Dailyhunt
ತಮಿಳುನಾಡಿನಲ್ಲಿ ನ.15 ರವರೆಗೆ 'ಕೋವಿಡ್ ಲಾಕ್ ಡೌನ್' ವಿಸ್ತರಣೆ

ತಮಿಳುನಾಡಿನಲ್ಲಿ ನ.15 ರವರೆಗೆ 'ಕೋವಿಡ್ ಲಾಕ್ ಡೌನ್' ವಿಸ್ತರಣೆ

Kannada News Now 4 years ago

ತಮಿಳುನಾಡು : ತಮಿಳುನಾಡು ಸರ್ಕಾರ ಕೋವಿಡ್-19 ಲಾಕ್ ಡೌನ್ ಅನ್ನು ನವೆಂಬರ್ 15 ರವರೆಗೆ ವಿಸ್ತರಿಸಿದೆ ಎಂದು ಕೋವಿಡ್ ಪರಿಶೀಲನಾ ಸಭೆಯ ನಂತರ ಮುಖ್ಯಮಂತ್ರಿ ಎಂ. ಕರುಣಾನಿಧಿ ಸ್ಟಾಲಿನ್ ಹೇಳಿದರು

ಶನಿವಾರ, ತಮಿಳುನಾಡಿನಲ್ಲಿ 306 ಹೊಸ ಕೋವಿಡ್-19 ಪ್ರಕರಣಗಳು, 17 ಸಾವುಗಳು ಮತ್ತು 1,374 ಚೇತರಿಕೆಗಳು ವರದಿಯಾಗಿವೆ.

ಈ ಮೂಲಕ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು ಒಟ್ಟು 13,280 ಕ್ಕೆ ಏರಿದೆ. ಈ ಹಿನ್ನೆಲೆ ತಮಿಳುನಾಡು ಸರ್ಕಾರ ಕೋವಿಡ್-19 ಲಾಕ್ ಡೌನ್ ಅನ್ನು ನವೆಂಬರ್ 15 ರವರೆಗೆ ವಿಸ್ತರಿಸಿದೆ.

ಎಲ್ಲಾ ಶಾಲಾ ತರಗತಿಗಳನ್ನು ಪರ್ಯಾಯ ದಿನದ ಆಧಾರದ ಮೇಲೆ ತೆರೆಯಲು ಮತ್ತು ಕಾರ್ಯನಿರ್ವಹಿಸಲು ಅನುಮತಿನೀಡಲಾಗುವುದು.ಸಿನೆಮಾ ಹಾಲ್ ಗಳು, ಚಿತ್ರಮಂದಿರಗಳಲ್ಲಿ ನವೆಂಬರ್ 1 ರಿಂದ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತದೆ ಎಂದು ಕೋವಿಡ್ ಪರಿಶೀಲನಾ ಸಭೆಯ ನಂತರ ಮುಖ್ಯಮಂತ್ರಿ ಎಂ. ಕರುಣಾನಿಧಿ ಸ್ಟಾಲಿನ್ ಹೇಳಿದರು.



Dailyhunt
Disclaimer: This content has not been generated, created or edited by Dailyhunt. Publisher: Kannada News Now