Kannada News Now

1.7M Followers

ತೈಲ ಬೆಲೆ ಏರಿಕೆ ಖಂಡಿಸಿ ಇಂದು `ಭಾರತ್ ಬಂದ್' : ಏನಿರುತ್ತೆ, ಏನಿರಲ್ಲ? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್

26 Feb 2021.07:42 AM

ನವದೆಹಲಿ: ಹೆಚ್ಚುತ್ತಿರುವ ಇಂಧನ ಬೆಲೆಗಳು, ಸರಕು ಮತ್ತು ಸೇವಾ ತೆರಿಗೆ, ಇ-ಬಿಲ್ ಇತ್ಯಾದಿಗಳನ್ನು ವಿರೋಧಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಶುಕ್ರವಾರ ಅಂದ್ರೆ ಇಂದು ಭಾರತ್ ಬಂದ್‌ಗೆ ಕರೆ ನೀಡಿದೆ. ಈ ನಡುವೆ ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಘ ಕೂಡ (ಎಐಟಿಡಬ್ಲ್ಯೂಎ) ಭಾರತ್ ಕರೆಗೆ ಬೆಂಬಲ ನೀಡಿದ್ದು ಇಂದು ಚಕ್ಕಾ ಜಾಮ್ ನಡೆಸಲಿದ್ದಾರೆ.

8 ಕೋಟಿ ವರ್ತಕರನ್ನು ಪ್ರತಿನಿಧಿಸುವ 40 ಸಾವಿರ ವರ್ತಕರ ಸಂಘಟನೆಗಳು ಬಂದ್ ಬೆಂಬಲಿಸಿರುವ ಹಿನ್ನಲೆಯಲ್ಲಿ ಬಹುತೇಕ ಅಂಗಡಿಗಳು ಪ್ರತಿಭಟನೆಗೆ ಬೆಂಬಲ ನೀಡುವ ಸಾಧ್ಯತೆ ಇದ್ದಾವೆ.

ಬಂದ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ

  • 40,000 ಕ್ಕೂ ಹೆಚ್ಚು ವ್ಯಾಪಾರಿಗಳ ಸಂಘಗಳು ಬಂದ್‌ನಲ್ಲಿ ಭಾಗವಹಿಸುತ್ತಿರುವುದರಿಂದ ದೇಶದಾದ್ಯಂತದ ಎಲ್ಲಾ ವಾಣಿಜ್ಯ ಮಾರುಕಟ್ಟೆಗಳು ಮುಚ್ಚಲ್ಪಡುತ್ತವೆ.
  • ಸಾಂಕೇತಿಕ ಪ್ರತಿಭಟನೆಯಾಗಿ ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ತಮ್ಮ ವಾಹನಗಳನ್ನು ನಿಲ್ಲಿಸುವಂತೆ ಸಾರಿಗೆ ಸಂಸ್ಥೆಗಳ ಸಂಘ (ಎಐಟಿಡಬ್ಲ್ಯೂಎ) ಎಲ್ಲಾ ಸಾರಿಗೆ ಕಂಪನಿಗಳಿಗೆ ಸೂಚಿಸಿರುವುದರಿಂದ ಖಾಸಗಿ ಸಾರಿಗೆಗೆ ತೊಂದರೆಯಾಗುವ ಸಾಧ್ಯತೆ ಇದೆ.
  • 1,500 ಸ್ಥಳಗಳಲ್ಲಿ ರಾಷ್ಟ್ರವ್ಯಾಪಿ ಧರಣಿ ನಡೆಯಲಿದೆ.
  • ಶುಕ್ರವಾರ ಅಂದ್ರೆ ಇದು 40 ಲಕ್ಷ ರಸ್ತೆಗಳು ರಸ್ತೆಯಿಂದ ಹೊರಗುಳಿಯಲಿವೆ.
  • ಅಖಿಲ ಭಾರತ ಮೋಟಾರ್ ಸಾರಿಗೆ ಕಾಂಗ್ರೆಸ್ (ಎಐಎಂಟಿಸಿ) ಮತ್ತು ಭೈಚರಾ ಆಲ್ ಇಂಡಿಯಾ ಟ್ರಕ್ ಆಪರೇಟರ್ ವೆಲ್ಫೇರ್ ಅಸೋಸಿಯೇಶನ್ (ಬೈಟೊವಾ) ಮುಷ್ಕರದಲ್ಲಿ ಭಾಗವಹಿಸುವುದಿಲ್ಲ ಎಂದು ವರದಿಗಳು ತಿಳಿಸಿವೆ.
  • ಅಂದ ಹಾಗೇ ನಾಳೆ ರಾಜ್ಯದಲ್ಲಿ ಎಲ್ಲಾ ಪ್ರಮುಖ ವರ್ತಕರ ಸಂಘಟನೆಗಳು ಬಂದ್ನಲ್ಲಿ ಪಾಲ್ಗೊಳ್ಳಲಿದ್ದಾವೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ, ಅಂಗಡಿ ಮುಂಗಟ್ಟುಗಳು ಬಂದ್ ಆಗಲಿ ಒಂದ ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದನ್ನು ಕೂಡ ಇಂದು ಮುಂದೂಡಿದರೆ ಒಳಿತು.

ಇಂದು ಏನಿರುತ್ತದೆ?

ಭಾರತ್ ಬಂದ್‌ದಿನ ಅಗತ್ಯ ವಸ್ತುಗಳಿಗೆ ವಿನಾಯಿತಿ ಇದೆ. ಆಸ್ಪತ್ರೆ, ಮೆಡಿಕಲ್ ಶಾಪ್, ದಿನಸಿ ಅಂಗಡಿಗಳು, ಹಾಲು ದೊರೆಯುತ್ತದೆ ಮತ್ತು ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ನಿರ್ಧಾರವನ್ನು ತೆಗೆದಕೊಳ್ಲಲಾಗುವುದು.

ಏನಿರಲ್ಲ?
ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ವಿರಳಿ ಇರಬಹುದು. ಡಿಸೇಲ್‌/ಪೆಟ್ರೋಲ್‌ ಬೆಲೆಯನ್ನು ಒಳಗೊಂಡತೆ ಇಂದು ಭಾರತ್ ಬಂದ್‌ ಇರುವುದರಿಂದ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆ ಉಂಟಾಗಬಹುದು.







Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags