ಚೆನ್ನೈ : ತಮಿಳು ಚಿತ್ರರಂಗದ ಹಿರಿಯ ನಟ ಆರ್ ಎಸ್ ಜಿ ಚೆಲ್ಲಾದುರೈ(84) ಅವರು ಇಂದು, ಹೃದಯಾಘಾತದಿಂದ ನಿಧನರಾಗಿದ್ದಾರೆ.
ಖಾಲಿವುಡ್ ನ ವಿಜಯ್ ಅಭಿನಯದ ಕತ್ತಿ, ತೇರಿ, ಧನುಷ್ ನಟನೆಯ ಮಾರಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಂತ ಹಿರಿಯ ನಟ ಚೆಲ್ಲಾದುರೈ ಅವರು, ನಿನ್ನೆ ಬಾತ್ ರೂಂ ನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು ಎನ್ನಲಾಗಿದೆ. ಇಂತಹ ನಟ ಇಂದು ಹೃದಯಾಘಾತದಿಂದ ಚೆನ್ನೈನ ಪೆರಿಯಾರ್ ನಗರದ ನಿವಾಸದಲ್ಲಿ ಅಸುನೀಗಿದ್ದಾರೆ.

