಂತಿಮ ಗಡುವು ನೀಡಿರುವ ಸಂಘಟನೆಯು, ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಇನ್ನು ಅವಕಾಶವಿದೆ ಎಂದಿದೆ. "ಸ್ವಿಗ್ಗಿ ಸಂಸ್ಥೆಯು ಈ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿಕೊಂಡರೆ ಸೇವೆ ಮುಂದುವರಿಸುತ್ತೇವೆ, ಇಲ್ಲವಾದಲ್ಲಿ ಬಹಿಷ್ಕಾರ ಖಚಿತ" ಎಂದು ರಾವ್ ಸ್ಪಷ್ಟಪಡಿಸಿದ್ದಾರೆ. ಇನ್ನು ಈ ನಿರ್ಧಾರದಿಂದ ಆನ್‌ಲೈನ್ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದಾಗಿಯೂ ಸಂಘ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now